ಮಾವಿನ ಹಣ್ಣಿನಿಂದ ವಿವಿಧ ತರಹದ ಖಾದ್ಯಗಳನ್ನ ಮಾಡ್ತಾರೆ ಅದರಲ್ಲಿ ಮಾವಿನಹಣ್ಣಿನ ಹಲ್ವಾ ಕೂಡ ಒಂದು. ಜೆಲ್ಲಿಯನ್ನ ಬಳಸದೇ ಸಾಫ್ಟ್ ಆದ ಮ್ಯಾಂಗೋ ಹಲ್ವಾ ಮಾಡಬಹುದು. ಹಾಗಾದ್ರೆ ಬನ್ನಿ ಮ್ಯಾಂಗೋ ಹಲ್ವಾ ಮಾಡೋಕ್ಕೆ ಬೇಕಾಗಿರುವ ಸಾಮಗ್ರಿಯನ್ನ ನೋಟ್ ಮಾಡಿಕೊಳ್ಳಿ.

ಬೇಕಾಗುವ ಸಾಮಗ್ರಿ: 350 ಗ್ರಾಂ ಮಾವಿನ ಹಣ್ಣು, ಅರ್ಧ ಕಪ್ ಕಾರ್ನ್‌ಫ್ಲೋರ್, 5 ಸ್ಪೂನ್ ತುಪ್ಪ, 160 ಗ್ರಾಂ ಸಕ್ಕರೆ, ಚಿಟಿಕೆ ಏಲಕ್ಕಿ ಪುಡಿ, ಅವಶ್ಯಕತೆ ಇದ್ದಲ್ಲಿ ಒಣ ಹಣ್ಣುಗಳ ಮಿಶ್ರಣ, 2 ಕಪ್ ನೀರು.
ಮಾಡುವ ವಿಧಾನ: ಮಾವಿನ ಹಣ್ಣಿನ ಹೋಳುಗಳನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಒಂದು ಬೌಲ್‌ಗೆ ಕಾರ್ನ್‌ಫ್ಲೋರ್ ಮತ್ತು ಒಂದು ಕಪ್ ನೀರು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ. ಈಗ ಮಾವಿನ ಹಣ್ಣಿನ ಪೇಸ್ಟ್‌ನ್ನ ಇದರೊಂದಿಗೆ ಚೆನ್ನಾಗಿ ಮಿಕ್ಸ್ ಮಾಡಿ.
ಒಂದು ಪ್ಯಾನ್‌ಗೆ ಒಂದು ಕಪ್ ನೀರು ಮತ್ತು 160 ಗ್ರಾಂ ಸಕ್ಕರೆ ಸೇರಿಸಿ ಸಕ್ಕರೆ ಕರಗುವವರೆಗೂ ಕುದಿಸಿ. ಈಗ ಮಾವಿನ ಹಣ್ಣಿನ ಪೇಸ್ಟ್ ಮತ್ತು ಕಾರ್ನ್‌ಫ್ಲೋರ್ ಮಿಶ್ರಣ ಸೇರಿಸಿ. ಒಂದೊಂದು ಟೇಬಲ್ ಸ್ಪೂನ್ ತುಪ್ಪ ಹಾಕುತ್ತ, ನಿಧಾನಕ್ಕೆ ಮಿಕ್ಸ್ ಮಾಡಿ.ಹದವಾದ ಹಲ್ವಾ ಮಿಶ್ರಣ ರೆಡಿಯಾದ ಮೇಲೆ, ಚಿಟಿಕೆ ಏಲಕ್ಕಿ ಪುಡಿ ಸೇರಿಸಿ.
ಈ ಮಿಶ್ರಣವನ್ನು ತುಪ್ಪ ಸವರಿದ ತಟ್ಟೆಗೆ ಹಾಕಿ ಒಂದೂವರೆ ಗಂಟೆ ಸೆಟ್ ಆಗಲು ಬಿಡಿ. ಅವಶ್ಯಕತೆ ಇದ್ದಲ್ಲಿ ಒಣಹಣ್ಣುಗಳನ್ನು ಸೇರಿಸಿ. ಈಗ ಚೌಕಾಕಾರದಲ್ಲಿ ಹಲ್ವಾ ಕತ್ತರಿಸಿ, ಸರ್ವ್ ಮಾಡಿ.
ಮನೆಗೆ ಅತಿಥಿಗಳು ಬಂದಾಗ, ಪಿಕ್‌ನಿಕ್ ಹೋಗುವ ಸಂದರ್ಭದಲ್ಲಿ ಅಥವಾ ಥಟ್ ಅಂತಾ ಸ್ವೀಟ್ ಮಾಡಿ ತಿನ್ನಬೇಕು ಅನ್ನಿಸಿದಾಗ ಈ ಹಲ್ವಾ ಮಾಡಿ ಸವಿಯಬಹುದು.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.