Monday, April 14, 2025

Latest Posts

ವಿವಾಹ ಭೋಜನದ ಅವಾಂತರ

- Advertisement -

www.karnatakatv.net :ಮದುವೆ ಮನೆ ಊಟ ತಿಂದ ನೂರಕ್ಕೂ ಹೆಚ್ಚು ಮಂದಿ ಆಸ್ವಸ್ಥವಾಗಿ ಕಡೆಗೆ ಆಸ್ಪತ್ರೆಗಳಿಗೆ ದಾಖಲಾಗಲು ನೂಕುನುಗ್ಗಲು ಏರ್ಪಟ್ಟ ಘಟನೆ ರಾಜಸ್ಥಾನದಲ್ಲಿ ನಡೆದೆ.

ಇಲ್ಲಿನ ಚುರು ಜಿಲ್ಲೆಯ ಶೋಭಸರ್ ಪಟ್ಟಣದಲ್ಲಿ ನಿನ್ನೆ ನಾಲ್ವರು ಸಹೋದರಿಯರ ಸಾಮೂಹಿಕ ವಿವಾಹ ಸಮಾರಂಭ ಇತ್ತು. ಇಲ್ಲಿಗೆ ಬಂದಿದ್ದವರಲ್ಲಿ ಭರ್ಜರಿ ಊಟ ಸೇವಿಸಿದ ಬಳಿಕ ಏಕಾಏಕಿ ಹೊಟ್ಟೆ ನೋವು ವಾಂತಿ ಕಾಣಿಸಿಕೊಂಡಿದೆ. ಇದರಿಂದ ಗಾಬರಿಗೊಂಡು ಒಮ್ಮೆಲೇ ಸ್ಥಳೀಯ ಆಸ್ಪತ್ರೆಯತ್ತ ಧಾವಿಸಿದ್ರು. ಆದ್ರೆ ಎಲ್ಲರೂ ಒಂದೇ ಆಸ್ಪತ್ರೆಗೆ ಹೋಗಿದ್ದರಿಂದ ಅಲ್ಲಿ ಬೆಡ್ ಗಾಗಿ ನೂಕುನುಗ್ಗಲು ಏರ್ಪಟ್ಟು ಕಡೆಗೆ ಅಲ್ಲಿಗೆ ಬಂದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಬೇಕಾಯ್ತು. ನಾನಾ ಆಸ್ಪತ್ರೆಗಳಲ್ಲಿ ಅಸ್ವಸ್ಥರಿಗೆ ಚಿಕಿತ್ಸೆ ನೀಡಿ ಡಿಸ್ಚಾರ್ಜ್ ಮಾಡಲಾಗಿದೆ.

- Advertisement -

Latest Posts

Don't Miss