ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಕಾಂಗ್ರೆಸ್ ಕಛೇರಿಯಲ್ಲಿ ಜಿಲ್ಲಾ ಮಹಿಳಾ ಘಟಕದ ಕಾಂಗ್ರೆಸ್ ವತಿಯಿಂದ ಮೇಕೆದಾಟು ಪಾದಯಾತ್ರೆಯ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಯಿತು. ಈ ಸಭೆಯಲ್ಲಿ ಮಾಜಿ mlc ಜಲಜ ನಾಯಕ್ (Jalaja Nayak)ಹಾಗೂ ಮಾಜಿ ಮೇಯರ್ ಮಂಜುಳಾ ನಾಯ್ಡ್ ಭಾಗವಹಿಸಿದ್ದರು, ಮೇಕೆದಾಟು ಪಾದಯಾತ್ರೆಯ ಬಗ್ಗೆ ತಾಲೂಕಿನ ಕಾಂಗ್ರೆಸ್ ನ ಮಹಿಳಾ ಕಾರ್ಯಕರ್ತರಿಗೆ ಮಾಹಿತಿಯನ್ನು ನೀಡಲಾಯಿತು.
ಸಭೆಯ ನಂತರ ಮಾದ್ಯಮದವರೊಂದಿಗೆ ಮಾತನಾಡಿದ ಮಾಜಿ ಮೇಯರ್ ಮಂಜುಳಾ ನಾಯ್ಡ್(Manjula Naid) ಇವರು ಮೇಕೆದಾಟು ಪಾದಯಾತ್ರೆಯ ಸಂದರ್ಭದಲ್ಲಿ ಮಹಿಳೆಯರಿಗೆ ವಿಶೇಷವಾಗಿ ಕೊವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡಿಕೊಂಡು ಮಹಿಳೆಯರಿಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಹಾಗೂ ಪಾದಯಾತ್ರೆ ಸಂದರ್ಭದಲ್ಲಿ ನಮ್ಮನ್ನು ತಡೆದಯುವ ಸಂದರ್ಭದ ಬಂದಲ್ಲಿ ನಾವು ಜೈಲಿಗೆ ಹೋಗಲೂ ಸಿದ್ದರಿದ್ದೇವೆ, ಕಾಂಗ್ರೆಸ್ ಬಲಿದಾನಕ್ಕೂ ಸಿದ್ದ ಅಂತ ಮಾತನಾಡಿದ್ರು .
ಇನ್ನೂ ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ MLC ಜಲಜ ನಾಯ್ಕ್ ಭಾರತ ದೇಶ ಜ್ಯಾತ್ಯಾತೀತ ದೇಶ , ಕಾಂಗ್ರೆಸ್ ಎನ್ನುವುದು ಚಿಕ್ಕ ಹಳ್ಳ ಕೊಳ್ಳ ಅಲ್ಲಾ ತನು ಮನ ಬೆಳೆಸಿಕೊಂಡು ಬಂದಿದೆ ಆತ್ಮಸ್ತೈರ್ಯವನ್ನು ಕುಗ್ಗದೆ ಬೆಳಸಿಕೊಂಡು ಬಂದಿರುವಂತದ್ದು, ಕಾಂಗ್ರೇಸ್ ಪಕ್ಷ ಜನರ ಪ್ರಾಣ,ಸ್ಥಾನ ,ಆರೋಗ್ಯ ಭಾಗ್ಯ ಪ್ರತಿಯೊಂದರಲ್ಲೂ ಗಮನವಿಟ್ಟು ಈ ಕಾರ್ಯ ಕೈಗೊಂಡಿದೆ ಎಂದು ಮಾತನಾಡಿದ್ರು .
ಕಾರ್ಯಕ್ರಮದಲ್ಲಿ ಮಹಿಳಾ ಘಟಕದ ಜಲ್ಲಾದ್ಯಕ್ಷೆ ರೇವತಿ ಅನಂತರಾಮ್(Revati Anantharam) ಹಾಗೂ ಪ್ರಭಾವತಿ ಹೇಮಲತ(Prabhavati Hemalatha) ,ನಾಗರತ್ನ ಮಮತ ( Nagaratna,mamata )ಹಾಗೂ ಎಲ್ಲಾ ಮಹಿಳಾ ಕಾರ್ಯಕರ್ತರು ಉಪಸ್ಥಿತಿರಿದ್ದರು.
ಅಭಿಜಿತ್, ಕರ್ನಾಟಕ ಟಿವಿ, ದೊಡ್ಡಬಳ್ಳಾಪುರ.

