Wednesday, May 29, 2024

Latest Posts

ಗೆಲ್ಲುವ ಭರವಸೆ ವ್ಯಕ್ತಪಡಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ: ರಿಲ್ಯಾಕ್ಸ್ ಮೂಡ್‌ನಲ್ಲಿ..!

- Advertisement -

Hubli News: ಹುಬ್ಬಳ್ಳಿ: ಚುನಾವಣೆ ಲೆಕ್ಕಾಚಾರಗಳು ಸ್ಪಷ್ಟವಾಗಿದೆ. ನನ್ನ ಕ್ಷೇತ್ರ ಸೇರಿದಂತೆ 14 ಸ್ಥಾನಗಳನ್ನು ನಾವು ಗೆಲ್ಲುತ್ತೇವೆ. ಐತಿಹಾಸಿಕ ಫಲಿತಾಂಶ ಬರಲಿದೆ‌ ಎಂದು ಪ್ರಹ್ಲಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.

ಚುನಾವಣೆ ಬಳಿಕ ರಿಲ್ಯಾಕ್ಸ್ ಮೂಡ್ ನಲ್ಲಿರುವ ಜೋಶಿ ಮಾಧ್ಯಮದ ಜೊತೆಗೆ ಮಾತನಾಡಿ,‌ ಜನತಾ ಜನಾರ್ದನ, ದೇವರ ಆಶೀರ್ವಾದದಿಂದ ಪ್ರತಿ ಬಾರಿ ಮತ ಹೆಚ್ಚಾಗುತ್ತಿದೆ. ಈ ಬಾರಿನೂ ಹೆಚ್ಚಾಗಿದೆ. ನಮಗಾಗಿ ನೀವು ಕಾಯ್ದು ಸದ್ಭಾವನೆಯಿಂದ ವರ್ತಿಸಿದ್ದೀರಿ ಎಂದು ಮಾಧ್ಯಮಗಳಿಗೆ ಧನ್ಯವಾದ ತಿಳಿಸಿದರು.

ಸುಧಿರ್ಘವಾಗಿ ಓಡಿದಾಗ ಧಣಿವಾಗುತ್ತದೆ. ನಿನ್ನೆ ಕೂಡ ಅನೇಕರನ್ನು ಭೇಟಿ ಮಾಡಿದೆ. ನಗು ನಗುತ್ತಲೇ ಚುನಾವಣೆ ಮುಗಿದಿದೆ. ಪ್ರಚಾರ ಮಾಡೋದಕ್ಕಿಂತ ಕಾಂಗ್ರೆಸ್ ಅಪಪ್ರಚಾರ ಮಾಡಿದ್ರು. ನೇರವಾಗಿ ಸೋಲಿಸಲಾಗದಾಗ ಈ ರೀತಿ ಮಾಡ್ತಾರೆ. ಕಾಂಗ್ರೆಸ್ ನವರು ಎಸ್ ಸಿ, ಎಸ್ ಟಿ ಮೀಸಲಾತಿ ರದ್ದು ಮಾಡ್ತೇವೆ ಅಂತಾ ಫೇಕ್ ವಿಡಿಯೋ ಬಿಟ್ಟರು. ಷಡ್ಯಂತ್ರ ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ, ಅದನ್ನು ಎದುರಿಸ್ತೇವೆ. ಷಡ್ಯಂತ್ರವನ್ನೂ ಜನ ಅರ್ಥ ಮಾಡಿಕೊಂಡಿದ್ದಾರೆ. ನಾನು ದೆಹಲಿಯಲ್ಲಿದ್ರೂ ಯಾರದ್ದು ಕರೆ ಅವೈಡ್ ಮಾಡಲ್ಲ. ಜನಕ್ಕೆ ನಾನೇನು ಅಂತಾ ಗೊತ್ತು, ಕೆಲಸಗಳನ್ನು ಜನ ನೆನಪಿಟ್ಟುಕೊಂಡಿದ್ದಾರೆ ಎಂದರು.

ಕೆಲಸ ಆಗಿಲ್ಲ ಅಂತಾ ದ್ವೇಷದಿಂದ ಹೇಳಿದ್ದಾರೆ. ನನಗೆ ಸಂಪೂರ್ಣ ವಿಶ್ವಾಸ ಇದೆ, ಜನ ನನ್ನ ಕೈ ಬಿಡಲ್ಲ. ಅಭಿವೃದ್ಧಿ ಚರ್ಚೆಗೆ ಕಾಂಗ್ರೆಸ್ ಬರಲಿಲ್ಲ. ಈ ಚುನಾವಣೆ ಅಭಿವೃದ್ಧಿ ಮೇಲೆ ನಡೆದ್ರೆ ಬಿಜೆಪಿ ಮುನ್ನಡೆಯಲ್ಲಿ ಬರುತ್ತೆ ಅಂತಾ ಅವರಿಗೆ ಗೊತ್ತಿತ್ತು. ಅವರ ಕಾಲದಲ್ಲಿ ಭ್ರಷ್ಟಾಚಾರ ನಡೀತ್ತಿತ್ತು, ನಮ್ಮ ಸಮಯದಲ್ಲಿ ನಯಾ ಪೈಸಾ ಭ್ರಷ್ಟಾಚಾರ ಇಲ್ಲಾ. ನಮ್ಮಲ್ಲಿ ದಲ್ಲಾಳಿಗಳಿಗೆ ಅವಕಾಶ ಇಲ್ಲದಂತ ಮಾಡಿದ್ವಿ.‌ರಾಜ್ಯ ಸರ್ಕಾರ ಸರಿಯಾಗಿ ನಿಬ್ಬಾಯಿಸಿದ್ರೆ ಎಲ್ಲೂ ವಿದ್ಯುತ್ ಕೊರತೆ ಆಗಲ್ಲ. ಅವರು ಅವರ ಪಕ್ಷದ ನಾಯಕರು ಕಳೆದ ಬಾರಿ ಅದನ್ನೇ ಹೇಳಿದ್ರು. ಸಿದ್ದರಾಮಯ್ಯ ನರೇಂದ್ರ ಮೋದಿಗೆ ಅತ್ಯಂತ ಕೀಳು ಮಟ್ಟದಲ್ಲಿ ಮಾತನಾಡಿದ್ರು. 19ರಲ್ಲಿ ಜೆಡಿಎಸ್ ಕಾಂಗ್ರೆಸ್ ಒಟ್ಟಿಗೆ ಸ್ಪರ್ಧೆ ಮಾಡಿ ಎಲ್ಲವೂ ನಮ್ದೇ ಅಂದ್ರು. ಏನಾಯ್ತು ಹೆಸರಿಲ್ಲದಂತೆ ಆಯ್ತು ಎಂದು ಅವರು ಲೇವಡಿ ಮಾಡಿದರು.

ಕುಮಾರಸ್ವಾಮಿ ಸುದ್ದಿಗೋಷ್ಠಿ: ಸರ್ಕಾರಕ್ಕೆ ಬೇಕಾಗಿರುವುದು ಬರೀ ಪ್ರಚಾರವೆಂದು ಆರೋಪ

Prajwal Pen drive case: ಒಂದು ಸಿದ್ದರಾಮಯ್ಯ ಇನ್ನೊಂದು ಶಿವಕುಮಾರ್ ಇನ್ವಿಸ್ಟಿಗೇಶನ್ ಟೀಂ: ಹೆಚ್ಡಿಕೆ

ನವೀನ್ ಗೌಡ ಮಾತನಾಡಿದ ಆಡಿಯೋ, ಜಮೀರ್ ಜೊತೆಗಿರುವ ಫೋಟೋ ರಿಲೀಸ್ ಮಾಡಿದ ಕುಮಾರಸ್ವಾಮಿ

- Advertisement -

Latest Posts

Don't Miss