Sunday, July 20, 2025

Latest Posts

ಶೆಹಬಾಜ್‌ ಷರೀಫ್‌, ಆಸಿಮ್‌ ಮುನೀರ್ ಇಬ್ರು ಸ್ಟುಪಿಡ್‌ ಜೋಕರ್‌ಗಳು :‌ ಪಾಕ್‌ ವಿರುದ್ಧ ಓವೈಸಿ ಆಕ್ರೋಶ..!

- Advertisement -

ನವದೆಹಲಿ : ಪಾಕಿಸ್ತಾನದ ಭಯೋತ್ಪಾದನೆಯ ವಿರುದ್ಧ ಹೋರಾಡುತ್ತಿರುವ ಭಾರತದ ನಿಲುವನ್ನು ಹಾಗೂ ಆಪರೇಷನ್‌ ಸಿಂಧೂರ್‌ ಕಾರ್ಯಾಚರಣೆಯ ಮಹತ್ವವನ್ನು ಜಗತ್ತಿಗೆ ಸಾರುವ ನಿಟ್ಟಿನಲ್ಲಿ ಭಾರತ ಸರ್ಕಾರದ ಸಂಸದರ ನಿಯೋಗದ ಒಂದು ತಂಡವು ಕುವೈತ್‌ ತಲುಪಿದೆ. ಅಲ್ಲಿನ ಭಾರತೀಯ ಸಮುದಾಯವನ್ನು ಭೇಟಿಯಾಗಿ ಮಾತುಕತೆ ನಡೆಸಿ ಪಾಕ್‌ನ ಹೇಡಿತನವನ್ನು ಬಿಚ್ಚಿಟ್ಟಿದ್ದಾರೆ.

ಷರೀಫ್‌, ಮುನೀರ್‌ ಇಬ್ರು ಸ್ಟುಪಿಡ್‌ ಜೋಕರ್‌ಗಳು..

ಇನ್ನೂ ಹೈದ್ರಾಬಾದ್‌ನ ಎಐಎಂಐಎಂ ಸಂಸದ ಅಸಾದುದ್ದೀನ್‌ ಓವೈಸಿ ಅವರ ನಿಯೋಗವು ಕುವೈತ್‌ನಲ್ಲಿ ಭಾರತದ ಐತಿಹಾಸಿಕ ಆಪರೇಷನ್‌ ಸಿಂಧೂರ್ ಯಶೋಗಾಥೆಯನ್ನು‌ ತೆದಿಟ್ಟಿದೆ. ಈ ವೇಳೆ ಮಾತನಾಡಿರುವ ಓವೈಸಿ, ಪಾಕ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್ ಹಾಗೂ ಸೇನಾ ಮುಖ್ಯಸ್ಥ ಆಸಿಮ್‌ ಮುನೀರ್‌ ಇಬ್ಬರೂ ಸ್ಟುಪಿಡ್‌ ಜೋಕರ್‌ಗಳು ಎಂದು ಲೇವಡಿ ಮಾಡಿದ್ದಾರೆ.

ನಕಲು ಮಾಡಲೂ ಒಂದಷ್ಟು ಬುದ್ಧಿ ಇರಬೇಕು. ಅದು ಇವರಿಬ್ಬರಿಗೂ ಇಲ್ಲ..

ನಮ್ಮ ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ಆಪರೇಷನ್‌ ಸಿಂಧೂರ್‌ ಕಾರ್ಯಾಚರಣೆಯ ಪ್ರತಿಯಾಗಿ ಪಾಕ್‌ ಆಪರೇಷನ್‌ ಬುನ್‌ಯಾನ್‌ ಅಲ್‌ ಮರ್ಸೂಸ್‌ ನಡೆಸಿತ್ತು. ಪಾಕಿಸ್ತಾನದ ಸೇನಾ ಮುಖ್ಯಸ್ಥ ಕಳೆದ 2019ರಲ್ಲಿ ಚೀನಾ ಸೇನೆ ನಡೆಸಿದ ಸಮರಾಭ್ಯಾಸದ ಚಿತ್ರವನ್ನು ಕಟೌಟ್‌ ಮಾಡಿಸಿ, ತಮ್ಮ ಸೇನೆಯ ಸಾಹಸವೆಂದು ಬಿಂಬಿಸಿ ಆ ಫೋಟೊವನ್ನು ಪ್ರಧಾನಿ ಶೆಹಬಾಜ್‌ ಷರೀಫ್‌ಗೆ ನೀಡಿದ್ದಾರೆ. ಇಂತಹ ಮೂರ್ಖರಿಬ್ಬರೂ ಭಾರತದ ವಿರುದ್ಧ ಸೆಣೆಸುತ್ತಾರಂತೆ. ನಕಲು ಮಾಡಲೂ ಒಂದಷ್ಟು ಬುದ್ಧಿ ಇರಬೇಕು. ಅದು ಇವರಿಬ್ಬರಿಗೂ ಇಲ್ಲ ಎಂದು ತಿವಿದಿದ್ದಾರೆ. ಇನ್ನೂ ಈ ಮೊದಲು ಬಹರೇನ್‌ನಲ್ಲಿಯೂ ಮಾತನಾಡಿದ್ದ ಓವೈಸಿ, ಭಾರತ ಹಾಗೂ ಪಾಕಿಸ್ತಾ ನಡುವಿನ ಸೇನಾ ಸಂಘರ್ಷಕ್ಕೆ ಪಾಕ್‌ನ ಉದ್ದಟತನವೇ ಕಾರಣವಾಗಿದೆ ಎಂದು ಅವರು ಟೀಕಾ ಪ್ರಹಾರ ನಡೆಸಿದ್ದಾರೆ.

ಪಾಕ್‌ನ ಕೊಳಕು ಮುಖವಾಡವನ್ನು ಬಯಲಿಗೆ ಎಳೆಯುವ ಕೆಲಸ ಮಾಡುತ್ತಿವೆ..

ಇನ್ನೂ ಪ್ರಮುಖವಾಗಿ ಪಾಕ್‌ನ ಭಯೋತ್ಪಾದಕತೆಯನ್ನು ವಿಶ್ವದ ಮುಂದೆ ಇಡಲು ಭಾರತ ಕಳುಹಿಸಿರುವ ಸಂಸದರ 7 ನಿಯೋಗಗಳು ಉತ್ತಮವಾಗಿ ಭಾರತದ ನಿಲುವನ್ನು ಪ್ರಸ್ತುತ ಪಡಿಸುತ್ತಿರುವುದಕ್ಕೆ ಕಾಂಗ್ರೆಸ್‌ ಸಂತಸ ವ್ಯಕ್ತಪಡಿಸಿದೆ. ಅಲ್ಲದೆ ನಮ್ಮ ಎಲ್ಲ ನಿಯೋಗದ ಸದಸ್ಯರು ಅಂತರಾಷ್ಟ್ರೀಯ ಸಮುದಾಯದಲ್ಲಿ ಭಾರತದ ಗಟ್ಟಿಯಾದ ಹೋರಾಟದ ಬಗ್ಗೆ ಮನವರಿಕೆ ಮಾಡುವುದರ ಜೊತೆಗೆ ಪಾಕ್‌ನ ಕೊಳಕು ಮುಖವಾಡವನ್ನು ಬಯಲಿಗೆ ಎಳೆಯುವ ಕೆಲಸ ಮಾಡುತ್ತಿವೆ ಎಂದು ತಿಳಿಸಿದೆ. ಭಾರತವೂ ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿ ಹೊಂದಿದ್ದು ಅದನ್ನು ಅವರೆಲ್ಲ ಜಗತ್ತಿನೆದುರು ಸ್ಪಷ್ಟಪಡಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಹೇಳಿದೆ.

ಇನ್ನೂ ಕಳೆದ ಏಪ್ರಿಲ್‌ 22ರಂದು ಪಹಲ್ಗಾಮ್‌ ಭಯೋತ್ಪಾದಕ ದಾಳಿಯ ಬಳಿಕ ಓವೈಸಿ ತಮ್ಮ ನಿಲುವು ಹಾಗೂ ಚಿಂತನೆಗಳನ್ನು ಬದಿಗಿಟ್ಟು, ಭಾರತದ ಪರ ನಿಂತಿದ್ದಾರೆ. ಅವರ ಪ್ರತಿಯೊಂದು ಕಾರ್ಯಕ್ರಮದಲ್ಲೂ ಪಾಕ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಅಲ್ಲದೆ ಪಾಕ್‌ ನಾಯಕರ ವಿರುದ್ಧ ನೇರವಾಗಿ ಆಕ್ರೋಶ ವ್ಯಕ್ತಪಡಿಸಿ ಅಮಾಯಕ ಪ್ರವಾಸಿಗರ ಸಾವಿಗೆ ನ್ಯಾಯಕ್ಕಾಗಿ ಧ್ವನಿ ಎತ್ತಿ ಪ್ರತಿಭಟನೆ ನಡೆಸಿದ್ದರು. ಈ ಘಟನೆ ನಡೆದಾಗಿನಿಂದಲೂ ಪಾಕ್‌ ವಿರುದ್ಧ ನಿರಂತರವಾಗಿ ಕೆಂಡ ಕಾರುತ್ತಿರುವ ಈ ಓವೈಸಿ ಕೇಂದ್ರ ಸರ್ಕಾರದ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ ಅಂತಿಮವಾಗಿ ಅವರನ್ನೂ ಸಹ ವಿದೇಶಗಳಿಗೆ ತೆರಳುವ ನಿಯೋಗದಲ್ಲಿ ಸರ್ಕಾರ ಸೇರಿಸಿಕೊಡಿತ್ತು. ಇದೀಗ ಅವರು ತಮಗೆ ವಹಿಸಿರುವ ದೇಶಗಳಿಗೆ ತೆರಳಿ ಭಾರತದ ಸಂಕಲ್ಪವನ್ನು ಒತ್ತಿ ಹೇಳುವ ಕೆಲಸ ಮಾಡಿದ್ದಾರೆ.

- Advertisement -

Latest Posts

Don't Miss