Tuesday, October 15, 2024

Latest Posts

ಮುಂಬೈನಲ್ಲಿರುವವರು ಅತೃಪ್ತರಲ್ಲ, ಸಂತೃಪ್ತರು- ಡಿಕೆಶಿ ಲೇವಡಿ

- Advertisement -

ಬೆಂಗಳೂರು: ಸದನದಲ್ಲಿ ಇಂದೂ ಸಹ ಅತೃಪ್ತರ ಕುರಿತಾದ ಚರ್ಚೆ ಮುಂದುವರಿದಿದೆ. ಕಲಾಪದಲ್ಲಿ ಮಾತನಾಡಿದ ಸಚಿವ ಡಿ.ಕೆ ಶಿವಕುಮಾರ್ ರಾಜೀನಾಮೆ ನೀಡಿ ಮುಂಬೈ ಸೇರಿರುವ ಶಾಸಕರು ಅತೃಪ್ತರಲ್ಲ, ಸಂತೃಪ್ತರು ಅಂತ ಕಿಡಿ ಕಾರಿದ್ರು.

ಮಂಕು ತಿಮ್ಮನ ಕಗ್ಗದ ಎದ್ದೆದ್ದು ಬೀಳುತಿಹೆ, ಗುದ್ದಾಡಿ ಸೋಲುತಿಹೆ, ಗದ್ದಲವ ತುಂಬಿ ಪ್ರಸಿದ್ಧನಾಗುತಿಹೆ ಉದ್ದರಿಸುವೆನು ಜಗವನೆನ್ನುತಿಹ ಸಖ ನಿನ್ನುದ್ದಾರವೆಸ್ಟಾಯ್ತೋ ಎಂಬ ಸಾಲಿನಿಂದ ಮಾತು ಶುರು ಮಾಡಿದ ಡಿಕೆಶಿ ರಾಜಕೀಯ ಅನ್ನೋದು ನಂಬರ್ ಗೇಮ್ ಇದ್ದಂತೆ ಇಲ್ಲಿ ಏನು ಬೇಕಾದ್ರೂ ಅಗಬಹುದು ಎಂದರು. ರಾಜಕಾರಣಿಗಳು ನಾವು ಆಡಿದ ಮಾತಿಗೆ ಕಟಿಬದ್ಧರಾಗಿರಬೇಕು, ಸಿದ್ದಾಂತಕ್ಕೆ ಬದ್ಧರಾಗಿರಬೇಕು. ಟಿವಿಯಲ್ಲಿ ಮುಂಬೈನಲ್ಲಿರುವ ಅತೃಪ್ತ ಶಾಸಕರ ಫೋಟೋ ಹಿಡಿದು ಅವರಿಗೆ ಜನತೆ ಶ್ರದ್ಧಾಂಜಲಿ ಅರ್ಪಿಸುತ್ತಿರೋದನ್ನು ಕಂಡು ನನ್ನ ಮನಸ್ಸಿಗೆ ಬಹಳ ನೋವುಂಟಾಯಿತು. ಅವರಲ್ಲಿ ಕೆಲವರಿಗೆ ಚುನಾವಣೆ ಸಮಯದಲ್ಲಿ ಸಣ್ಣ ಅಳಿಲು ಸೇವೆ ಮಾಡಿದ್ದೆ. ಅವರೆಲ್ಲರೂ ನನ್ನ ಸ್ನೇಹಿತರೇ. ಆದರೆ ಶ್ರದ್ಧಾಂಜಲಿ ಸುದ್ದಿ ಕೇಳಿ ಬಹಳ ಬೇಸರವಾಯಿತು ಎಂದರು.

ಇನ್ನು ತಾವು ದಕ್ಷಿಣ ಭಾರತದ ಸುಮಾರು 30 ಮಂದಿ ಸಂಸದರಿಗೆ ನಾನು ಭೋಜನ ಕೂಟ ಏರ್ಪಡಿಸಿದ್ದೆ. ಆ ಸಮಯದಲ್ಲಿ ಕೆಲವರು ನನ್ನ ಮುಂದಾಳತ್ವದಲ್ಲೇ ಬಿಜೆಪಿ ಸೇರ್ಪಡೆಯಾಗೋಣ ನೋಡಿ ಅಂತ ನನಗೇ ಬುದ್ಧಿವಾದ ಹೇಳಿದ್ರು. ಆಗ ನಾನು ಇಲ್ಲ ಅದೆಲ್ಲಾ ಆಗೋಲ್ಲ ಜನ ನನ್ನನ್ನು ಹೊಡೆದು ಹಾಕಿಬಿಡ್ತಾರೆ ಸ್ವಲ್ಪ ತಾಳ್ಮೆಯಿಂದಿರಿ ಅಂತ ನಾನೇ ಸಮಾಧಾನ ಹೇಳಿದ್ದೆ. ಇನ್ನು ಇದಾದ ಬಳಿಕ ಮುನಿರತ್ನ ರಾಜೀನಾಮೆ ಕುರಿತು ಮಾಹಿತಿ ಬಂದ ಕೂಡಲೇ ನಾನು ವಿಧಾನಸೌಧಕ್ಕೆ ಓಡೋಡಿ ಬಂದೆ. ಮುನಿರತ್ನ ರಾಜೀನಾಮೆ ನೋಡಿ ಕೋಪ ಬಂತು ಆಗ ನಾನೇ ಮುನಿರತ್ನ ರಾಜೀನಾಮೆ ಪತ್ರವನ್ನು ಹರಿದುಹಾಕಿದೆ ಎಂದರು.

ಇನ್ನು ಜೀವನದಲ್ಲಿ ಯಶಸ್ಸು ಕಾಣುವುದಕ್ಕೆ ಧರ್ಮರಾಯನನ್ನು ಧರ್ಮತ್ವ ಇರಬೇಕು, ದಾನಶೂರ ಕರ್ಣನ ದಾನತ್ವ ಇರಬೇಕು ಅರ್ಜುನನ ಗುರಿ ಇರಬೇಕು, ಭೀಮನ ಬಲ ಇರಬೇಕು, ವಿದುರನ ನೀತಿ ಇರಬೇಕು, ಕೃಷ್ಣನ ತಂತ್ರ ಇರಬೇಕು. ಆದರೆ ಇದರ ಜೊತೆಗೆ ಯಡಿಯೂರಪ್ಪನ ಛಲ ಇರಬೇಕು. ಯಾಕಂದ್ರೆ 7 ಬಾರಿ ಪ್ರಯತ್ನಿಸಿ 15 ಮಂದಿ ಶಾಸಕರನ್ನು ಸೆಳೆಯೋದ್ರಲ್ಲಿ ಸಫಲರಾಗಿದ್ದಾರೆ ಎಂದರು. ಮುಂಬೈನಲ್ಲಿರುವ ಆ ಶಾಸಕರು ಅತೃಪ್ತರಲ್ಲಿ, ತೃಪ್ತರು , ಸಂತೃಪ್ತರು ಅಂತ ಡಿಕೆಶಿ ಲೇವಡಿ ಮಾಡಿದ್ರು.

- Advertisement -

Latest Posts

Don't Miss