Sunday, February 9, 2025

Latest Posts

Mandya News: ಮಿಸೆಸ್ ಇಂಡಿಯಾ 2024 ಕಿರೀಟ್ ಗೆದ್ದ ಮದ್ದೂರಿನ ಸೊಸೆ

- Advertisement -

Mandya News: ಮಿಸೆಸ್ ಇಂಡಿಯಾ ಪ್ರೈಡ್ ಆಫ್ ನೇಷನ್- 2024ರ ಕಿರೀಟವನ್ನು ಕನ್ನಡತಿ, ಮದ್ದೂರಿನ ಸೊಸೆ ಡಾ.ಪ್ರಿಯಾ ಗೋಸ್ವಾಮಿ ತಮ್ಮದಾಗಿಸಿಕೊಂಡಿದ್ದಾರೆ.

ಪ್ರಿಯಾ ಮಂಡ್ಯ ಜಿಲ್ಲೆಯ ಮದ್ದೂರಿನ ಸೊಸೆ. ಭಾರತೀಯ ಸೇನೆಯಲ್ಲಿರುವ ಮದ್ದೂರಿನವರಾಗಿರುವ ಕರ್ನಲ್ ಸಂಜೀತ್ ಪ್ರಿಯಾ ಅವರ ಪತಿಯಾಗಿದ್ದಾರೆ. ಪಶು ವೈದ್ಯೆಯಾಗಿರುವ ಪ್ರಿಯಾ, ಮಿಸೆಸ್ ಇಂಡಿಯಾ ಪ್ರೈಡ್ ಆಫ್ ನೇಷನ್- 2024 ಸ್ಪರ್ಧೆಯಲ್ಲಿ ಭಾಗವಹಿಸಿ, ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಪ್ರಿಯಾಾ ಗೋಸ್ವಾಮಿ ಮೂಲತಃ ಪಂಜಾಬಿನವರು. ಬೆಳೆದಿದ್ದು ಗೋವಾದಲ್ಲಿ. 20 ವರ್ಷದ ಹಿಂದೆ ಸಂಜೀತ್ ಅವರನ್ನು ಪ್ರಿಯಾ ವರಿಸಿದ್ದು, ಸದ್ಯ ಮದ್ದೂರಿನ ಸೊಸೆಯಾಗಿದ್ದಾರೆ. ಇವರಿಗೆ ಧ್ರುವಿ ಸಂಜೀತ್ (16), ಶೌರ್ಯಗೌಡ(9) ಎಂಬ ಮಕ್ಕಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ಪ್ರಿಯಾ, ಪತಿ ಕರ್ನಲ್ ಸಂಜೀತ್, ಮಾವ ಸಿದ್ದೇಗೌಡ, ಅತ್ತೆ ಸುಮಿತ್ರಮ್ಮ, ನಾದಿನಿ ಸುಪ್ರಿತಾ ಅವರ ಪ್ರೋತ್ಸಾಹವೇ, ನನ್ನ ಗೆಲುವಿಗೆ ಕಾರಣವೆಂದು ಹೇಳಿದ್ದಾರೆ. ಈ ಸ್ಪರ್ಧೆಯ ನಿರ್ದೇಶಕರಾಗಿದ್ದ, ಭಾರ್ಕಾ ನಂಗಿಯಾ ಮತ್ತು ಅಭಿಷೇಕ್ ಎಂಬುವವರು ಕೂಡ ನನಗೆ ಹಲವು ಸಲಹೆಗಳನ್ನು ನೀಡಿದರು ಎಂದು ಪ್ರಿಯಾ ಹೇಳಿದ್ದಾರೆ.

- Advertisement -

Latest Posts

Don't Miss