Sunday, December 22, 2024

Latest Posts

ಮಂಗಳೂರು- ಕಾಸರಗೋಡು ಬಸ್ ಸಂಚಾರ ನಾಲ್ಕು ತಿಂಗಳ ಬಳಿಕ ಆರಂಭ

- Advertisement -

ಮಂಗಳೂರು: ಕಳೆದ ನಾಲ್ಕು ತಿಂಗಳಲ್ಲಿಯೇ ಮೊದಲ ಬಾರಿಗೆ ದಕ್ಷಿಣ ಕನ್ನಡ ಮತ್ತು ಕೇರಳದ ಕಾಸರಗೋಡು ಜಿಲ್ಲೆಗಳ ನಡುವೆ ಅಂತಾರಾಜ್ಯ ಬಸ್ ಸಂಚಾರ ಶುಕ್ರವಾರ ಆರಂಭವಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಹಾಗೂ ಕೇರಳ ಸಾರಿಗೆ ಬಸ್‌ಗಳು ಎರಡೂ ರಾಜ್ಯಗಳ ನಡುವೆ ಓಡಾಟ ಆರಂಭಿಸಿವೆ.

ನೆರೆಯ ಕಾಸರಗೋಡಿನಲ್ಲಿ ಕೋವಿಡ್ 19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ದಕ್ಷಿಣ ಕನ್ನಡದಿಂದ ಓಡಾಡುವ ಬಸ್‌ಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇಲ್ಲಿನ ಜನರ ಓಡಾಟ, ಸಂಪರ್ಕದಿಂದ ದಕ್ಷಿಣ ಕನ್ನಡದಲ್ಲಿ ಕೂಡ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದು ಹೇಳಲಾಗಿತ್ತು. ಜನರ ಓಡಾಟವನ್ನು ನಿಯಂತ್ರಿಸಲು ಆಗಸ್ಟ್ ತಿಂಗಳಲ್ಲಿ ಬಸ್ ಸಂಚಾರ ನಿಲ್ಲಿಸಲಾಗಿತ್ತು. ಮಂಗಳೂರು- ಕಾಸರಗೋಡು ಮಾರ್ಗದ ಕೆಎಸ್‌ಆರ್‌ಟಿಸಿ ಬಸ್‌ಗಳು ತಳಪಾಡಿಯಲ್ಲಿ ಸಂಚಾರ ನಿಲ್ಲಿಸುತ್ತಿದ್ದವು. ಕೇರಳದ ಎಸ್‌ಆರ್‌ಟಿಸಿ ಕೂಡ ತಮ್ಮ ಸೇವೆಯನ್ನು ಮೊಟಕುಗೊಳಿಸಿತ್ತು.

ನೆರೆಯ ಕಾಸರಗೋಡಿನಲ್ಲಿ ಕೋವಿಡ್ 19  ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ದಕ್ಷಿಣ ಕನ್ನಡದಿಂದ ಓಡಾಡುವ ಬಸ್‌ಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇಲ್ಲಿನ ಜನರ ಓಡಾಟ, ಸಂಪರ್ಕದಿಂದ ದಕ್ಷಿಣ ಕನ್ನಡದಲ್ಲಿ ಕೂಡ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದು ಹೇಳಲಾಗಿತ್ತು. ಜನರ ಓಡಾಟವನ್ನು ನಿಯಂತ್ರಿಸಲು ಆಗಸ್ಟ್ ತಿಂಗಳಲ್ಲಿ ಬಸ್ ಸಂಚಾರ ನಿಲ್ಲಿಸಲಾಗಿತ್ತು. ಮಂಗಳೂರು- ಕಾಸರಗೋಡು ಮಾರ್ಗದ ಕೆಎಸ್‌ಆರ್‌ಟಿಸಿ ಬಸ್‌ಗಳು ತಳಪಾಡಿಯಲ್ಲಿ ಸಂಚಾರ ನಿಲ್ಲಿಸುತ್ತಿದ್ದವು. ಕೇರಳದ ಎಸ್‌ಆರ್‌ಟಿಸಿ ಕೂಡ ತಮ್ಮ ಸೇವೆಯನ್ನು ಮೊಟಕುಗೊಳಿಸಿತ್ತು. ಆದರೆ ಶುಕ್ರವಾರದಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತ ಬಸ್ ಸಂಚಾರಗಳು ಮರು ಆರಂಭವಾಗಲು ಅವಕಾಶ ನೀಡಿದೆ. ಆದರೆ ಪ್ರಯಾಣಿಕರಿಕರಿಗೆ ಹಲವು ನಿರ್ಬಂಧಗಳಿವೆ. ವಿದ್ಯಾರ್ಥಿಗಳು ಸೇರಿದಂತೆ ಪ್ರತಿ ದಿನ ಬಂದು ಹೋಗುವವರು ಮತ್ತು ದಕ್ಷಿಣ ಕನ್ನಡದ ವಿವಿಧ ಕಡೆ ಕೆಲಸ ಮಾಡುವವರು ಪ್ರತಿ ಏಳು ದಿನಕ್ಕೆ ಒಮ್ಮೆ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಬೇಕು.
ಮಂಗಳೂರಿಗೆ ಬಂದು ಹೋಗುವವರು 72 ಗಂಟೆಗಿಂತ ಹಳೆಯದಲ್ಲದ ಕೋವಿಡ್ 19 ನೆಗೆಟಿವ್ ಪ್ರಮಾಣಪತ್ರವನ್ನು ಹೊಂದಿರಬೇಕಾಗುತ್ತದೆ. ಪ್ರಯಾಣಿಕರು ಅಗತ್ಯವಿದ್ದಾಗ ಸಂಪೂರ್ಣ ಲಸಿಕೆ ಪಡೆದ ಪ್ರಮಾಣಪತ್ರವನ್ನು ಕೂಡ ಹಾಜರುಪಡಿಸಬೇಕಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕೆವಿ ರಾಜೇಂದ್ರ ತಿಳಿಸಿದ್ದಾರೆ.

- Advertisement -

Latest Posts

Don't Miss