Political News: ಸರಿಯಾಗಿ ರಕ್ತ ಸಿಗದೇ ಅಪಘಾತ ಸೇರಿ ಬೇರೆ ಬೇರೆ ಖಾಯಿಲೆ ಬಂದು ಹಲವು ಜೀವಗಳನ್ನು ಜನ ಕಳೆದುಕ“ಳ್ಳುತ್ತಿದ್ದಾರೆ. ಇಂಥ ಘಟನೆ ಮರುಕಳಿಸಬಾರದು ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ರಾಜ್ಯದಲ್ಲಿ ಬೃಹತ್ ರಕ್ತ ದಾನ ಶಿಬಿರ ನಡೆಸುತ್ತಿದೆ.
ಈ ಬಗ್ಗೆ ಆರೋಗ್ಯ ಸಚಿವ ಖಾದರ್ ಅವರು ಎಕ್ಸ್ ಖಾತೆಯಲ್ಲಿ ವೀಡಿಯೋ ಮೂಲಕ ಮಾಹಿತಿ ರವಾನಿಸಿದ್ದಾರೆ. ಅವರು ನೀಡಿದ ಮಾಹಿತಿ ಇಂತಿದೆ.
ಅಪಘಾತ ಮತ್ತು ಇತರೆ ತೀವ್ರ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ರಕ್ತದ ಅವಶ್ಯಕತೆ ಅತ್ಯಂತ ಹೆಚ್ಚಾಗಿದ್ದು, ತುರ್ತು ಸಂದರ್ಭದಲ್ಲಿ ರಕ್ತದ ಲಭ್ಯತೆ ಜೀವ ಉಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನವೆಂಬರ್ 25 ರಂದು ಆಯಾ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಬಂಧುಗಳೇ, ನೀವು ಒಮ್ಮೆ ಮಾಡುವ ರಕ್ತದಾನ ಹಲವು ಕುಟುಂಬಗಳ ನಗುವನ್ನು ಉಳಿಸಲಿದೆ. ನವೆಂಬರ್ 25ರಂದು ಮಾತ್ರವಲ್ಲ, ಆರೋಗ್ಯವಂತ ವ್ಯಕ್ತಿ ಒಬ್ಬರು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನವನ್ನ ಮಾಡಬಹುದು ಹಾಗೂ ರಕ್ತದಾನ ಮಾಡುವುದರಿಂದ ದಾನಿಯ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ.
ಹಾಗಾಗಿ, ರಕ್ತದಾನ ಮಾಡಲು ಶಕ್ತರಿರುವ ವಿದ್ಯಾರ್ಥಿಗಳು, ಯುವಜನರು ಹಾಗೂ ಮಧ್ಯವಯಸ್ಕರು ಹೆಚ್ಚಿನ ಸಂಖ್ಯೆಯಲ್ಲಿ ನವೆಂಬರ್ 25 ರಂದು ನಡೆಯುವ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡುವ ಮೂಲಕ ಈ ಮಹತ್ ಮಾನವೀಯ ಕಾರ್ಯವನ್ನು ಯಶಸ್ವಿಗೊಳಿಸಬೇಕೆಂದು ತಮ್ಮಲ್ಲಿ ಮನವಿ ಮಾಡುತ್ತೇನೆ.
ಮಹಿಳೆಯರು, ವಿದ್ಯಾರ್ಥಿನಿಯರು, ಯುವತಿಯರು ರಕ್ತದಾನ ಮಾಡುವ ಮುನ್ನ ವೈದ್ಯರ ಸಲಹೆಗಳನ್ನ ಪಾಲಿಸಿ ಎಂದು ಸಚಿವ ಯು.ಟಿ.ಖಾದರ್ ವಿಶೇಷ ಮನವಿ ಮಾಡಿದ್ದಾರೆ.




