Hubballi News : ಕಾಂಗ್ರೆಸ್ ಎಂಎಲ್ ಸಿ ಜಗದೀಶ್ ಶೆಟ್ಟರ್ ಗೆ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಟಿಕೆಟ್ ವಿಚಾರವಾಗಿ ಹೇಳಿಕೆಗೆ ಕುಟುಕಿದ್ದಾರೆ. ಬಿಜೆಪಿಯವರು ಕೆಲವು ಕಡೆ ಹಣ ಪಡೆದು ಟಿಕೆಟ್ ಕೊಟ್ಟಿದ್ದಾರೆ ಎಂಬ ಊಹಾಪೋಹಗಳಿದ್ದು, ಇದಕ್ಕೆ ಬಿಜೆಪಿಯವರೇ ಉತ್ತರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ರವಿವಾರ ಕಮಲ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಈ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಮಾತನಾಡಿ ಬಿಜೆಪಿಯಲ್ಲಿ ಟಿಕೇಟ್ ಮಾರಟ ಪದ್ದತಿಯಿಲ್ಲ. ಮಾಜಿ ಸಿಎಂ ಹೇಗೆ ಟಿಕೆಟ್ ತೆಗೆದುಕೊಂಡಿದ್ದರು, ಹೇಗೆ ಟಿಕೆಟ್ ಕೊಟ್ಟಿದ್ದರು ಅಂತ ಎಲ್ಲ ಗೊತ್ತಿದೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಎಂಎಲ್ಸಿ ಜಗದೀಶ್ ಶೆಟ್ಟರ್ಗೆ ಕುಟುಕಿದರು.
ಬಿಜೆಪಿಯಲ್ಲಿ ಲಿಂಗಾಯತ ಸಮುದಾಯದ ನಾಯಕರನ್ನು ಕಡೆಗಣಿಸಲಾಗುತ್ತಿದೆ ಎಂಬ ಜಗದೀಶ್ ಶೆಟ್ಟರ್ ಆರೋಪ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಬಿಜೆಪಿ ಅತಿ ಹೆಚ್ಚು ಬಾರಿ ಲಿಂಗಾಯತ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ಕೊಟ್ಟಿದೆ.
ಜಗದೀಶ್ ಶೆಟ್ಟರ್ ಅವರಿಗೆ 30 ವರ್ಷ ಬಿಜೆಪಿ ಎಲ್ಲ ಕೊಟ್ಟಿದೆ. ನಿಮಗೆ ಅನ್ಯಾಯವಾಗಿದ್ದರೇ, ತಾಕತ್ ಇದ್ದರೇ ನೀವು ಸರಿಮಾಡಿಕೊಳ್ಳಿ. ರಾಜಕೀಯಕ್ಕೆ ಸಮುದಾಯವನ್ನು ಎಳೆದು ತರಬಾರದು ಎಂದು ಹೇಳಿದರು.ಕಾಂಗ್ರೆಸ್ನಲ್ಲಿ ಜಗದೀಶ್ ಶೆಟ್ಟರ್ ಅವರನ್ನು ಗುರುತಿಸುತ್ತಿಲ್ಲ. ಅದಕ್ಕೆ ಅವರಿಗೆ ಕಷ್ಟ ಆಗಿದೆ. ಹೀಗಾಗಿ ಅವರು ಮಾಧ್ಯಮಗಳಿಗೆ ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದರು.
ಎಮ್ಎಲ್ಎ ಟಿಕೆಟ್ ಕೊಡಿಸುವುದಾಗಿ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಅಪುರ 5 ಕೋಟಿ ಹಣ ಪಡೆದು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಬಿಜೆಪಿಯಲ್ಲಿ ಟಿಕೆಟ್ ಮಾರಾಟ ಪದ್ಧತಿ ಇಲ್ಲ. ಚೈತ್ರಾ ಕುಂದಾಪುರ ಕೇಸ್ಗೂ ಬಿಜೆಪಿಗೂ ಯಾವ ಸಂಬಂಧ ಇಲ್ಲ. ಕೆಲವರು ತಮ್ಮ ಚಟಕ್ಕೆ ಈ ರೀತಿ ಮಾಡಿದರೇ ಅದಕ್ಕೆ ಬಿಜೆಪಿ ಉತ್ತರ ನೀಡುವುದಿಲ್ಲ. ಇದಕ್ಕೆ ಬಿಜೆಪಿ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
Priyank Kharge : ಆರ್‌ಎಸ್‌ಎಸ್ ತತ್ತ್ವ ಪ್ರಜಾಪ್ರಭುತ್ವ ವಿರೋಧಿ : ಸಚಿವ ಪ್ರಿಯಾಂಕ್ ಖರ್ಗೆ
Siddaramaiah : ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಆಗಲಿ : ಸಚಿವ ರಾಜಣ್ಣ