Tuesday, May 28, 2024

Latest Posts

ಪತಿಯ ಬಗ್ಗೆ ನಗೆ ಚಟಾಕಿ ಹಾರಿಸಿದ ಜೋಶಿ ಪತ್ನಿ ಜ್ಯೋತಿ ಜೋಶಿ

- Advertisement -

Hubli News: ಹುಬ್ಬಳ್ಳಿ: ಮಗಳ ಹೆರಿಗೆಯಾದ್ರೂ ಆಕಡೆ ಕಾಳಜಿ ವಹಿಸಲಾಗಲಿಲ್ಲ. ಚುನಾವಣೆ ಮುಗಿದ ನಂತರ ಮೊಮ್ಮಕ್ಕಳೊಂದಿಗೆ ಆಟವಾಡೋಕೆ ಅವಕಾಶ ಸಿಕ್ಕಿದೆ ಎಂದು ಪ್ರಹ್ಲಾದ್ ಜೋಶಿ ಪತ್ನಿ ಜ್ಯೋತಿ ಅಭಿಪ್ರಾಯ ವ್ಯಕ್ತಪಡಿಸಿದರು.

ಮತದಾನ ಮುಗಿದ ನಂತರ ರಿಲ್ಯಾಕ್ಸ್ ಮೋಡ್ ನಲ್ಲಿರೋ ಜೋಶಿ ಕುಟುಂಬ ಮಾಧ್ಯಮದ ಜೊತೆಗೆ ಮಾತನಾಡಿ, ಕಳೆದ ಎರಡು ತಿಂಗಳಿನಿಂದಲೂ ಚುನಾವಣೆಯಲ್ಲಿ ಬಿಜಿಯಾಗಿದ್ದೆವು. ಇವತ್ತು ಆರಾಮಾಗಿ ಕುಳಿತಿದ್ದೇವೆ. ಫಲಿತಾಂಶ ಬರುವವರೆಗೆ ನಮ್ಮ ಯಜಮಾನರು ನಮ್ಮ ಜೊತೆ ಕಾಲ ಕಳೆಯುತ್ತಾರೆ ಅನ್ನೋ ವಿಶ್ವಾಸವಿದೆ. ಮಗಳು ಎಷ್ಟನೆ ಕ್ಲಾಸ್ ಇದಾಳೆ ಅಂತಾನೂ ಗೊತ್ತಿಲ್ಲ ಅಂತ ನಗೆ ಚಟಾಕಿ ಹಾರಿಸಿದರು.

ಮಗಳು 9 ಕ್ಲಾಸ್ ಮುಗಿಸಿ, 10ಕ್ಕೆ ಜಾಯಿನ್ ಆಗಿದ್ದಾಳೆ ಅಂತ ಜೋಶಿ ಸಮಜಾಯಿಷಿ ನೀಡಿದರು. ನಮ್ಮ ಮನೆಯವರು ಮಾಡಿದ ಕೆಲಸಗಳನ್ನು ಜನ ನೆನೆಸುತ್ತಿದ್ದಾರೆ. ಪ್ರತಿ ಹಳ್ಳಿಗೂ ಅಭಿವೃದ್ಧಿ ಕಾರ್ಯಗಳು ಮುಟ್ಟಿವೆ. ಎಲ್ಲಾ ಕಡೆಯೂ ಉತ್ತಮ ಮತದಾನವಾಗಿದೆ. ಮೂರು ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸುತ್ತೇವೆ ಎಂದು ಹುಬ್ಬಳ್ಳಿಯಲ್ಲಿ ಜ್ಯೋತಿ ಜೋಶಿ ಹೇಳಿದರು.

ಕುಮಾರಸ್ವಾಮಿ ಸುದ್ದಿಗೋಷ್ಠಿ: ಸರ್ಕಾರಕ್ಕೆ ಬೇಕಾಗಿರುವುದು ಬರೀ ಪ್ರಚಾರವೆಂದು ಆರೋಪ

Prajwal Pen drive case: ಒಂದು ಸಿದ್ದರಾಮಯ್ಯ ಇನ್ನೊಂದು ಶಿವಕುಮಾರ್ ಇನ್ವಿಸ್ಟಿಗೇಶನ್ ಟೀಂ: ಹೆಚ್ಡಿಕೆ

ನವೀನ್ ಗೌಡ ಮಾತನಾಡಿದ ಆಡಿಯೋ, ಜಮೀರ್ ಜೊತೆಗಿರುವ ಫೋಟೋ ರಿಲೀಸ್ ಮಾಡಿದ ಕುಮಾರಸ್ವಾಮಿ

- Advertisement -

Latest Posts

Don't Miss