Friday, November 22, 2024

Latest Posts

ಎಡೆಕುಂಟೆ ಹೊಡೆದು ಡೋಣ್ ಯೂರಿಯಾ ಸಿಂಪಡಿಸುವ ಮೂಲಕ ನ್ಯಾನೋಕಾರ್ಯ ವೀಕ್ಷಿಸಿದ ಕೃಷಿ ಸಚಿವ

- Advertisement -

Dharwad News: ಧಾರವಾಡ: ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಅವರು ಧಾರವಾಡ ತಾಲೂಕಿನ ಹೆಬ್ಬಳ್ಳಿ, ಕವಲಗೇರಿ, ಚಂದನಮಟ್ಟಿ ಗ್ರಾಮಗಳಲ್ಲಿ ಕೃಷಿ ಪ್ರಾತ್ಯಕ್ಷಿಕೆ ಹಾಗೂ ಫಲಾನುಭವಿಗಳಿಗೆ ಕೃಷಿ ಯಂತ್ರೋಪಕರಣಗಳನ್ನು ವಿತರಣೆ ಮಾಡಿದರು.

ರೈತರ ಜಮೀನುಗಳಿಗೆ ತೆರಳಿದ ಕೃಷಿ ಸಚಿವರು ಅಲ್ಲಿ ಮಾನವ ಆಧಾರಿತ ಎಡೆಕುಂಟೆ ಹೊಡೆಯುವ ಸೈಕಲ್‌ಗಳನ್ನು ಫಲಾನುಭವಿ ರೈತರಿಗೆ ವಿತರಿಸಿದರು. ಅಲ್ಲದೇ ಸ್ವತಃ ತಾವೇ ಹೊಲದಲ್ಲಿ ಆ ಸೈಕಲ್ ಮೂಲಕ ಎಡೆಕುಂಟೆ ಹೊಡೆದು ಗಮನಸೆಳೆದರು.

ಹೆಬ್ಬಳ್ಳಿ ಗ್ರಾಮದಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡ ರೈತ ಯಲ್ಲಪ್ಪ ಈಶ್ವರಪ್ಪ ಸಾಲಿ ಅವರ ಹೊಲಕ್ಕೆ ಭೇಟಿ ನೀಡಿದ ಸಚಿವರು ಅವರೊಂದಿಗೆ ಸಮಾಲೋಚನೆ ನಡೆಸಿದರು. ನಂತರ ಹೆಬ್ಬಳ್ಳಿ ಗ್ರಾಮದ ಸಿದ್ದಪ್ಪ ಬಕ್ಕೋಜಿ ಅವರ ಜಮೀನಿನಲ್ಲಿ ಡೋಣ್ ಮೂಲಕ ನ್ಯಾನೋ ಯೂರಿಯಾ ಸಿಂಪಡಣೆ ಪ್ರಾತ್ಯಕ್ಷಿಕೆಗೆ ಚಾಲನೆ ನೀಡಿದರು.

ಇದೇ ಗ್ರಾಮದಲ್ಲಿ ಸಚಿವರು ಆಹಾರ ಮತ್ತು ಪೌಷ್ಠಿಕ ಭದ್ರತಾ ಯೋಜನೆಯಡಿ ರೈತರಿಗೆ ರಾಸಾಯನಿಕ, ರಸಗೊಬ್ಬರ ಕೀಟ ನಾಶಕ ವಿತರಣೆ ಮಾಡಿದರು. ಹೈಟೆಕ್ ಹಾರ್ವೆಸ್ಟ್ ಹಬ್ ಯೋಜನೆಯಡಿ ಸಂಗಪ್ಪ ಕಲ್ಲಪ್ಪ ಹಲಿಯಾಳ ಅವರಿಗೆ ಬಹು ಬೆಳೆ ಹೈಟೆಕ್ ಕಟಾವು ಯಂತ್ರವನ್ನು ಸಚಿವರು ವಿತರಿಸಿದರು.

ಇದಾದ ಬಳಿಕ ಸಚಿವರು ಬೈಕ್ ಮೇಲೆಯೇ ಕೆಲವೊಂದಿಷ್ಟು ಹೊಲಗಳಿಗೆ ಭೇಟಿ ನೀಡಿ ಪ್ರಾತ್ಯಕ್ಷಿಕೆಗಳನ್ನು ವೀಕ್ಷಣೆ ಮಾಡಿದ ನಂತರ ಮಾತನಾಡಿದ ಅವರು, ರಾಜ್ಯದಾದ್ಯಂತ ರೈತರ ಬೇಡಿಕೆ ಹಿನ್ನೆಲೆಯಲ್ಲಿ ಕೆಲವು ಕೃಷಿ ಸೂಕ್ಷ್ಮ ನೀರಾವರಿ ಪರಿಕರಗಳ ಸವಲತ್ತು ಪಡೆಯಲು ಇರುವ ಕಾಲಮಿತಿಯನ್ನು ಏಳು ವರ್ಷಗಳಿಂದ 5 ವರ್ಷಗಳಿಗೆ ಇಳಿಸಲು ನಿರ್ಧಾರ ಕೈಗೊಳ್ಳಲಾಗುವುದು. ನಮ್ಮ ಸರ್ಕಾರ ಹಿಂದೆಂದಿಗಿಂತ ಕೃಷಿಗೆ ಹೆಚ್ಚಿನ ಆದ್ಯತೆ ನೀಡಿದೆ.

ಮುಂಗಾರು ಹಂಗಾಮಿಗೆ 1700 ಕೋಟಿ ರೂಪಾಯಿ ಬೆಳೆ ವಿಮೆ ಪಾವತಿಸಲಾಗಿದೆ. ಕಳೆದ ಸಾಲಿನಲ್ಲಿ ಸುಮಾರು 1000 ಕೋಟಿ ರೂಪಾಯಿ ವೆಚ್ಚದಲ್ಲಿ ಕೃಷಿ ಪರಿಕರಗಳನ್ನು ವಿತರಿಸಲಾಗಿದೆ ಎಂದರು.

ಟೀಂ ಇಂಡಿಯಾ ಫೈನಲ್​ಗೆ- ರೋಹಿತ್ ಕಣ್ಣೀರು

ಸಿದ್ದರಾಮಯ್ಯ ಎಷ್ಟು ದಿನ ಸಿಎಂ ಆಗಿರ್ತಾರೋ ಗೊತ್ತಿಲ್ಲಾ: ಬಿ.ವೈ. ವಿಜಯೇಂದ್ರ

Karnataka ;ಕೆಜಿಎಫ್ ಹೊಸ ಚಾಪ್ಟರ್ ಶುರು ;ಮತ್ತೆ ಶುರುವಾಗಲಿದೆ ಚಿನ್ನದ ಬೇಟೆ

- Advertisement -

Latest Posts

Don't Miss