Political News: ಕೋವಿಡ್ ಮಹಾಮಾರಿ ಮತ್ತೆ ಭಾರತಕ್ಕೆ ಕಾಲಿಟ್ಟಿದ್ದು, ಕೇರಳದಲ್ಲಿ ಕೋವಿಡ್‌ಗೆ ಇಬ್ಬರು ಬಲಿಯಾಗಿದ್ದಾರೆ. ರಾಜ್ಯಕ್ಕೂ ಈ ಮಹಾಮಾರಿ ಸೋಂಕು ಹರಡುವ ಸೂಚನೆ ಇದ್ದು, 60 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಮಾಸ್ಕ್ ಧರಿಸಲೇಬೇಕು ಎಂಬ ನಿಯಮ ತರಲಾಗಿದೆ.
ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕೊರೋನಾ ರೂಪಾಂತರಿ ಬಗ್ಗೆ ಯಾರೂ ಭಯಪಡಬೇಕಿಲ್ಲ. ಸದ್ಯಕ್ಕೆ ರಾಜ್ಯದಲ್ಲಿ ಯಾರಿಗೂ ಈ ಸೋಂಕು ತಗುಲಲಿಲ್ಲ. ಆದರೆ ಇಂದಿನಿಂದ ಕಡ್ಡಾಯವಾಗಿ 60 ವರ್ಷ ಮೇಲ್ಪಟ್ಟವರು ಮಾಸ್ಕ್ ಧರಿಸಬೇಕು. ಈ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಲಿದೆ ಎಂದು ಹೇಳಿದರು.
ಕೊಡಗು ಜಿಲ್ಲೆಯ ಕುಶಾಲನಗರದ ನಮ್ಮ ಕ್ಲೀನಿಕ್‌ಗೆ ಭೇಟಿ ನೀಡಿದ ಬಳಿಕ ಮಾತನಾಡಿದ ದಿನೇಶ್ ಗುಂಡೂರಾವ್, ಈ ಬಗ್ಗೆ ಸಭೆ ನಡೆಸಿದ್ದು, ಯಾವ ಕ್ರಮ ತೆಗೆದುಕೊಳ್ಳಬೇಕು ಎಂದು ಚರ್ಚಿಸಿದ್ದೇವೆ. ಅಲ್ಲದೇ, ಕೇಂದ್ರ ಸರ್ಕಾರದ ಜೊತೆಗೂ ಕೋವಿಡ್ ತಡೆಗಟ್ಟುವಿಕೆಯ ಬಗ್ಗೆ ಚರ್ಚೆ ನಡೆಸಲಾಗಿದೆ. ಬರೀ 60 ವರ್ಷ ಮೇಲ್ಪಟ್ಟವರಷ್ಟೇ ಅಲ್ಲದೇ, ಉಸಿರಾಟದ ಸಮಸ್ಯೆ, ಕಿಡ್ನಿ, ಹೃದಯ ಸಮಸ್ಯೆ ಸೇರಿ, ಇತರೇ ಆರೋಗ್ಯ ಸಮಸ್ಯೆ ಇರುವವರೆಲ್ಲರೂ ಮಾಸ್ಕ್ ಧರಿಸಲೇಬೇಕಾಗಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಆಸ್ಪತ್ರೆ, ಕೋವಿಡ್ ಕೇಂದ್ರಗಳಲ್ಲಿ ನಾವು ಈಗಾಗಲೇ ಎಲ್ಲ ಸಿದ್ಧತೆಯನ್ನು ಮಾಡಿಕೊಂಡಿದ್ದೇವೆ. ಗಡಿ ಭಾಗಗಳ ಮೇಲೆ, ನಿಗಾ ಇರಿಸಲಾಗಿದೆ. ಅದರಲ್ಲೂ ಕೇರಳದಿಂದ ಬರುವವರಿಗೆ ಕಡ್ಡಾಯವಾಗಿ ತಪಾಸಣೆ ಮಾಡಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ.
ಶೆಟ್ಟರ್ ಕಡೆಯಿಂದ ಸನ್ಮಾನ ನಿರಾಕರಿಸಿದ ಸಿಎಂ ಸಿದ್ದರಾಮಯ್ಯ.. ಕಾರಣವೇನು..?
ಎಲ್ಲಾ ರೀತಿಯ ಕ್ರಮಕ್ಕೆ ಸರ್ಕಾರ ಸಿದ್ಧವಾಗಿದೆ ಎಂದಿದ್ದಾರೆ: ಕೋವಿಡ್ ಬಗ್ಗೆ ಸಿಎಂ ಮಾತು