www.karnatakatv.net : ಶ್ರೀಲಂಕಾ ವಿರುದ್ದದ ಏಕದಿನ ಸರಣಿಯಲ್ಲಿ ಬಾರತದ ಅನೇಕ ಹೊಸ ಮುಖಗಳಿಗೆ ಅವಕಾಶ ನೀಡಿತು, ಒಂದೇ ಒಂದು ಸರಣಿಯ ಮೂಲಕ ಟಿಂ ಇಂಡಿಯಾ 7 ಮಂದಿ ಪಾದಾರ್ಪಣೆ ಮಾಡಿದರು ಮೊದಲ ಏಕ ದಿನ ಪಂದ್ಯದಲ್ಲಿ ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಯಾದವ್ ಪಾದಾರ್ಪಣೆಮಾಡಿದರೆ, 3ನೇ ಏಕದಿನ ಸಂಜು ಸ್ಯಾಮ್ಸನ್, ನಿತೀಶ್ ರಾಣಾ, ಚೇತನ್ ಸಕರಿಯಾ, ರಾಹುಲ್ ಚಹರ್, ಹಾಗೂ ಕನ್ನಡಿಗ ಕೃಷ್ಣಪ್ಪ ಗೌತಮ್ ಟಿಂ ಇಂಡಿಯಾ ಪರ ಅವಕಾಶ ಪಡೆದರು, ಇನ್ನು ಈ ಸರಣಿಯ ಮೂಲಕ ಪೃಥ್ವಿ ಶಾ ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಮತ್ತು ದೀಪಕ್ ಚಹರ್ ತಮ್ಮ ಸಾಮರ್ಥ್ಯವನ್ನು ಧಾರೆಯೆರೆದಿದ್ದಾರೆ. ಆದರೆ ಮಧ್ಯಮ ಕ್ರಮಾಂಕದಲ್ಲಿ 3 ಪಂದ್ಯಗಳಲ್ಲೂ ಕಣಕ್ಕಿಳಿದ ಮನೀಶ್ ಪಾಂಡೆಯಿಂದ ಮಾತ್ರ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ


ಪಾಂಡೆ ಮೊದಲ ಪಂದ್ಯದಲ್ಲಿ 40 ಎಸೆತಗಳಲ್ಲಿ 26 ರನ್ ಗಳಿಸಿದರೆ, 2ನೇ ಪಂದ್ಯದಲ್ಲಿ 37 ರನ್ ಬಾರಿಸಿದ್ದರು. ಹಾಗೆಯೇ ಮೂರನೇ ಪಂದ್ಯದಲ್ಲಿ ಕೇವಲ 11ರನ್ ಗಳಿಸಿ ಔಟಾಗಿದ್ದರು