Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಮಾಧ್ಯಮದ ಜೊತೆ ಮಾತನಾಡಿದ್ದು, ರಾಜ್ಯದಲ್ಲಿ ಬೇಸಿಗೆಯ ಉಷ್ಣತೆ ಜಾಸ್ತಿಯಾಗುತ್ತಿದೆ. ಕುಡಿಯುವ ನಿರ್ವಹಣೆ ಅತ್ಯಂತ ಮಹತ್ವದ ಕೆಲಸ. ಕುಡಿಯುವ ನಿರ್ವಹಣೆ ಕುರಿತು ಸಂಪುಟಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಪ್ರಮುಖ ಜಲಾಶಯಗಳಿಂದ ಕುಡಿಯುವ ನೀರು ಸಮರ್ಪಕವಾಗಿ ಬಿಡುಗಡೆ ಮಾಡುವಕುರಿತು ಚರ್ಚೆ ಮಾಡಲಾಗಿದೆ. ರಾಜ್ಯದಾದ್ಯಂತ ಈ ಬಗ್ಗೆ ಸೂಕ್ತ ನಿರ್ಣಯ ತೆಗೆದುಕೊಳ್ಳುವ ನಿಟ್ಟಿನಲ್ಲಿ ಒಂದು ಸಮೀತಿ ರಚನೆ ಮಾಡಲಾಗಿದೆ. ನಾಗಮೋಹನ ದಾಸ್ ವರದಿ ನಿನ್ನೆ ಕ್ಯಾಬಿನೆಟ್ ಗೆ ಬಂದಿತ್ತು. ನಾವು ಒಪ್ಪಿದ್ದೇವೆ, ವರದಿ 60 ದಿನಗಳ ವರೆಗೆ ವಿಸ್ತಾರ ಮಾಡಿದ್ದೇವೆ. 30-40 ದಿನಗಳಲ್ಲಿ ಸಮಿತಿ ಮುಗಿಸಬಹುದು ಎಂದು ಹೇಳಿದ್ದಾರೆ.
ಹಾಲು, ಕರೆಂಟ್ ದರ ಹೆಚ್ಚಳ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಹಾಲಿನ ದರ ಕರೆಂಟ್ ದರ ಹೆಚ್ಚಳಕ್ಕೆ ಎಚ್.ಕೆ.ಪಾಟೀಲ್ ಸಮರ್ಥನೆ ಮಾಡಿಕೊಂಡಿದ್ದಾರೆ. ದೇಶದ ಯಾವದೇ ರಾಜ್ಯ ನೋಡಿ, ನಮ್ಮ ರಾಜ್ಯದಲ್ಲಿ ಐದು ರೂಪಾಯಿ ಕಡಿಮೆ ಇದೆ. ರೈತರ ಬೇಡಿಕೆ ಗಮನಿಸಿ,ಎಷ್ಟು ಕಡಿಮೆ ಸಾಧ್ಯವೋ,ಅಷ್ಟು ಹೆಚ್ಚು ಮಾಡಿದ್ದೇವೆ. ಹೆಚ್ಚಳ ಮಾಡಿರೋ 4 ರೂಪಾಯಿ ರೈತರಿಗೆ ಹೋಗುತ್ತೆ. ವಿದ್ಯುತ್ ದರ ಹೆಚ್ಚಳ ಅನಿವಾರ್ಯ. ಬಡವರಿಗೆ ಉಚಿತ ಕೊಡ್ತೀವಿ, ಶ್ರೀಮಂತರಿಗೆ ಚಾರ್ಜ್ ಮಾಡುತ್ತಿದ್ದೇವೆ ಎಂದು ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.
ಮುಸ್ಲಿಂ ಮೀಸಲಾತಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಮುಸಲ್ಮಾನರಿಗೆ ಮೀಸಲಾತಿ ವಿಚಾರವಾಗಿ ಬಿಜೆಪಿಯವರು ಅಫಡವಿಟ್ ಕೊಟ್ಟಿದ್ದಾರೆ. ಬಿಜೆಪಿಯವರು ಇದನ್ನ ರಾಜಕೀಯ ವಿಷಯವಾಗಿ ಮಾಡ್ತಿದಾರೆ ಎಂದು ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಸಚಿವ ರಾಜಣ್ಣ ಪುತ್ರ ಅವರ ಕೊಲೆ ಆರೋಪ ವಿಚಾರದ ಬಗ್ಗೆ ಮಾತನಾಡಿದ ಸಚಿವರು, ಆ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ. ನೀವು ಗೃಹಸಚಿವರನ್ನು ಕೇಳಿ ಎಂದಿದ್ದಾರೆ. ಅಲ್ಲದೇ ಹನಿಟ್ರ್ಯಾಪ್ ಪ್ರಕರಣದ ಬಗ್ಗೆ ಕೇಳಿದ್ದಕ್ಕೆ, ಹನಿಟ್ರ್ಯಾಪ್ ಎಂದರೇನು ಎಂದು ನನಗೆ ಗೊತ್ತಿಲ್ಲವೆಂದು ಪಾಟೀಲ್ ಹೇಳಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ ಉಚ್ಛಾಟನೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಅದು ಬಿಜೆಪಿ ಪಕ್ಷದ ವಿಚಾರ ಬಿಜೆಪಿಯವರನ್ನೇ ಕೇಳಿ ಎಂದಿದ್ದಾರೆ. ಕಾಂಗ್ರೆಸ್ ಗೆ ಬಂದ್ರೆ ಸ್ವಾಗತ ಮಾಡ್ತೀರಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅದು ಹೈಕಮಾಂಡ್ ಗೆ ಬಿಟ್ಟ ವಿಚಾರ ಕೆಪಿಸಿಸಿ ಅಧ್ಯಕ್ಷರನ್ನ ಕೇಳಬೇಕು. ಡಿ.ಕೆ. ಶಿವಕುಮಾರ್ ಸಂವಿಧಾನದ ಬದಲಾವಣೆ ಮಾಡ್ತೀವಿ ಎಂದು ಮಾತನಾಡಿಲ್ಲ. ಕಾಂಗ್ರೆಸ್ ಯಾವಾಗಲೂ ಸಂವಿಧಾನದ ರಕ್ಷಣೆಗೆ ಬದ್ದವಾಗಿದೆ ಎಂದಿದ್ದಾರೆ.