Mangaluru: ಮಂಗಳೂರಿನಲ್ಲಿ ಇದೇ ನವೆಂಬರ್ 29ರ ಭಾನುವಾಾರದಂದು ರಾಜ್ಯ ಸರ್ಕಾರ ಉದ್ಯೋಗ ಮೇಳ ಏರ್ಪಡಿಸಿದೆ. ಕೆಲಸದ ಹುಡುಕಾಟದಲ್ಲಿರುವವರು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಿ, ಬೇಕಾದ್ದ ಉದ್ಯೋಗ ಪಡೆಯುವ ಅವಕಾಶ ನಿಮ್ಮದಾಗಲಿದೆ.
ಈ ಬಗ್ಗೆ ಸಚಿವ ಯು.ಟಿ.ಖಾದರ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದ್ದು, ಮಾಹಿತಿ ಇಂತಿದೆ.
ಯುವ ಜನರಿಗೆ ಉದ್ಯೋಗ ಒದಗಿಸುವುದು ನಮ್ಮ ಸರ್ಕಾರದ ಆದ್ಯತೆ. ಅದರ ಭಾಗವಾಗಿ ಕರಾವಳಿಯ ಯುವ ಜನರಿಗೆ ತಮ್ಮದೇ ಊರಿನಲ್ಲಿ ಉದ್ಯೋಗದ ಬಾಗಿಲು ತೆರೆಯಲು ನಮ್ಮ ಸರ್ಕಾರ ಮಂಗಳೂರಿನಲ್ಲಿ ಕರಾವಳಿ ವಿಭಾಗೀಯ ಮತ್ತು ಜಿಲ್ಲಾಮಟ್ಟದ ಬೃಹತ್ ಉದ್ಯೋಗ ಮೇಳ ಆಯೋಜಿಸಿದೆ.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಮೂಲಕ ಈ ಮೇಳ ನಡೆಯಲಿದ್ದು, ಹಲವು ಕ್ಷೇತ್ರಗಳ ಕಂಪನಿಗಳು ಒಂದೇ ಕಡೆ ನೇರವಾಗಿ ಸಂದರ್ಶನ ನಡೆಸಲಿವೆ.
ದಿನಾಂಕ: ನವೆಂಬರ್ 29, ಭಾನುವಾರ
ಸಮಯ: ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ
ಸ್ಥಳ: ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾನಿಲಯ), ಮಂಗಳೂರು
ಎಸ್‌ಎಸ್‌ಎಲ್‌ಸಿ, ಡಿಪ್ಲೊಮಾ, ಐಟಿಐ, ಯಾವುದೇ ಪದವಿ ಅಥವಾ ಉನ್ನತ ಶಿಕ್ಷಣ ಓದುತ್ತಿರುವವರು ಮತ್ತು ಓದು ಮುಗಿಸಿ ಕೆಲಸ ಹುಡುಕುತ್ತಿರುವವರು ಎಲ್ಲರೂ ಈ ಮೇಳದಲ್ಲಿ ಭಾಗವಹಿಸಬಹುದು. ಉದ್ಯೋಗ ಸೇತು ಪೋರ್ಟಲ್‌ನಲ್ಲಿ ಮುಂಚಿತವಾಗಿ ನೋಂದಣಿ ಮಾಡಿಕೊಂಡು, ರೆಸ್ಯೂಮ್ ಮತ್ತು ದಾಖಲೆಗಳ ಪ್ರತಿಗಳೊಂದಿಗೆ ಬನ್ನಿ.




