Friday, November 22, 2024

Latest Posts

ಬಿಜೆಪಿ ವಿರುದ್ಧ ಬೀದಿಗಿಳಿದ ಮಹಿಳಾ ಕಾಂಗ್ರೆಸ್

- Advertisement -

ಕರ್ನಾಟಕ ಟಿವಿ : ಇಂದು ರಾಜ್ಯಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ ಪುಷ್ಟಾ ಅಮರ್ ನಾಥ್ ನೇತೃತ್ವದಲ್ಲಿ ಸಾವಿರಾರು ಮಹಿಳಾಕಾಂಗ್ರೆಸ್ ಕಾರ್ಯಕರ್ತೆಯರು ಮಲ್ಲೇಶ್ವರಂ ಬಿಜರೆಪಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದ್ರು.. ಡಿಕೆ ಶಿವಕುಮಾರ್ ವಿರುದ್ಧ ಬಿಜೆಪಿ ನಾಯಕರು ಸೇಡಿನ ರಾಜಕಾರಣ ಮಾಡ್ತಿದ್ದಾರೆ. ಇದು ಹೆಚ್ಚು ದಿನ ನಡೆಯೋದಿಲ್ಲ.. ಬಿಜೆಪಿ ಈ ಕೂಡಲೇ ದ್ವೇಷ ರಾಜಕಾರಣ ನಿಲ್ಲಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಭಾರೀ ಬೆಲೆ ತೆರಬೇಕಾಗುತ್ತದೆ ಅಂತ ಡಾ ಪುಷ್ಟಾ ಅಮರನಾಥ್ ಎಚ್ಚರಿಕೆ ನೀಡಿದ್ರು.

ಲಕ್ಷ್ಮಣ ಸವದಿ ವಿರುದ್ಧ ಡಾ. ಪುಷ್ಟಾ ಅಮರನಾಥ್ ವಾಗ್ದಾಳಿ

ಇನ್ನು ಇದೇ ವೇಳೆ ಸದನದಲ್ಲಿ ಬ್ಲೂ ಫಿಲಂ ನೋಡಿದವರನ್ನ ಡಿಸಿಎಂ ಮಾಡಿದ್ದಾರೆ.. ರಾಜ್ಯದ ಜನಅಂಥವರನ್ನ ಹೇಗೆ ಡಿಸಿಎಂ ಅಂಥ ಪ್ಪಿಕೊಳ್ಳೋದು. ಬಿಜೆಪಿ ನಾಯಕರಿಗೆ ಮಹಿಳೆಯರ ಮೇಲೆ ಗೌರವ ದ್ರೆ ಈ ಕೂಡಲೇ ಲಕ್ಷ್ಮಣ ಸವದಿಯನ್ನ ಡಿಸಿಎಂ ಸ್ಥಾನದಿಂದ ಕೆಳಗಿಳಿಸುವಂತೆ ಒತ್ತಾಯಿಸಿದ್ರು..

ನೆರೆಯಿಂದ ನೊಂದವರ ಪರ ನಿಲ್ಲುವಂತೆ ಸಿಎಂ ಗೆ ಒತ್ತಾಯ

ರಾಜ್ಯದಲ್ಲಿ ನೆರೆಯಿಂದ ಜನ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸಿಎಂ ಯಡಿಯೂರಪ್ಪ ಕೂಡಲೇ ನೆರೆ ಸಂತ್ರಸ್ತರಿಗೆ ನಿಲ್ಲಬೇಕು ಅಂತ ಒತ್ತಾಯಿಸಿದ್ರು. ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ಹಿನ್ನೆಲೆ ಮುನ್ನಚ್ಚರಿಕೆ ದೃಷ್ಟಿಯಿಂದ ಡಾ ಪುಷ್ಟಾ ಅಮರನಾಥ್ ಸೇರಿದಂತೆ ಮಹಿಳಾ ಕಾರ್ಯಕರ್ತರನ್ನ ವಶಕ್ಕೆ ಪಡೆದ್ರು..

- Advertisement -

Latest Posts

Don't Miss