Wednesday, November 29, 2023

Latest Posts

ದರ್ಶನ್ ಖಾರವಾಗಿ ಟಾಂಗ್ ಕೊಟ್ಟಿದ್ದು ಯಾರಿಗೆ..?

- Advertisement -

ಕರ್ನಾಟಕ ಟಿವಿ : ಚಾಲೆಂಜಿಂಗ್ ಸ್ಟಾರ್ ದರ್ಶನ್ ಯಾವಾಗ ಯಾರಿಗೆ ಚಾಲೆಂಜ್ ಮಾಡ್ತಾರೆ..? ಯಾರಿಗೆ ಟಾಂಗ್ ಕೊಡ್ತಾರೆ ಅಂತ ಗೊತ್ತಾಗೋದಿಲ್ಲ.. ಈಗ ದರ್ಶನ್ ತೂಗೂದೀಪ ಟ್ವೀಟರ್ ಅಕೌಂಟ್ ನಲ್ಲಿ ಮಾಡಿರೋ ಟ್ವೀಟ್ ಭಾರೀ ಚರ್ಚೆಗೆ ಗ್ರಾಸವಾಗಿದೆ..

ಕ್ಯಾಂಡಿಯಂತೆ ಸಿಹಿಯಾಗಿ, ನೀರಿನಂತೆ ತಣ್ಣಗೆ, ನರಕದಲ್ಲಿ ಕ್ರೂರಿಯಂತೆ ಅಥವಾ ಸೈನಿಕನಂತೆ ನಿಯತ್ತಾಗಿ ಇರ್ತೀನಿ.. ಆದ್ರೆ ಅದು ನೀನು ಹೇಗೆ ಇರ್ತೀಯಾ ಅನ್ನೋದರ ಮೇಲೆ ನಿರ್ಧಾರವಾಗುತ್ತೆ ಅಂತ ಟ್ವೀಟ್ ಮಾಡಿ ಟಾಂಗ್ ಕೊಟ್ಟಿದ್ದಾರೆ..

ಗಾಂಧಿನಗರದಲ್ಲಿ ಗುಸುಗುಸು ಕೇಳಿ ಬರ್ತಿರೋ ಪ್ರಕಾರ ಹಾಗೂ ಸೋಷಿಯಲ್ ಮೀಡಿಯಾ ಚರ್ಚೆ ನೋಡಿದ್ರೆ ಇದು ಕಿಚ್ಚ ಸುದೀಪ್ ಗೆ ದರ್ಶನ್ ಟಾಂಗ್ ನೀಡಿದ್ದಾರೆ ಅಂತ ಹೇಳಲಾಗ್ತಿದೆ.. ಕೆಲ ದಿನಗಳ ಹಿಂದೆಯಷ್ಟೇ ಸುದೀಪ್ ಮಾಡಿದ್ದ ಟ್ವೀಟ್ ಭಾರೀ ಸೌಂಡ್ ಮಾಡಿತ್ತು.. ಗಂಡಸ್ಥನ ತೋರಿಸಲು ಕತ್ತಲಾಗಬೇಕಿಲ್ಲ.. ಕುಡಿದ ಮೇಲೆ ಗಂಡಸಾಗಬೇಕಿಲ್ಲ ಅಂತ ಸುದೀಪ್ ಟ್ವೀಟ್ ಮಾಡಿದ್ರು.. ಆದ್ರೆ ಇದು ಯಾರಿಗೆ ಹೇಳಿದ್ದು ಅಂತ ಮಾತ್ರ ನೇರವಾಗಿ ಸುದೀಪ್ ಹೇಳಿರಲಿಲ್ಲ..

- Advertisement -

Latest Posts

Don't Miss