ಆಶಾ ಕಾರ್ಯಕರ್ತೆಯರ ಕೆಲ ಬೇಡಿಕಾದರೂ ಸ್ಪಂದಿಸಿ: ರಾಜ್ಯ ಸರ್ಕಾರಕ್ಕೆ ಸುಮಲತಾ ಅಂಬರೀಷ್ ಮನವಿ

Political News: ಆಶಾ ಕಾರ್ಯಕರ್ತೆಯರ ಹೋರಾಟ ಸತತ ಎಂಟನೇ ದಿನಕ್ಕೆ ಕಾಲಿರಿಸಿದೆ. ತಮ್ಮ ಕೆಲ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ, ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿಭಟಿಸುತ್ತಿದ್ದಾರೆ. ನಿಮ್ಮ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ನಾವು ಯೋಚಿಸುತ್ತೇವೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ಜಪಾನ್‌ನಿಂದಲೇ ವೀಡಿಯೋ ಕಾಲ್ ಮೂಲಕ ಮನವಿ ಮಾಡಿದ್ದಾರೆ. ಆದರೂ ಆಶಾ ಕಾರ್ಯಕರ್ತೆಯರ ಹೋರಾಟ ಇನ್ನೂ ಮುಗಿದಿಲ್ಲ.

ಇದೀಗ ಮಾಜಿ ಸಂಸದೆ ಸುಮಲತಾ ಅಂಬರೀಶ್ ಈ ಬಗ್ಗೆ ಮಾಧ್ಯಮದ ಜತೆ ಮಾತನಾಡಿದ್ದು, ನಾನು ಸಂಸದೆಯಾಗಿದ್ದಾಗಲೂ ಆಶಾ ಕಾರ್ಯಕರ್ತೆ ಬಗ್ಗೆ ಮಾತನಾಡಿದ್ದೆ. ಅವರ ಕಷ್ಟವನ್ನು ನಾನು ಕೋವಿಡ್ ಸಮಯದಲ್ಲಿ ಕಣ್ಣಾರೆ ಕಂಡಿದ್ದೇನೆ. ಪ್ರಾಣ ಪಣಕ್ಕಿಟ್ಟು ಕೆಲಸ ಮಾಡಿದ್ದರು. ಇದೀಗ ಮನೆ ಮಕ್ಕಳು ಬಿಟ್ಟು ಬೀದಿಗಿಳಿದಿದ್ದಾರೆ. ಅವರ ಬೇಡಿಕೆ ಈಡೇರಿಸದಿದ್ದರೆ, ಅದು ಅನ್ಯಾಯ ಮಾಡಿದಂತಾಗುತ್ತದೆ ಎಂದು ಸುಮಲತಾ ಅಂಬರೀಷ್ ಹೇಳಿದ್ದಾರೆ.

ಅವರು ಕೇಳಿದ್ದೆಲ್ಲಾ ನೀಡಲಾಗದೇ ಇದ್ದರೂ, ಕೆಲ ಬೇಡಿಕೆಗಳನ್ನಾದರೂ ರಾಜ್ಯ ಸರ್ಕಾರ ಈಡೇರಿಸಬಹುದು. ಅವರಿಗೆ ನ್ಯಾಯ ನೀಡಬೇಕೆಂಬುದು ರಾಜ್ಯ ಸರ್ಕಾರಕ್ಕೆ ನನ್ನ ಮನವಿ ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ.

About The Author