Thursday, November 21, 2024

Latest Posts

MC Donald: ಶ್ರಾವಣ ಮಾಸದ ಸ್ಪೆಶಲ್ ಬರ್ಗರ್ ಪರಿಚಯಿಸಿದ ಮೆಕ್‌ಡೋನಾಲ್ಡ್

- Advertisement -

News: ಹಿಂದೂಗಳು ತಿಂಡಿ, ಊಟ, ಪ್ರಯಾಣ, ಕೆಲಸ ಎಲ್ಲವನ್ನೂ ಎಷ್ಟು ಇಷ್ಟಪಡುತ್ತಾರೋ, ಅದೇ ರೀತಿ ಹಿಂದೂ ಧರ್ಮದ ಪದ್ಧತಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಎಲ್ಲರೂ ಅಲ್ಲದಿದ್ದರೂ, ಕೆಲವರಾದರೂ, ಹಿಂದೂ ಧರ್ಮದ ಕೆಲವು ಪದ್ಧತಿಯನ್ನು ಅನುಸರಿಸುತ್ತಾರೆ. ಅದರಲ್ಲಿ ಒಂದು ಶ್ರಾವಣ ಮಾಸದ ಪದ್ಧತಿ ಆಚರಣೆ. ಶ್ರಾವಣ ಮಾಸದಲ್ಲಿ ಕೆಲವರು ಮಾಂಸಾಹಾರ ಸೇವಿಸುವುದಿಲ್ಲ. ಇನ್ನು ಕೆಲವರು ಬೆಳ್ಳುಳ್ಳಿ- ಈರುಳ್ಳಿಯನ್ನೇ ಸೇವಿಸುವುದಿಲ್ಲ.

ಹಾಗಾಗಿ ಮೆಕ್‌ಡೋನಾಲ್ಡ್ ಕಂಪನಿ ಬೆಳ್ಳುಳ್ಳಿ- ಈರುಳ್ಳಿ ಹಾಕದ ಶ್ರಾವಣದ ಸ್ಪೆಶಲ್ ವೆಜ್ ಬರ್ಗರ್ ಬಿಡುಗಡೆ ಮಾಡಿದೆ. ಚೀಸ್ ಬರ್ಗರ್ ಮತ್ತು ಆಲೂಟಿಕ್ಕಿ ಬರ್ಗರ್ ಪರಿಚಯ ಮಾಡಿದ್ದು, ಇದರಲ್ಲಿ ಬೆಳ್ಳುಳ್ಳಿ- ಈರುಳ್ಳಿ ಬಳಕೆ ಮಾಡಲಾಗಿಲ್ಲ. ಆದರೆ ಇದಕ್ಕೂ ಅಷ್ಟು ಉತ್ತಮವಾದ ರೆಸ್ಪಾನ್ಸ್ ಸಿಕ್ಕಿಲ್ಲ.

ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಹಲವರು ಹಲವು ರೀತಿಯ ಕಾಮೆಂಟ್ ಹಾಕಿದ್ದಾರೆ. ಶ್ರಾವಣದಲ್ಲಿ ಅಂಗಡಿ, ಹೊಟೇಲ್‌ನ ತಿನಿಸುಗಳನ್ನು ತಿನ್ನಲೇಬಾರದು. ತಿಂದ್ರೆ, ಆಚರಣೆ ಮುರಿದ ಹಾಗೆ ಎಂದಿದ್ದಾರೆ. ಮತ್ತೆ ಕೆಲವರು ಇದರಲ್ಲಿ ಮೈದಾ ಸೇರಿ ಬೇರೆ ಮಸಾಲೆ ಪದಾರ್ಥಗಳನ್ನು ಬಳಕೆ ಮಾಡುತ್ತಾರೆ. ಹಾಗಾಗಿ ಇದರ ಬಳಕೆ ಮಾಡಿ, ಪವಿತ್ರ ಆಚರಣೆ ಮುರಿಯುವುದು ಸರಿಯಲ್ಲ ಎಂದಿದ್ದಾರೆ. ಹೀಗೆ ಕೆಲವರು ಇದು ಗುಡ್ ಐಡಿಯಾ ಅಂದ್ರೆ ಮತ್ತೆ ಕೆಲವರು ಬ್ಯಾಡ್ ಐಡಿಯಾ ಎಂದಿದ್ದಾರೆ.

ಶ್ರಾವಣದಲ್ಲಿ ಮಾಸದಲ್ಲಿ ನಾನ್‌ವೆಜ್ ತಿನ್ನದಿರಲು ಕೂಡ ಒಂದು ಕಾರಣವಿದೆ. ಈ ಸಮದಯಲ್ಲಿ ಮೀನುಗಳ ಸಂತಾನೋತ್ಪತ್ತಿ ಮತ್ತು ಇನ್ನಿತರ ಜೀವಿಗಳ ಸಂತಾನೋತ್ಪತ್ತಿ ಕಡಿಮೆಯಾಗುತ್ತದೆ. ಈ ವೇಳೆಯಲ್ಲಿ ಮಾಂಸಾಹಾರ ಸೇವಿಸಿದ್ದಲ್ಲಿ, ಸಂತಾನೋತ್ಪತ್ತಿಯಲ್ಲಿ ಏರುಪೇರಾಗುತ್ತದೆ. ಆಗ ಮೀನು ಸೇರಿ, ಹಲವು ಜಲಚರಗಳು, ಪ್ರಾಣಿ, ಪಕ್ಷಿಗಳ ಸಂಖ್ಯೆ ಕಡಿಮೆಯಾಗುತ್ತದೆ. ಹಾಗಾಗಿ ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವನೆ ಮಾಡಬಾರದು ಅಂತಾ ಹೇಳುವುದು.

- Advertisement -

Latest Posts

Don't Miss