ಮುಂಬೈನ ಬಾಂದ್ರಾ ರೈಲು ನಿಲ್ದಾಣದಲ್ಲಿ, ಚಲಿಸುತ್ತಿರುವ ರೈಲು ಹತ್ತಲು ಹೋಗಿ, ವ್ಯಕ್ತಿಯೊಬ್ಬರು ಕಾಲು ಜಾರಿ ಬೀಳುತ್ತಿದ್ದರು. ಆದ್ರೆ ಅಲ್ಲೇ ಇದ್ದ ರೈಲ್ವೆ ಪ್ರೊಟೆಕ್ಷನ್ ಫೋರ್ಸ್‌ನ ಪೊಲೀಸ್ ಒಬ್ಬರು ಬಂದು ಆ ವ್ಯಕ್ತಿಯ ರಕ್ಷಣೆ ಮಾಡಿದ್ದಾರೆ.
ಓರ್ವ ವ್ಯಕ್ತಿ ಭಾರವಾದ ಸೂಟ್‌ಕೇಸ್ ಹಿಡಿದುಕೊಂಡು, ಚಲಿಸುತ್ತಿರುವ ರೈಲಿಗೆ ಹತ್ತಲು ಪ್ರಯತ್ನಿಸಿದ್ದಾರೆ. ಆ ವ್ಯಕ್ತಿ ಓಡಿ ಬರುವ ಭರವನ್ನು ಕಂಡೇ, ಮೊದಲೇ ಹೀಗಾಗಬಹುದು ಎಂದು ತಿಳಿದಿದ್ದ, ಅಲ್ಲೇ ಇದ್ದಿದ್ದ ರೈಲ್ವೇ ಪೊಲೀಸರಾದ ಸುಶೀಲ್ ಕುಮಾರ್, ವ್ಯಕ್ತಿಯನ್ನ ಬೀಳುವುದರಿಂದ ತಪ್ಪಿಸಿದ್ದಾರೆ. ಈ ಮೂಲಕ ಓರ್ವ ವ್ಯಕ್ತಿಯ ಜೀವ ಉಳಿಸಿದ್ದಾರೆ.
ರೈಲ್ವೆ ಇಲಾಖೆಗೆ ಸಂಬಂಧಿಸಿದ ಟ್ವಿಟರ್ ಖಾತೆಯಲ್ಲಿ ಈ ವೀಡಿಯೋ ಅಪ್ಲೋಡ್ ಮಾಡಲಾಗಿದೆ. ಅಲ್ಲದೇ, ಹೀಗೆ ಚಲಿಸುತ್ತಿರುವ ರೈಲನ್ನು ಹತ್ತುವ ಧೈರ್ಯ ಯಾರೂ ಮಾಡಬೇಡಿ. ಇದರಿಂದ ಪ್ರಾಣಾಪಾಯವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಯಾಕಂದ್ರೆ ಹೀಗೆ ಚಲಿಸುತ್ತಿರುವ ರೈಲನ್ನು ಹತ್ತಲು ಹೋಗಿ, ಎಷ್ಟೋ ಜನ ಪ್ರಾಣ ಕಳೆದುಕೊಂಡಿದ್ದಾರೆ. ಮತ್ತು ಕೈ ಕಾಲನ್ನ ಕೂಡ ಮುರಿದುಕೊಂಡಿದ್ದಾರೆ. ಹಾಗಾಗಿ ಚಲಿಸುತ್ತಿರುವ ರೈಲನ್ನು ಓಡಿ ಬಂದು ಹತ್ತುವ ಪ್ರಯತ್ನ ಮಾಡಬೇಡಿ ಎಂದು ಹೇಳಿದ್ದಾರೆ.
Promptness & presence of mind of RPF Constable Sushil Kumar saved life of passenger who was trying to board in running Train no. 12471 Swaraj Express at BDTS, slipped & pulled him away from the moving train.
Passengers are requested not to board/alight a running train. pic.twitter.com/j6YcsvT4dM
— Western Railway (@WesternRly) March 21, 2023

