ಹಾಸನ: ಹಾಸನದಲ್ಲಿಂದು ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, 13ರಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹಾಸನ ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ. ಜನ ಸಂಪರ್ಕಯಾತ್ರೆ ಹಿನ್ನೆಲೆಯಲ್ಲಿ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರೂ ಕೂಡಾ ಆಗಮಿಸುತ್ತಿದ್ದಾರೆ. ಬೆಳಗ್ಗೆ 11 ಗಂಟೆಗೆ ಬೇಲೂರಿನಲ್ಲಿ, ಮಧ್ಯಾಹ್ನ 3 ಗಂಟೆಗೆ ಸಕಲೇಶಪುರದಲ್ಲಿ ಜನಸಂಪರ್ಕ ಸಮಾವೇಶ ನಡೆಯಲಿದೆ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಆಗಿರುವ ಅಭಿವೃದ್ಧಿಯನ್ನು ವಿವರಿಸಲಿದ್ದಾರೆ ಎಂದು ಹೇಳಿದರು.
ಅಲ್ಲದೇ, ಬೇಲೂರು ಹಾಗೂ ಸಕಲೇಶಪುರ ತಾಲೂಕಿನಲ್ಲಿ ಇರೋ ಸಮಸ್ಯೆಗಳ ಪರಿಹಾರಕ್ಕೆ ಘೋಷಣೆ ಮಾಡಿವವರಿದ್ದಾರೆ. ಕಾಫಿಬೆಳೆಗಾರರು ಒತ್ತುವರಿ ಮಾಡಿರುವ ಜಾಗವನ್ನು ಲೀಸ್ಗೆ ಕೊಡಲು ಸರ್ಕಾರ ತೀರ್ಮಾನಿಸಿದೆ. ಕಾಫಿಬೆಳೆಗಾರರಿಗೆ ಹೊಸವರ್ಷಕ್ಕೆ ಬಿಜೆಪಿ ಸರ್ಕಾರ ಉಡುಗೊರೆ ನೀಡಲಿದೆ. ಸಕಲೇಶಪುರ ಹಾಗೂ ಬೇಲೂರು ಭಾಗದ ಜನರಿಗೂ ಸಿಹಿಸುದ್ದಿ ಕೊಡುತ್ತೇವೆ . ಅದು ಕಾಡಾನೆ ಸಮಸ್ಯೆಯ ಆನೆ ಕಾರಿಡಾರ್ ಆಗಿಬಹುದು . ಶಾಶ್ವತವಾದ ಪರಿಹಾರವನ್ನ ಕೊಡಬೇಕೆಂಬ ಹಿನ್ನೆಲೆಯಲ್ಲಿ ಕ್ರಮಕೈಗೊಳ್ಳಲು ಮುಂದಾಗಿದ್ದೇವೆ. ಬರೋ ಅಧಿವೇಶನ ಅದನ್ನು ಪ್ರಸ್ತಾಪಿಸಿ ಬಿಲ್ ಪಾಸ್ ಮಾಡಿಸುತ್ತೇವೆ ಎಂದು ಹಾಸನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಚಿವ ಗೋಪಾಲಯ್ಯ ಮಾಹಿತಿ ನೀಡಿದ್ದಾರೆ.