ಶಿವನ ಭಕ್ತರು ಪಠಿಸುವ ಪಂಚಾಕ್ಷರಿ ಮಂತ್ರವೆಂದರೆ, ಓಂ ನಮಃ ಶಿವಾಯ. ಈ ಮಂತ್ರವನ್ನ ಪ್ರತಿದಿನ 108 ಬಾರಿ ಹೇಳಿದ್ರೆ, ಶಿವನ ಕೃಪೆಗೆ ಪಾತ್ರರಾಗುತ್ತೇವೆ ಅನ್ನೋ ನಂಬಿಕೆ ಇದೆ. ಹಾಗಾಗಿ ಇಂದು ನಾವು ಓಂ ನಮಃ ಶಿವಾಯ ಮಂತ್ರದ ಅರ್ಥವೇನು..? ಇದನ್ನ ಜಪಿಸುವುದರಿಂದ ಆಗುವ ಲಾಭವೇನು ಅನ್ನೋದನ್ನ ತಿಳಿಯೋಣ ಬನ್ನಿ..
ಸ್ವಾರ್ಥ, ಲೋಭ, ಕಾಮ, ಕ್ರೋಧ, ಮದ, ಮತ್ಸರ, ಮಾಯೆ ಇವನ್ನೆಲ್ಲ ತ್ಯಜಿಸಿ, ಪ್ರೇಮ ಮತ್ತು ಶಾಂತಿಯಿಂದ ಪರಮಾತ್ಮನ ಸಾನಿಧ್ಯ ಸೇರುವುದೇ, ಓಂ ನಮಃ ಶಿವಾಯ ಮಂತ್ರದ ಅರ್ಥ. ಹಲವು ದೇವಾನು ದೇವತೆಗಳು, ರಾಕ್ಷಸರೆಲ್ಲ ಈ ಮಂತ್ರ ಹೇಳುವ ಮೂಲಕವೇ ಶಿವನನ್ನು ಒಲಿಸಿಕೊಂಡಿದ್ದರು. ಮತ್ತು ವರ ಪಡೆದುಕೊಂಡಿದ್ದರು.
ಈ ಮಂತ್ರವನ್ನ ಹೇಗೆ ಪಠಿಸಬೇಕು ಅನ್ನೋ ಪ್ರಶ್ನೆಗೆ ಉತ್ತರ, ಪೂರ್ವ ದಿಕ್ಕಿನಲ್ಲಿ ಕುಳಿತುಕೊಂಡು, ಯೋಗಮುದ್ರೆಯಲ್ಲಿ ಕುಳಿತುಕೊಂಡು, ಪಠಿಸಬೇಕು. ಈ ಮಂತ್ರ ಪಠಣೆಯ ವೇಳೆ ಮನಸ್ಸು ಏಕಾಗೃತೆಯಿಂದ ಕೂಡಿರಬೇಕು. ಮಾಂಸಾಹಾರ, ಮದ್ಯ ಸೇವನೆ ಮಾಡಿದ ದಿನ ಈ ಮಂತ್ರ ಪಠಿಸಬಾರದು. ಹೆಣ್ಣು ಮಕ್ಕಳು ಋತುಚಕ್ರವಿರುವ ಸಂದರ್ಭದಲ್ಲಿ ಈ ಮಂತ್ರ ಪಠಣೆ ಮಾಡಬಾರದು.
ಇನ್ನೊಂದು ವಿಶೇಷ ಮಾಹಿತಿ ಎಂದರೆ, ನೀವು ಯಾವುದೇ ಮಂತ್ರ ಹೇಳಬೇಕಾದರೂ, ಅದನ್ನ ಗುರುವಿನ ಮೂಲಕ ಪಡೆದರೆ, ಅದರ ಶಕ್ತಿ ಇಮ್ಮಡಿಯಾಗುತ್ತದೆ. ಲಲಿತಾ ಸಹಸ್ರನಾಮವನ್ನ ಗುರುವಿನ ಮೂಲಕ ಕಲಿತು, ಹೇಳಿದರೆ, ಅದರ ಪ್ರಭಾವ ಶಕ್ತಿಯುತವಾಗಿರುತ್ತದೆ. ಆದ್ರೆ ಒಮ್ಮೆ ನೀವು ಗುರುವಿನಿಂದ ಮಂತ್ರ ಕಲಿತರೆ, ಅದನ್ನ ಕೊನೆಯವರೆಗೂ ಪಠಿಸುತ್ತಿದ್ದರೆ ಮಾತ್ರ, ಅದರ ಪ್ರಭಾವ ಇರುತ್ತದೆ.