ಕೋಲಾರ : ಕೆಂಪೇಗೌಡರ ಕಂಚಿನ ಪ್ರತಿಮೆಗೆ ಪವಿತ್ರ ಮಣ್ಣು ಸಂಗ್ರಹ ಅಭಿಯಾನಕ್ಕೆ, ಕಂದಾಯ ಸಚಿವ ಆರ್. ಅಶೋಕ್ ಚಾಲನೆ ನೀಡಿದ್ದಾರೆ. ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನ.11ರಂದು ನಾಡ ಪ್ರಭ ಕೆಂಪೇಗೌಡ 108 ಎತ್ತರದ ಕಂಚಿನ ಪ್ರತಿಮೆ ಅನಾವರಣ ಹಿನ್ನೆಲೆ, ಕೋಲಾರ ಜಿಲ್ಲೆಯಲ್ಲಿ ಎಂಟು ದಿನಗಳ ಕಾಲ ಸಂಚರಿಸಲಿರುವ ಕೆಂಪೇಗೌಡ ರಥಯಾತ್ರೆಗೆ ಕಂದಾಯ ಸಚಿವ ಆರ್ ಆಶೋಕ, ಚಾಲನೆ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಸಚಿವರು, ದಕ್ಷಿಣ ಭಾರತದಲ್ಲಿ ಒಂದು ಪುತ್ಥಳಿ ನಿರ್ಮಾಣ ಮಾಡಿ ಉದ್ಘಾಟನೆ ಮಾಡಲಾಗುತ್ತಿದೆ. ಕೆಂಪೇಗೌಡ ಥೀಮ್ ಪಾರ್ಕ್ ಲ್ಲಿ ಎಲ್ಲೆಡೆ ಸಂಗ್ರಹ ಮಾಡಲಾಗುತ್ತಿರುವ ಮಣ್ಣನ್ನು ಹಾಕಲಾಗುವುದು. ಕೆಂಪೇಗೌಡ ಹೆಸರಲ್ಲಿ ರಾಜಕೀಯ, ಸರ್ಕಾರ ಮಾಡಿದೋರು ತುಂಬ ಜನ ಇದ್ದಾರೆ. ಕೆಂಪೇಗೌಡ ಅವರು ಬೆಂಗಳೂರು ಕಟ್ಟಿದಾಗ ಎಲ್ಲಾ ಜಾತಿ ಜನಾಂಗದ ಪೇಟೆಗಳನ್ನ ಕಟ್ಟಿದ್ದಾರೆ. ಹಳೆ ಮೈಸೂರು ಸೇರಿದಂತೆ ಮೈಸೂರು ಭಾಗದಲ್ಲಿ ಕೆಂಪೇಗೌಡ ಅವರ ಪುತ್ಥಳಿ ಸಾಗುತ್ತಿದೆ ಎಂದು ಹೇಳಿದರು.
ಅಮಾನತುಗೊಂಡಿದ್ದ ಸರ್ಕಲ್ ಇನ್ಸಪೆಕ್ಟರ್ ಹೃದಯಾಘಾತದಿಂದ ಸಾವು..
ಅಲ್ಲದೇ, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರು ಉತ್ತರ ದಕ್ಷಿಣ ಪಾದಯಾತ್ರೆ ಮಾಡುತ್ತಿದ್ದಾರೆ. ಈಗಾಗಲೆ ಅವರಿಬ್ಬರು ಉತ್ತರ ದಕ್ಷಿಣ ಎನ್ನುತ್ತಿದ್ದಾರೆ. ಜೋಡೊ ಯಾತ್ರೆ ಓಡೋ ಯಾತ್ರೆಯಾಗಿದೆ, ಅದರಿಂದ ಅವರಿಗೆ ಮರ್ಯಾದೆ ಹೋಯ್ತೆ ಹೊರತು ಲಾಭ ಇಲ್ಲ. ಕಾಂಗ್ರೆಸ್ ಪಾದಯಾತ್ರೆಗಳು ಅವರು ಅಸ್ಥಿತ್ವ ಉಳಿಸಿಕೊಳ್ಳಲು ಮಾಡುತ್ತಿದ್ದಾರೆ. ಪಾದಯಾತ್ರೆಗಳು ಮಾಡುವುದರಿಂದ ಯಾರಿಗೆ ಯಾವುದೆ ಲಾಭ ಇಲ್ಲ ಎಂದು ಹೇಳಿದ್ದಾರೆ.
ಅಲ್ಲದೇ ಈ ಬಗ್ಗೆ ಮಾತು ಮುಂದುವರಿಸಿದ ಸಚಿವರು, ಜೋಡೊ ಮಾಡಿದವರೆ ಕಾಂಗ್ರೆಸ್ ಮಾಡಿದ ತಪ್ಪುಗಳನ್ನ ಮುಚ್ಚಿ ತೋಡೊ ಮಾಡುತ್ತಿದ್ದಾರೆ. ಅವರದೆ ಸರ್ಕಾರ ಇದ್ದಾಗ ಭಾಗ್ಯಗಳು ಕೊಟ್ಟವರು ೧೨೦ ರಿಂದ ೭೦ ಕ್ಕೆ ಯಾಕೆ ಇಳಿದ್ರು. ಖರ್ಗೆ ಅವರು ಗುಲ್ಬರ್ಗಾ ದಲ್ಲಿ ಗೆಲ್ಲಕ್ಕಾಗಿಲ್ಲ ಇನ್ನೂ ರಾಜ್ಯದಲ್ಲಿ ಯಾವುದೆ ಪರಿಣಾಮ ಬೀರಲ್ಲ. ಕಾಂಗ್ರೆಸ್‌ನಲ್ಲಿ ಕೆಲವರಿಗೆ ನೆಲೆ ಇಲ್ಲದೆ ಓಡಾಡುತ್ತಿದ್ದಾರೆ, ಹಾಗಾದ್ರೆ ಸಿದ್ದರಾಮಯ್ಯ ಅವರು ಬಾದಾಮಿ, ರಾಹುಲ್ ಗಾಂಧಿ ಕೇರಳಕ್ಕೆ ಹೋಗಿದ್ದ ಯಾಕೆ. ನಮ್ಮ ಪಕ್ಷ ನೂರಕ್ಕೆ ನೂರರಷ್ಟು ಅಧಿಕಾರಕ್ಕೆ ಬರುತ್ತೆ, ನಮ್ಮದು ಹಿಂದುತ್ವ ಆಧಾರದ ಮೇಲೆ ಅಧಿಕಾರಕ್ಕೆ ಬರುತ್ತೆ. ಒಕ್ಕಲಿಗ ಮೀಸಲಾತಿ ವಿಚಾರವಾಗಿ ಸ್ವಾಮೀಜಿಯವರ ಜೊತೆ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ.
ಹಾಸನಾಂಬಾ ದೇವಿ ದರ್ಶನ ಮಹೋತ್ಸವ ಯಶಸ್ವಿಯಾಗಿ ಮುಕ್ತಾಯ..
ಇನ್ನು ಒಕ್ಕಲಿಗರು ಪೆನ್ ಹಿಡಿಯಬೇಕು ಎಂಬ ಸ್ವಾಮೀಜಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅಶೋಕ್, ನನಗೆ ಅಂತಹ ಯಾವುದೆ ಆಸೆ ಇಲ್ಲ, ಈಗಾಗಲೆ ಸಿಎಂ ಎಂದುಕೊಂಡವರು ಏನಾಗುತ್ತೆ ಎಂದು ನಮಗೆ ಗೊತ್ತಿದೆ. ಬೊಮ್ಮಾಯಿ ಅವರ ನೇತೃತ್ವದಲ್ಲಿ ಮುಂದಿನ ಚುನಾವಣೆ ಗೆ ತೆರಳುತ್ತೇವೆ. ನಾನು ಈಗಾಗಲೆ ಗ್ರಾಮ ವಾಸ್ತವ್ಯ ಮಾಡುತ್ತಿದ್ದೇನೆ. ಕುಮಾರಸ್ವಾಮಿಯವರು ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ, ಅವರು ಎರಡಂಕಿ ದಾಟಲ್ಲ ಎಂದು ಕೋಲಾರದ ಪ್ರವಾಸಿ ಮಂದಿರದಲ್ಲಿ ಕಂದಾಯ ಸಚಿವ ಆರ್ ಅಶೋಕ್ ಹೇಳಿಕೆ ನೀಡಿದ್ದಾರೆ.