Spiritual: ದೇವಾನು ದೇವತೆಗಳಿಗೆ ಪ್ರಿಯವಾಗಿದ್ದ ಬಾಲಗಣೇಶ, ತನ್ನ ತಮಾಷೆಗಳ ಮೂಲಕ ಹಲವು ದೇವತೆಗಳ ತಾಳ್ಮೆ ಪರೀಕ್ಷೆ ಮಾಡುತ್ತಿದ್ದ. ಈ ಬಗ್ಗೆ ಒಂದು ಕಥೆ ಇದೆ. ವಿಷ್ಣುವಿನ ಶಂಖವನ್ನು ಮುಚ್ಚಿಟ್ಟು, ಗಣಪ ಶ್ರೀವಿಷ್ಣುವಿನ ತಾಳ್ಮೆ ಪರೀಕ್ಷೆ ಮಾಡಿದ್ದ. ಏನಿದು ಕಥೆ ಎಂದು ಕೇಳೋಣ ಬನ್ನಿ..
ಶ್ರೀವಿಷ್ಣುವಿನ ಬಳಿ ಶಂಖವಿತ್ತು. ಶ್ರೀವಿಷ್ಣು ಆ ಶಂಖವನ್ನು ಹಿಡಿದು, ಶೇಷನ ಮೇಲೆ ಆರಾಮವಾಗಿ ನಿದ್ರಿಸುತ್ತಿದ್ದ. ಆದರೆ ಒಮ್ಮೆ ಶ್ರೀವಿಷ್ಣುವಿನ ಶಂಖ ಕಳೆದು ಹೋಗುತ್ತದೆ. ಅದನ್ನು ಹುಡುಕಲು ಶ್ರೀವಿಷ್ಣು ತನ್ನೆಲ್ಲ ಶಕ್ತಿಯನ್ನು ಒಟ್ಟುಗೂಡಿಸುತ್ತಾನೆ. ಆದರೂ ಶಂಖ ಸಿಗುವುದಿಲ್ಲ.
ಆಗ ಕೈಲಾಸದಿಂದ ಶಂಖನಾದ ಕೇಳಿಸುತ್ತದೆ. ಈ ಶಬ್ಧ ಎಲ್ಲಿಂದ ಕೇಳಿಸುತ್ತಿದೆ ಎಂದು ನೋಡಿದರೆ, ಆ ಶಂಖನಾದ ಕೈಲಾಸದಿಂದ ಕೇಳಿ ಬರುತ್ತಿರುವುದು ಶ್ರೀವಿಷ್ಣುವಿಗೆ ಗೊತ್ತಾಯಿತು. ತನ್ನ ಶಂಖ ಕೈಲಾಸಕ್ಕೆ ಹೇಗೆ ಹೋಯಿತು ಎಂದು ನೋಡಿದಾಗ, ಅದನ್ನು ಗಣೇಶ ಕೊಂಡೊಯ್ದು, ಶಂಖ ಊದುತ್ತಿದ್ದಾನೆ ಎಂಬುದು ಗೊತ್ತಾಗುತ್ತದೆ.
ಆದರೆ ಈಗ ಗಣೇಶನಲ್ಲಿ ಹೋಗಿ ಶಂಖ ಕೊಡೆಂದು ಕೇಳಿದರೆ, ಗಣೇಶ ಶಂಖ ಕೊಡದೇ ಸತಾಯಿಸುತ್ತಾನೆ. ಹಾಗಾಗಿ ಉಪಾಯದ ಮೂಲಕ ಶಂಖ ತೆಗೆದುಕೊಳ್ಳಬೇಕು ಎಂದು ನಿರ್ಧರಿಸುತ್ತಾನೆ. ಹಾಗೆ ಇರುವ ಉತ್ತಮ ಉಪಾಯವೆಂದರೆ, ಗಣೇಶನ ಪೂಜೆ ಮಾಡುವುದರ ಮೂಲಕ, ಶಂಖವನ್ನು ಪಡೆಯುವುದು. ಹಾಗಾಗಿ ಪದ್ಧತಿಪೂರ್ವಕವಾಗಿ, ಗಣೇಶನಿಗೆ ಇಷ್ಟವಾಗುವಂತೆ ಶ್ರೀವಿಷ್ಣು ಪೂಜೆ ಮಾಡುತ್ತಾನೆ. ವಿಷ್ಣುವಿನ ಪೂಜೆಗೆ ಮೆಚ್ಚಿದ ಗಣೇಶ, ಶಂಖವನ್ನು ಮರಳಿಸುತ್ತಾನೆ.