Mandya News: ಇತ್ತೀಚಿನ ದಿನಗಳಲ್ಲಿ ಸಾವು ಬರೀ ವಯಸ್ಸಾದವರಿಗಲ್ಲ, ಬದಲಾಗಿ ಯಾರಿಗೆ ಬೇಕಾದರೂ ಬರಬಹುದು ಅಂತಾ ದಿನೇ ದಿನೇ ಸಾಬೀತಗುತ್ತಿದೆ. ಆದರೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋದ ಮಗು, ಮನೆಗೆ ಬರುವಾಗ ಶವವಾಗುತ್ತದೆ ಅಂತಾ ನಾವು ಊಹಿಸಿಕ“ಳ್ಳಲು ಸಾಧ್ಯವಿಲ್ಲ. ಆದರೆ ಅಂಥ ಘ’’ನೆಯ“ಂದು ಮಂಡ್ಯದಲ್ಲಿ ನಡೆದಿದೆ.
ಹೆಲ್ಮೆಟ್ ತಪಾಸಣೆಗಾಗಿ ಪೋಲೀಸರು ಬೈಕ್ ಅಡ್ಡಗಟ್ಟುತ್ತಿದ್ದಂತೆ, ಬೈಕ್ ಸವಾರ ಬಿದ್ದಿದ್ದು, ಅವನ ಜತೆ ಅವನ ಬೈಕ್ ಮೇಲಿದ್ದ ಮಗುವೂ ಬಿದ್ದಿದ್ದು, ತಲೆಗೆ ಪೆಟ್ಟಾಗಿ, ಸ್ಥಳದಲ್ಲೇ ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮದ್ದೂರು ತಾಲೂಕಿನ ಗ“ರವನಹಳ್ಳಿ ಗ್ರಾಮದ ಅಶೋಕ್ ಮತ್ತು ವಾಣಿ ದಂಪತಿಯ ಮೂರುವರೆ ವರ್ಷದ ಮಗು ಹೃತಿಕ್ಷಾಳಿಗೆ ನಾಯಿ ಕಚ್ಚಿದೆ ಎಂದು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದ“ಯ್ಯುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ಹೆಲ್ಮೆಟ್ ಪರಿಶೀಲನೆ ವೇಳೆ ಬೈಕ್‌ನಿಂದ ಆಯತಪ್ಪಿ ಅಶೋಕ್ ಮತ್ತು ಹೃತೀಕ್ಷಾ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಮಗುವಿನ ತಲೆಗೆ ಪೆಟ್ಟು ಬಿದ್ದು, ಮಗು ಸ್ಥಳದಲ್ಲೇ ಸಾವನ್ನಪ್ಪಿದೆ.
ಮಂಡ್ಯದ ನಂದ ಸರ್ಕಲ್ ಬಳಿ ವಾಹನ ತಪಾಸಣೆಗಾಗಿ ನಿಂತಿದ್ದ ಪೋಲೀಸರು ಏಕಾಏಕಿ ಇವರ ಬೈಕ್ ನಿಲ್ಲಿಸಿದ್ದಕ್ಕೆ, ಆಯ ತಪ್ಪಿ ಈ ಘಟನೆ ನಡೆದಿದೆ. ಹೀಗಾಗಿ ಸ್ಥಳೀಯರು ಪೋಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ, ಮಗುವಿನ ಸಾವಿಗಾಗಿ ಬೇಸರ ವ್ಯಕ್ತಪಡಿಸಿದ್ದಾರೆ.
ಘಟನೆ ಸಂಬಂಧ ಸಂಚಾರಿ ಠಾಣೆಯ ಮೂವರು ASIಗಳನ್ನು ಅಮಾನತು ಮಾಡಲಾಗಿ ಆದೇಶ ಹ“ರಡಿಸಲಾಗಿದೆ. ಎಎಸ್‌ಐಗಳಾದ ಜಯರಾಮ್, ನಾಗರಾಜ್, ಮತ್ತು ಗುರುದೇವ್ ಎಂಬುವವರನ್ನು ಅಮಾನತುಗ“ಳಿಸಲಾಗಿದೆ ಎಂದು ಮಂಡ್ಯ ಜಿಲ್ಲೆಯ ಎಸ್ಪಿ ಮಲ್ಲಿಕಾರ್ಜುನ್ ಬಾಾಲದಂಡೆ ಮಾಹಿತಿ ನೀಡಿದ್ದಾರೆ.
ಒಟ್ಟಾರೆಯಾಗಿ ಪೋಲೀಸರು ಸಸ್ಪೆಂಡ್ ಆಗಲಿ, ಏನೇ ಆಗಲಿ, ಒಂದು ದಂಡಕ್ಕಾಗಿ ಒಂದು ಜೀವವನ್ನೇ ಬಲಿ ಪಡೆದಿದ್ದು ಎಷ್’’ು ಸರಿ..? ಆ ಮಗುವನ್ನು ವಾಪಸ್ ತರಲು ಸಾಧ್ಯವೇ ಅಂತಾ ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಇನ್ನು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕೂಡ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ಸಂತಾಪ ಸೂಚಿಸಿದ್ದಾರೆ.
ಮಂಡ್ಯದಲ್ಲಿ ಸಂಭವಿಸಿರುವ ಮುಗ್ಧ ಬಾಲಕಿಯ ದುರ್ಮರಣ ನನಗೆ ತೀವ್ರ ದುಃಖವುಂಟು ಮಾಡಿದೆ. ನಾಯಿ ಕಡಿತದ ಹಿನ್ನಲೆಯಲ್ಲಿ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ತನ್ನ ತಂದೆ-ತಾಯಿ ಜತೆಯಲ್ಲಿ ದ್ವಿಚಕ್ರ ವಾಹನದ ಮೇಲೆ ತೆರಳುತ್ತಿದ್ದ ಹಸುಕಂದ ಹೀಗೆ ಅಕಾಲ ಮರಣಕ್ಕೆ ತುತ್ತಾಗಿರುವುದು ನನ್ನ ಮನಸ್ಸನ್ನು ಕಲಕಿದೆ.
ಸಂಚಾರಿ ಪೊಲೀಸರು ಕರ್ತವ್ಯದಲ್ಲಿದ್ದಾಗ ಅತ್ಯಂತ ಸೂಕ್ಷ್ಮವಾಗಿ ವರ್ತಿಸಬೇಕು. ವಾಹನಗಳಲ್ಲಿ ಪ್ರಯಾಣಿಸುವ ಸಾರ್ವಜನಿಕರನ್ನು ಏಕಾಏಕಿ ರಸ್ತೆಯಲ್ಲಿ ತಡೆದು ನಿಲ್ಲಿಸುವ ಅಥವಾ ಅವರಿಗೆ ಗಾಬರಿ ಉಂಟು ಮಾಡುವ ರೀತಿಯಲ್ಲಿ ವರ್ತಿಸಬಾರದು. ಸ್ವಲ್ಪ ಎಚ್ಚರ ವಹಿಸಿದ್ದಿದ್ದರೆ ಮಗುವಿನ ಸಾವನ್ನು ತಪ್ಪಿಸಬಹುದಿತ್ತು. ಭವಿಷ್ಯದಲ್ಲಿ ಇಂಥ ಅಚಾತುರ್ಯದ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು.
ಸಾರ್ವಜನಿಕರು ಕೂಡ ಸಂಚಾರ ನಿಯಮಗಳನ್ನು ಪಾಲಿಸಬೇಕು. ತಮ್ಮ ಜೀವದ ರಕ್ಷಣೆಗಾಗಿಯೇ ನಿಯಮಗಳನ್ನು ಮೀರಬಾರದು ಎಂಬುದು ನನ್ನ ವಿನಮ್ರ ಮನವಿ. ಈ ನಿಟ್ಟಿನಲ್ಲಿ ಪೊಲೀಸರು ಇನ್ನೂ ಹೆಚ್ಚಿನ ಜಾಗೃತಿಯನ್ನು ಮೂಡಿಸಬೇಕು. ಮೃತಪಟ್ಟ ಮಗುವಿನ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಮಾಜಿ ಸಿಎಂ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.