Friday, November 22, 2024

Latest Posts

ಪ್ರೀತಿಗಾಗಿ ಲಿಂಗ ಬದಲಿಸಿ, ವಿದ್ಯಾರ್ಥಿಯನ್ನೇ ವಿವಾಹವಾದ ಶಿಕ್ಷಕಿ

- Advertisement -

ಶಿಕ್ಷಕಿಯೊಬ್ಬಳು ವಿದ್ಯಾರ್ಥಿನಿ ಮದುವೆಯಾಗಲು ಲಿಂಗ ಬದಲಿಸಿದ ಘಟನೆ ಅಚ್ಚರಿಯನ್ನುಂಟು ಮಾಡಿದೆ. ರಾಜಸ್ಥಾನದ ಭಾರತ್ ಪುರದಲ್ಲಿ ಈ ಘಟನೆ ನಡೆದಿದ್ದು, ದೈಹಿಕ ಶಿಕ್ಷಕಿಯಾಗಿದ್ದ ಮೀರಾ ತಮ್ಮ ವಿದ್ಯಾರ್ಥಿನಿಯಾದ ಕಲ್ಪನಾ ಎಂಬಾಕೆಯನ್ನು ಪ್ರೀತಿಸಿ ವಿವಾಹವಾಗಿದ್ದಾರೆ. ಕುಟುಂಬದವರು ಮತ್ತು ಸಮಾಜ ಒಪ್ಪುವುದಿಲ್ಲವೆಂದಯ ಮೀರಾ ತಮ್ಮ ಲಿಂಗ ಬದಲಾಯಿಸಿಕೊಂಡಿದ್ದಾರೆ.

‘ಪ್ರಿತಿಯಲ್ಲಿ ಎಲ್ಲವೂ ಸರಿ’ ಹಾಗಾಗಿ ತಮ್ಮ ಲಿಂಗ ಬದಲಸಿಕೊಂಡೆ ಎಂದು ಮೀರಾ ಹೇಳಿದ್ದಾರೆ. ತಮ್ಮ ಹೆಸರನ್ನೂ ಆರವ್ ಕುಂತಾಲ್ ಎಂದು ಬದಲಿಸಿಕೊಂಡಿದ್ದಾರೆ. ಶಾಲೆಯಲ್ಲಿ ಕಲ್ಪನಾಳ ಜೊತೆ ಒಡನಾಟ ಬೆಳೆದು ಅವಳ ಮೇಲೆ ನನಗೆ ಪ್ರೀತಿ ಬೆಳೆಯಿತು. ಬಾಲ್ಯದಿಂದಲೂ ನನಗೆ ಹುಡುಗ ಆಗಬೇಕಿತ್ತೆಂಬ ಬಯಕೆ ಇತ್ತು,. ಹೀಗಾಗಿ ಲಿಂಗ ಬದಲಿಸಲು ಸರ್ಜಿರಿಗೆ ಮುಂದಾದೆ ಎಂದು ಮೀರಾ ಹೇಳಿದ್ದಾರೆ. ಕಲ್ಪನಾ ಕೂಡ ಈ ಮದುವೆಯಿಂದ ಖುಷಿಯಾಗಿದ್ದಾರೆ, ಇಬ್ಬರ ನಿರ್ಧಾರಕ್ಕೆ ಕುಟುಂಬದವರು ಒಪ್ಪಿರುವುದು ಅಚ್ಚರಿ ಉಂಟುಮಾಡಿದೆ.

- Advertisement -

Latest Posts

Don't Miss