National News: ದೆಹಲಿಯಲ್ಲಿ ಮೆಟ್ರೋ ನಿಲ್ದಾಣದ್ಲಲಿ ರಾಲು ಬರುವ ವೇಳೆ ವ್ಯಕ್ತಿಯೋರ್ವ ರೈಲಿನ ಮುಂದೆ ಜಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ದೆಹಲಿಯ ಉದ್ಯೋಗ್ ಭವನ್ ಮೆಟ್ರೋ ನಿಲ್ದಾಣದ ಮುಂದೆ ಈ ಘಟನೆ ನಡೆದಿದ್ದು, ಘಟನೆ ಬಳಿಕ ಅರ್ಧ ಗಂಟೆ ಮೆಟ್ರೋ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇನ್ನು ಈ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಲು ಕಾರಣವೇನು ಎಂದರೆ, ಈತ ಕ್ಯಾನ್ಸ್‌ಗೆ ಒಳಗಾಗಿದ್ದ. ಅದೇ ಖಿನ್ನತೆಯಿಂದ ಬಳಲಿ, ಆರ್ಥಿಕ ಪರಿಸ್ಥತಿಯೂ ಸರಿ ಇಲ್ಲದ ಕಾರಣ, ಆತ್ಮಹ್ತೆಯೆಗೆ ಶರಣಾಗಿದ್ದಾನೆ.
ಮೃತ ವ್ಯಕ್ತಿ 39 ವರ್ಷ ವಯಸ್ಸಿನವನಾಗಿದ್ದಾನೆ. ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ, ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ ಸಾವಿಗೂ ಮುನ್ನ, ಯಾವೂದೇ ಪತ್ನ ಬರೆದಿಲ್ಲವೆಂದು ಪೊಲೀಸರು ಮಾಧ್ಯಮಕ್ಕೆ ತಿಳಿದ್ದಾರೆ. ಇದಕ್ಕೂ ಮುನ್ನ ಪೊಲೀಸರು ಸಿಸಿಟಿವಿ ಕ್ಯಾಮೆರಾ ಚೆಕ್ ಮಾಡಿದ್ದು, ಮೆಟ್ರೋ ಬಳಿ ಬಂದ ವ್ಯಕ್ತಿ ಸ್ವಲ್ಪ ಹೊತ್ತು ಏನೋ ಆಲೋಚನೆ ಮಾಡಿ, ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಈ ಬಗ್ಗೆ ಮಾತನಾಡಿರುವ ಪತ್ನಿ, ನನ್ನ ಪತಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅವರು ಇತ್ತೀಚೆಗೆ ಕೆಲಸ ಮಾಡಲಾಗದ ಕಾರಣ, ಕೆಲಸವೂ ಬಿಟ್ಟಿದ್ದರು. ಆರ್ಥಿಕ ಪರಿಸ್ಥಿತಿಯೂ ಸರಿಯಾಗಿ ಇರಲಿಲ್ಲ. ಈ ಎಲ್ಲ ಸಮಸ್ಯೆಯಿಂದ ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಿದ್ದಾಳೆ.