ಬೆಂಗಳೂರು: ರಾಜ್ಯದ ಚುನಾವಣಾ ಫಲಿತಾಂಶ ನನಗೆ ದಿಗ್ಬ್ರಮೆ ಮೂಡಿಸಿದೆ. ಈ ಫಲಿತಾಂಶವನ್ನ ನಾನೆಂದೂ ನಿರೀಕ್ಷೆ ಮಾಡಿರಲಿಲ್ಲ ಅಂತ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಡಿಕೆಶಿ, ನಾನು ಪಕ್ಷದ ಅನುಮತಿ ಪಡೆದು ಫ್ಯಾಮಿಲಿ ಟ್ರಿಪ್ ಗೆ ಹೋಗಿದ್ದೆ. ಇದೀಗ ರಾಜ್ಯಕ್ಕೆ ಬಂದಿರೋ ನನಗೆ ಫಲಿತಾಂಶ ದಿಗ್ಬ್ರಮೆ ಮೂಡಿಸಿದೆ. ನನ್ನ ಸಹೋದರ ಗೆದ್ದಿದ್ದಾನೆ ಅನ್ನೋ ಖುಷಿಯೂ ನನಗಿಲ್ಲ. ಮಲ್ಲಿಕಾರ್ಜುನ ಖರ್ಗೆ ಸೋತು ಡಿ.ಕೆ ಸುರೇಶ್ ಒಬ್ಬ ಇದ್ರೆ ಯಾವ ಪ್ರಯೋಜನವೂ ಇಲ್ಲ ಅಂತ ಡಿಕೆಶಿ ಬೇಸರ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಒಂದಂಕಿಗೆ ಇಳಿದಿರೋದು ಊಹಿಸಲೂ ಅಸಾಧ್ಯ. ಎಲ್ಲಿ ತಪ್ಪಾಗಿದೆ ಅಂತ ಪರಾಮರ್ಶಿಸಬೇಕಿದೆ ಎಂದಿದ್ದಾರೆ. ಅಲ್ಲದೆ ರಾಜ್ಯದಲ್ಲಿ ಆಪರೇಷನ್ ಮಾಡಲು ಹೊರಟಿರೋ ಯಡಿಯೂರಪ್ಪ ಕೈಲಿ ಏನೇನ್ ಇದ್ಯೋ ಅದೆಲ್ಲಾ ಮಾಡಲಿ ಅಂತ ಡಿಕೆಶಿ ಸವಾಲ್ ಹಾಕುವ ರೀತಿ ಪ್ರತಿಕ್ರಿಯಿಸಿದ್ದಾರೆ.
ಗಾಂಧಿ ಹೇಳಿದಂತೆ ಕಣ್ಣು ಬಾಯಿ ಕಿವಿ ಮುಚ್ಚಿಕೊಂಡಿದ್ದೇನೆ
ರಾಜ್ಯ ಕಾಂಗ್ರೆಸ್ ನಾಯಕರು ಮಾಧ್ಯಮದೆದುರು ಹೇಳಿಕೆ ನೀಡಬಾರದೆಂಬ ಆಜ್ಞೆ ಇರೋದ್ರಿಂದ ಇನ್ನ ಹೆಚ್ಚು ಮಾತನಾಡೋದಿಲ್ಲ. ಸದ್ಯಕ್ಕೆ ಗಾಂಧಿ ಹೇಳಿದಂತೆ ಕಣ್ಣು, ಬಾಯಿ, ಕಿವಿ ಮುಚ್ಚಿಕೊಂಡಿದ್ದೇನೆ. ಆದ್ರೂ ಮಾಧ್ಯಮದ ಜೊತೆ ನನಗೆ ಅವಿನಾಭಾವ ಸಂಬಂಧ ಇರೋದ್ರಿಂದ ಇಷ್ಟು ಮಾತನಾಡಿದ್ದೇ ಹೆಚ್ಚು, ಯಾವ ನಾಯಕರ ವಿರುದ್ಧವೂ ಕಮೆಂಟ್ ಮಾಡಲ್ಲ ಅಂತ ಡಿಕೆಶಿ ಪ್ರತಿಕ್ರಿಯಿಸಿದ್ದಾರೆ.
ರಿಸಲ್ಟ್ ಬಗ್ಗೆ ಡಿಕೆಶಿ ವಿವರವಾದ ಪ್ರತಿಕ್ರಿಯೆ ಈ ವಿಡಿಯೋದಲ್ಲಿದೆ. ತಪ್ಪದೇ ನೋಡಿ.