- Advertisement -
ಶಿವಮೊಗ್ಗ: ಸರ್ಕಾರ ಉಳಿಸಿಕೊಳ್ಳೋದಕ್ಕೆ ಕೆಲ ಕಾಂಗ್ರೆಸ್ ನಾಯಕರ ಉದ್ಧಟತನ ಸಹಿಸಿಕೊಳ್ಳಲು ಸಾಧ್ಯವಿಲ್ಲ. ರೋಷನ್ ಬೇಗ್ ಅಮಾನತು ಮಾಡಿರೋದು ಸರಿಯಾಗಿಯೇ ಇದೆ ಅಂತ ಸಚಿವ ಕೃಷ್ಣ ಭೈರೇಗೌಡ ಸಮರ್ಥಿಸಿಕೊಂಡಿದ್ದಾರೆ.
ಶಿವಮೊಗ್ಗ ನಗರದಲ್ಲಿ ಮಾತನಾಡಿದ ಸಚಿವ ಕೃಷ್ಣ ಭೈರೇಗೌಡ, ಶಾಸಕರಾದ ರೋಷನ್ ಬೇಗ್, ರಮೇಶ್ ಜಾರಕಿಹೊಳಿ ಮೈತ್ರಿ ಸರ್ಕಾರದ ಬಗ್ಗೆ ಎಲ್ಲೆ ಮೀರಿ ಮಾತನಾಡುತ್ತಿದ್ದಾರೆ. ಸರ್ಕಾರದ ವಿರುದ್ಧ ಅವರು ಮಾಡುತ್ತಿರೋ ಆರೋಪಗಳೆಲ್ಲಾ ನಿರಾಧಾರವಾಗಿವೆ. ಇವರ ಕೀಳು ಮಟ್ಟದ ವರ್ತನೆ ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಹೀಗಾಗಿ ರೋಷನ್ ಬೇಗ್ ಅಮನಾತುಗೊಳಿಸಿರೋದು ಸರಿಯಾಗಿಯೇ ಇದೆ ಅಂತ ಸಚಿವ ಕೃಷ್ಣ ಭೈರೇಗೌಡ ಸಮರ್ಥಿಸಿಕೊಂಡರು.
ಸಂಸದೆ ಸುಮಲತಾ ತಪ್ಪು ಮಾಡಿದ್ರಾ ಅಥವಾ ಮಾಧ್ಯಮದವರಾ?? ಮಿಸ್ ಮಾಡದೇ ಈ ವಿಡಿಯೋ ನೋಡಿ
- Advertisement -