Hubli News: ಹಳೇ ಹುಬ್ಬಳ್ಳಿಯ ಬೀರಬಂದ ಓಣಿ ನಿವಾಸಿ ಹುಸೇನ್ ಸಾಬ್ ಕಳಸ, ಜೋರಾಗಿ ಮಳೆ ಬಂದು ಕೊಚ್ಚಿ ಹೋಗಿ, ಕೆಲ ದಿನಗಳ ಹಿಂದೆ ಸಾವನ್ನಪ್ಪಿದ್ದರು. ಇಂದು ಸಚಿವ ಸಂತೋಷ್ ಲಾಡ್ ಅವರು ಹುಸೇನ್ ಮನೆಗೆ ಭೇಟಿ ನೀಡಿ, ಮನೆಯವರಿಗೆ ಸಾಂತ್ವನ ಹೇಳಿದ್ದಾರೆ. ಅಲ್ಲದೇ ಪರಿಹಾರ ದಾಖಲೆ 5 ಲಕ್ಷ ಕೂಡ ವಿತರಿಸಿದ್ದಾರೆ.
ಜೂನ್ 11ರಂದು ದುರ್ಘಟನೆ ನಡೆದಿದ್ದು, ಬೈಕ್‌ನಲ್ಲಿ ಹೋಗುವಾಗ ಹುಸೇನ್ ಹುಬ್ಬಳ್ಳಿಯ ಬೆಳಗಲಿ ಕ್ರಾಸ್ ಬಳಿ ಚರಂಡಿ ನೀರಲ್ಲಿ ಹುಸೇನ್ ಸಾಬ್ ಕೊಚ್ಚಿ ಹೋಗಿದ್ದ. ನಿರಂತರ ಕಾರ್ಯಾಚರಣೆ ನಂತರ ಮಳ್ಳಿನ ಪೊದೆಯಲ್ಲಿ ಮೃತದೇಹ ಪತ್ತೆಯಾಗಿತ್ತು.
ಭೇಟಿ ಬಳಿಕ ಮಾತನಾಡಿರುವ ಸಚಿವ ಸಂತೋಷ್ ಲಾಡ್, ಮಳೆ ನೀರಿನಲ್ಲಿ ಕೊಚ್ಚಿ ಹೋಗಿ ಆಕಸ್ಮಿಕವಾಗಿ ದುರ್ಘಟನೆ ಸಂಭವಿಸಿದೆ. ಈ ರೀತಿಯ ಘಟನೆಗಳು ಮರುಕಳಿಸಬಾರದು. ಚರಂಡಿ ಎಲ್ಲೆಲ್ಲಿ ತೆಗೆದಿದೆಯೋ, ಅದನ್ನು ಮುಚ್ಚಲು ಸೂಚಿಸಿದ್ದೇನೆ. ಮಳೆಗೆ ಜಿಲ್ಲೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. 120 ಮನೆಗಳು ಭಾಗಶಃ ಬಿದ್ದಿವೆ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.
ಸಿಎಂ ಬದಲಾವಣೆ ಬಗ್ಗೆ ಎಚ್. ವಿಶ್ವನಾಥ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಲಾಡ್, ಅವರ ಹೇಳಿಕೆ ಬಗ್ಗೆ ಮಾಹಿತಿ ಇಲ್ಲ. ಸಿಎಂ ಬದಲಾವಣೆ ಬಗ್ಗೆ ನಾವು ಯಾರೂ ಮಾತನಾಡುವುದಿಲ್ಲ. ವಿಶ್ವನಾಥ ಏನು ಮಾತನಾಡಿದ್ದಾರೆ ಗೊತ್ತಿಲ್ಲ. ಅವರು ಮಾತನಾಡಿದ್ದಾರೆ. ಈ ಬಗ್ಗೆ ಅವರೇ ಹೆಚ್ಚಿನ ಮಾಹಿತಿ ಹೇಳಬೇಕು. ಸಚಿವ ಸಂಪುಟ ಬದಲಾವಣೆ ಬಗ್ಗೆ ಯಾರೂ ದೆಹಲಿಗೆ ಹೋಗಿಲ್ಲ. ಅದೇ ಕಾರಣಕ್ಕೆ ದೆಹಲಿ ಹೋಗಿದ್ದಾರೆ ಅಂತಾ ಯಾಕೆ..? ಬೇರೆ ವಿಚಾರಕ್ಕೆ ಹೈಕಮಾಂಡ್ ಕರೆದಾಗ ಹೋಗಿರತಾರೆ ಎಂದಿದ್ದಾರೆ.