Wednesday, October 29, 2025

Latest Posts

Mandya News: 46 ವರ್ಷ ದಾಂಪತ್ಯ ಜೀವನ ನಡೆಸಿ, ಸಾವಿನಲ್ಲೂ ಒಂದಾದ ಪತಿ-ಪತ್ನಿ

- Advertisement -

Mandya News: ಮಕ್ಕಳು ಎಷ್ಟೇ ಶ್ರೀಮಂತರಾಗಿರಲಿ, ಎಷ್ಟೇ ಕಾಳಜಿ ಮಾಡುವವರೇ ಆಗಿರಲಿ, ವಯಸ್ಸಾದ ಬಳಿಕ ಪತಿಯನ್ನು ಬಿಟ್ಟು ಪತ್ನಿ ಮತ್ತು ಪತ್ನಿಯನ್ನು ಅಗಲಿ ಪತಿ ಇರಲು ತುಂಬಾ ಕಷ್ಟ. ಆದರೆ ಪುಣ್ಯ ಸಂಪಾದನೆ ಇದ್ದರೆ, ಸಾವಿನಲ್ಲೂ ಪತಿ-ಪತ್ನಿ ಒಂದಾಗುತ್ತಾರೆಂದು ಹಿರಿಯರು ಹೇಳುತ್ತಾರೆ.

ಇಂಥದ್ದೇ ಘಟನೆ ಮಂಡ್ಯದಲ್ಲಿ ನಡೆದಿದೆ. ಒಂದೇ ದಿನ ಪತಿ-ಪತ್ನಿ ಇಬ್ಬರೂ ಸಾವಿಗೀಡಾಗಿದ್ದು, ಸಾವಿನಲ್ಲೂ ಒಂದಾಗಿದ್ದಾರೆ. ಮಂಡ್ಯದ KR.ಪೇಟೆಯ ಬೂಕನಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬೂಕನಕೆರೆಯ ಗೌರಮ್ಮ(50),ನಿಂಗರಾಜ
ನಾಯ್ಕ (65)ಮೃತ ದಂಪತಿಯಾಗಿದ್ದಾರೆ.

ಅನಾರೋಗ್ಯಕ್ಕೀಡಾಗಿದ್ದ ಗೌರಮ್ಮ ನಿನ್ನೆ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ. ಪತ್ನಿಯ ಅಂತ್ಯಸಂಸ್ಕಾರದಲ್ಲಿ ತೊಡಗಿದ್ದ ಪತಿ ನಿಂಗರಾಜ ಅವರಿಗೆ ಹೃದಯಾಘಾತವಾಗಿದೆ. ಆದರೆ ಚಿಕಿತ್ಸೆ ನೀಡಿದರೂ, ಚಿಕಿತ್ಸೆ ಫಲಿಸದೇ, ನಿಂಗರಾಜ ಕೂಡ ಸಾವಿಗೀಡಾಗಿದ್ದಾರೆ. 46 ವರ್ಷ ದಾಂಪತ್ಯ ಜೀವನ ನಡೆಸಿರುವ ಗೌರಮ್ಮ ಮತ್ತು ನಿಂಗರಾಜು ಸಾವಿನಲ್ಲೂ ಒಂದಾಗಿದ್ದಾರೆ. ಆದರೆ ಇವರ ಇಬ್ಬರು ಪುತ್ರರು ಮಾತ್ರ ತಂದೆ ತಾಯಿಯನ್ನು ಕಳೆದುಕೊಂಡು ತಬ್ಬಲಿಗಳಾಗಿದ್ದಾರೆ. ದಂಪತಿ ಸಾವಿನಿಂದ ಕುಟುಂಬದಲ್ಲಿ ಸೂತಕದ ಛಾಯೆ ಆವರಿಸಿದೆ.

- Advertisement -

Latest Posts

Don't Miss