Friday, October 24, 2025

Latest Posts

ಸಚಿವ ಪ್ರಿಯಾಂಕ್ ಖರ್ಗೆಯೇ ನನ್ನ ಮೇಲೆ ದಾಳಿ ಮಾಡಿಸಿದ್ದಾರೆ: ಮಣಿಕಂಠ ರಾಠೋಡ್ ಆರೋಪ

- Advertisement -

kalaburagi News: ಕಲಬುರಗಿ: ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಮೇಲೆ ಹಲ್ಲೆ ನಡೆದಿದ್ದು, ಚಿಕಿತ್ಸೆ ನಂತರ ಅವರು ಚೇತರಿಸಿಕೊಂಡಿದ್ದಾರೆ.

ಈ ಬಗ್ಗೆ ಮಾಧ್ಯಮದ ಜೊತೆ ಗಾಯಾಳು ಮಣಿಕಂಠ ರಾಠೋಡ್ ಮಾತನಾಡಿದ್ದು, ಸಚಿವ ಪ್ರಿಯಾಂಕ್ ಖರ್ಗೆ ಅವರಿಂದಾಗಿಯೇ ನನ್ನ ಮೇಲೆ ದಾಳಿ ನಡೆದಿದೆ. ಇದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಅವರೇ ಕಾರಣವಾಗಿದ್ದಾರೆ. ಇತ್ತೀಚೆಗೆ ನಾನು ಅವರ ವಿರುದ್ದ ಬೆಂಗಳೂರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದೇನೆ. ನನ್ನ ಕೊಲೆ ಮಾಡಿಸುವ ಉದ್ದೇಶದಿಂದ ನನ್ನ ಮೇಲೆ ದಾಳಿ ಮಾಡಿಸಿದ್ದಾರೆ. ನನಗೆ ಜೀವ ಬೆದರಿಕೆ ಇದ್ರೂ ಸಹ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನನ್ನ ಗನ್ ಮ್ಯಾನ್ ಸೌಲಭ್ಯ ಕಿತ್ತುಕೊಂಡಿದೆ.

ನಾನು ನನ್ನ ಫಾರ್ಮಹೌಸ್‌ನಿಂದ ಕಲಬುರಗಿಗೆ ಬರುವಾಗ ವಾಹನ ಅಡ್ಡಗಟ್ಟಿ ಬೈಕ್ ಮೇಲೆ ಬಂದ ದುರ್ಷ್ಕಮಿಗಳು ಏಕಾ ಏಕಿ ದಾಳಿ ಮಾಡಿದ್ದಾರೆ. ನನ್ನ ಕಾರ್ ಮೇಲೆ ಕಲ್ಲು ತೂರಿದ್ದಾರೆ.ರಾಡ್ ನಿಂದ ಕಾರ್ ವಿಂಡೋ ಒಡೆದಿದ್ದಾರೆ. ನಂತರ ನನ್ನ ಮೇಲೆ ಬಾಟಲ್‌ಗಳಿಂದ ಮಾಡಿದ್ದಾರೆ. ನಾನು ಕೈ ಅಡ್ಡ ತಂದ ಪರಿಣಾಮ ತೀವ್ರ ಗಾಯವಾಗಿದೆ. ಕಿವಿ ಹಾಗೂ ತಲೆಗೂ ಬಾಟಲ್ ಚುಚ್ಚಿದ ಪರಿಣಾಮ ಗಾಯಗಳಾಗಿವೆ ಎಂದು ಮಣಿಕಂಠ ರಾಠೋಡ್ ಹೇಳಿದ್ದಾರೆ.

ಭಾರತ ವಿಶ್ವಕಪ್‌ ಗೆದ್ದರೆ 100 ಕೋಟಿ ರೂ ಬಂಪರ್‌ ಬಹುಮಾನ!: ಆಸ್ಟ್ರೋಟಾಕ್‌ ಸಿಇಒ ಘೋಷಣೆ

ಇಸ್ರೇಲ್ ಪ್ರಧಾನಿಯನ್ನು ಗುಂಡಿಕ್ಕಿ ಕೊಲ್ಲಬೇಕು ಎಂದ ಕಾಂಗ್ರೆಸ್ ಸಂಸದ.

ತಲೆತಲಾಂತರದಿಂದ ಮಠದ ಭಕ್ತರಾದ ನಾವು ಮುರುಘಾ ಶರಣರ ಜೊತೆ ಇರುತ್ತೇವೆ; ಶಾಸಕ ವಿರೇಂದ್ರ ಪಪ್ಪಿ

- Advertisement -

Latest Posts

Don't Miss