Monday, December 23, 2024

Latest Posts

Majestic ಚಿತ್ರಮಂದಿರದಲ್ಲಿ ರೀರಿಲೀಸ್ ವೈಭವ..!

- Advertisement -

2O ವರ್ಷಗಳ ನಂತರ ಮತ್ತೆ ಮೆಜೆಸ್ಟಿಕ್ ಬಿಗ್ ಸ್ಕ್ರೀನ್ ನಲ್ಲಿ ವಿಜೃಂಬಿಸ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ಫೆಬ್ರವರಿ 16ರ ತಮ್ಮ ಹುಟ್ಟುಹಬ್ಬಕ್ಕೆ ಅಭಿಮಾನಿಗಳನ್ನು ಭೇಟಿಯಾಗಿರಲಿಲ್ಲ ಆದರೆ ದರ್ಶನ್ ನಾಯಕನಾಗಿ ಅಭಿನಯಿಸಿದ ಮೊದಲ ಚಿತ್ರ ಮೆಜೆಸ್ಟಿಕ್ ಇವತ್ತು ಪ್ರಸನ್ನ ಚಿತ್ರಮಂದಿರಲ್ಲಿ ತೆರೆಕಂಡಿದ್ದು ಡಿ ಬಾಸ್ ಫ್ಯಾನ್ಸ್ (D Boss Fans) ಫುಲ್ ಥ್ರಿಲ್ಲಾಗಿದ್ದಾರೆ. ಪಿ ಎನ್ ಸತ್ಯ ನಿರ್ದೇಶನ (P N Satya Direction) ಮಾಡಿದ್ದ ಎಂ.ಜಿ ರಾಮಮೂರ್ತಿ ನಿರ್ಮಾಣ (Produced by MG Ramamurthy) ಮಾಡಿದ್ದ ಮೆಜೆಸ್ಟಿಕ್ ಹೊಸ ರೂಪದಲ್ಲಿ ತೆರೆಕಂಡಿದೆ. ಇತ್ತೀಚೆಗಷ್ಟೇ ಮೆಜೆಸ್ಟಿಕ್ 20ವರ್ಷಗಳ ಸಂಭ್ರಮಾಚರಣೆ ಮಾಡಿದ್ದ ಚಿತ್ರತಂಡ ಮೆಜೆಸ್ಟಿಕ್ ಹೊಸ ರೂಪದಲ್ಲಿ ಚಿತ್ರಪ್ರೆಮಿಗಳ ಮುಂದೆ ಬರುವ ಮಾಹಿತಿ ನೀಡಿದ್ದರು. ಇದರ ಜವಾಬ್ಧಾರಿಯನ್ನು ಮೆಜೆಸ್ಟಿಕ್ ಸಂಗೀತ ನೀಡಿದ್ದ ಸಾದುಕೋಕಿಲ ಪುತ್ರ ಸುರಾಗ್ ಮಾಡಿದ್ದರು. ಹಾಗೆ ನೋಡಿದ್ರೆ ಇಲ್ಲೀವರೆಗೂ ಡಾ.ರಾಜ್‌ಕುಮಾರ್ ಡಾ. ವಿಷ್ಣುವರ್ಧನ್‌ರ ಸಿನಿಮಾಗಳು ಮತ್ತು ಶಿವರಾಜ್ ಕುಮಾರ್ ಅಭಿನಯದ ಓಂ ಸಿನಿಮಾ ಮಾತ್ರ ರೀರಿಲೀಸ್ ಆಗಿದ್ದ ಉದಾಹರಣೆಗಳಿದ್ವು. ಈಗ ಡಿ ಬಾಸ್ ಆ ಪಟ್ಟಿಗೆ ಸೇರಿದ್ದಾರೆ. ಅಭಿಮಾನಿಗಳ ಪಾಲಿಗೆ ತಮ್ಮ ನೆಚ್ಚಿನ ನಟನ ಮೊದಲ ಸಿನಿಮಾವನ್ನು ಮತ್ತೆ ಬಿಗ್ ಸ್ಕ್ರೀನ್ ನಲ್ಲಿ ನೋಡುವ ಖುಷಿ ಹಬ್ಬವಾಗಿದೆ. ರೀರಿಲೀಸ್ ಆದ ಸಿನಿಮಾಗಳು ಹೌಸ್‌ಫುಲ್ ಪ್ರದರ್ಶನ ಕಾಣೋದು ಅಪರೂಪದಲ್ಲಿ ಅಪರೂಪ ಆದರೆ ದರ್ಶನ್‌ಗಿರೋ ಫ್ಯಾನ್‌ಬೇಸ್ ಆ ಲೆವೆಲ್‌ಗಿದೆ. ಇದೇ ಚಿತ್ರಮಂದಿರದ ಪ್ರದರ್ಶಕರು ೨೦ ವರ್ಷ ಹಿಂದೆ ಮೆಜೆಸ್ಟಿಕ್ ಸಿನಿಮಾ ರಿಲೀಸ್ ಮಾಡಿದ್ರೆ ಲಾಭ ಬರುತ್ತಾ ಅನ್ನೋ ಅನುಮಾನದಲ್ಲೇ ಚಿತ್ರ ರಿಲೀಸ್ ಮಾಡೋಕೆ ಅವಕಾಶ ಕೊಟ್ಟಿದ್ರು ಆದ್ರೆ ಈಗ ಅದೇ ಮೆಜೆಸ್ಟಿಕ್ ರೀರಲೀಸ್ ಆಗಿ ಅದೇ ಚಿತ್ರಮಂದಿರ ತುಂಬಿದೆ. ಅಂದು ದರ್ಶನ್ ಮಾತ್ರ ಆಗಿದ್ದ ನಟ ಈಗ ಡಿ ಬಾಸ್, ಚಾಲೆಂಜಿಂಗ್ ಸ್ಟಾರ್ ಆಗಿದ್ದಾರೆ.

- Advertisement -

Latest Posts

Don't Miss