ಬೆಂಗಳೂರು : ಪದ್ಮನಾಭನಗರ (Padmanabhanagar)ಕ್ಷೇತ್ರದ ಬಿಜೆಪಿ ಶಾಸಕ ಆರ್ ಅಶೋಕ್(MLA R Ashok) ಗೆ ಕೋವಿಡ್ ಸೋಂಕು ದೃಡಪಟ್ಟಿದೆ. ಎರಡು ದಿನಗಳಿಂದ ಕಂದಾಯ ಸಚಿವ ಆರ್ ಅಶೋಕ್, ಸಿಎಂ ಬೊಮ್ಮಾಯಿ(CM Bommai), ಬಿಎಸ್ ಯಡಿಯೂರಪ್ಪ (B S Yeddyurappa)ಜೊತೆ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಕೊರೋನ ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಕಾರಣಕ್ಕೆ ಮಂಗಳವಾರ ಸಿಎಂ ಬೊಮ್ಮಾಯಿ, ಕಂದಾಯ ಸಚಿವ ಆರ್ ಅಶೋಕ್, ಆರೋಗ್ಯ ಸಚಿವ ಕೆ ಸುಧಾಕರ್, ಹಾಗೂ ತಜ್ಞರ ಜತೆ ಸುದೀರ್ಘ ಸಭೆ ನಡೆಸಿದ್ದರು. ನಂತರ ಆರ್ ಅಶೋಕ್ ಸಭೆಯ ಬಳಿಕ ಕಠಿಣ ನಿಯಮಗಳನ್ನು ಕುರಿತು ಮಾಧ್ಯಮಗಳೊಂದಿಗೆ ಮಾಹಿತಿಯನ್ನು ನೀಡಿದರು. ನಂತರ ನಿನ್ನೆ ವಿಧಾನಸೌಧದಲ್ಲಿ ನಡೆದ ವಿಧಾನಪರಿಷತ್ತಿನ 25 ಅಭ್ಯರ್ಥಿಗಳ ಪ್ರಮಾಣವಚನ ಸ್ವೀಕಾರದಲ್ಲಿ ಸಹ ಭಾಗಿಯಾಗಿದ್ದರು. ಈಗ ಅವರಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ. ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ(
Manipal Hospital)ಯಲ್ಲಿ ಚಿಕಿತ್ಸೆಯನ್ನ ಪಡೆಯುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
Minister of Revenue ಆರ್ ಅಶೋಕ್ ಗೆ ಕೊರೋನಾ ಪಾಸಿಟಿವ್..!
- Advertisement -
- Advertisement -