Wednesday, April 2, 2025

Latest Posts

50ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡು ನಾನು ಲಕ್ಕಿ ರಾಸ್ಕಲ್ ಎಂದ ಸಚಿವ ಸಂತೋಷ್ ಲಾಡ್

- Advertisement -

Dharwad News: ಧಾರವಾಡ: ಧಾರವಾಡದಲ್ಲಿ ಸಚಿವ ಸಂತೋಷ್ ಲಾಡ್ ತಮ್ಮ 50ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿರುವ ಲಾಡ್, ನನಗೆ ಈಗ 50 ವರ್ಷ. ನಾನು ಲಕ್ಕಿ ರಾಸ್ಕಲ್. ಸಾಕಷ್ಟು ಕಾಲ ರಾಜಕೀಯ ಜೀವನ ಕಳೆದಿದ್ದೇನೆ. ನಾನು ಆಶೀರ್ವಾದದಿಂದ ಬೆಳೆದಿದ್ದೇನೆ. ನಾನು ಸಣ್ಣ ವಯಸ್ಸಿನಲ್ಲಿ ತಂದೆಯನ್ನ ಕಳೆದುಕೊಂಡಿದ್ದೇನೆ. ನಮ್ಮ ಲಾಡ್ ಕುಟುಂಬ ಅವರ ಆಶೀರ್ವಾದದಿಂದ ಇಲ್ಲಿವರೆಗೆ ಬಂದಿದ್ದೇನೆ. ದೇವರ ಆಶೀರ್ವಾದ ನನಗೆ ಇದೆ ಎಂದಿದ್ದಾರೆ.

ಬಜೆಟ್ ನಲ್ಲಿ ಹಲವಾರು ಇಲಾಖೆವಾರುಗೆ ಅನುದಾನವನ್ನ ಕೇಳಿದ್ದೇನೆ. ಅದರಲ್ಲೂ ಧಾರವಾಡ ಜಿಲ್ಲೆಗೆ ಹೆಚ್ಚು ಅನುದಾನ ನಿಡುವಂತೆ ಕೇಳಿದ್ದೇನೆ. ಕಾರ್ಮಿಕ ಇಲಾಖೆಗೆ ಹೆಚ್ಚು ಬಜೆಟ್ ಬಿಡುಗಡೆ ಮಾಡಲು ಕೇಳಿದ್ದೇವೆ ಎಂದು ಲಾಡ್ ಹೇಳಿದರು.

ನೆಕ್ಸ್ಟ ಸಿಎಂ ಆಕಾಂಕ್ಷಿ ಡಿಸಿಎಂ ಡಿಕೆಶಿ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಲಾಡ್, ಅವರನ್ನೆ ಕೇಳಬೇಕು ಎಂದಿದ್ದಾರೆ. ಸದ್ಗುರು ಅವರು ರಾಜಕೀಯ ಮಾತನಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಲಾಡ್,  ಸದ್ಗುರು ಅವರು ದೇಶದ ವಿಚಾರವಾಗಿ ಮಾತನಾಡಿದ್ದಾರೆ. ಶಿವರಾತ್ರಿ ಇರುವ ಸಂಧರ್ಭದಲ್ಲಿ ಮಾತನಾಡಿದ್ದಾರೆ. ಅವರು ರಾಜಕೀಯ ಮಾತನಾಡಿದ್ದಾರೆ ಅನ್ಸುತ್ತೆ. ಆತರ ರಾಜಕೀಯ ಮಾತಾಡೋದಿದ್ರೆ ಒಂದು ಬಹಿರಂಗವಾಗಿ ಚರ್ಚೆ ಮಾಡಬಹುದು. ಸದ್ಗುರು ಅವರಿಗೆ ಅಭಿಮಾನಿಗಳು ಇದಾರೆ. ನಾನು ಕೂಡಾ ಅವರ ಅಭಿಮಾನಿ ಅವರು ಮಾತನಾಡಿದ್ದು ಎಷ್ಟು ಸರಿ ಎಷ್ಟು ತಪ್ಪು ಅನ್ನೋದು ಅವರೆ ತಿಳಿದುಕ್ಕೊಳ್ಳಬೇಕು. ಅಭಿಮಾನಿಗಳು ಇದ್ದಾಗ ಅವರು ಮಾತನಾಡುತ್ತಾರೆ. ಶಿವರಾತ್ರಿ ಹಬ್ಬದಲ್ಲಿ ಆ ತರಹಾ ಅವರು ಮಾತನಾಡಬಾರದು. ಆತರ ಮಾತನಾಡಿದ್ದು ಸರಿಯಲ್ಲ ಎಂದು ಸಂತೋಷ್ ಲಾಡ್ ಅಭಿಪ್ರಾಾಯ ಪಟ್ಟಿದ್ದಾರೆ.

ಗೃಹ ಲಕ್ಷ್ಮಿ ಹಣ ವಿಳಂಬ ಕಾಂಗ್ರೆಸ್ ನವರಿಗೆ ದಪ್ಪು ಚರ್ಮ ಇದೆ ಎಂದ ಜೋಶಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಜೋಶಿ, ಸರ್ಕಾರ ದಿವಾಳಿ ಆಗಿದೆ ಎಂದು ಜೋಶಿ ಅವರು ಹೇಳ್ತಾರೆ ಅದನ್ನ ಆಮೇಲೆ ವಿಚಾರ ಮಾಡೋಣ. ಕೇಂದ್ರ ಸರಕಾರ ಎನಾಗಿದೆ ಎಂಬುದನ್ನ ಅವರು ಹೇಳ್ತಾರಾ..? ಅವರು ರಾಜ್ಯದವರಿದ್ದಾರೆ ಪ್ರತಿಸಾರಿ ರಾಜ್ಯ ಸರಕಾರಕ್ಕೆ ಅಟ‌್ಯಾಕ್ ಮಾಡಿ ಹೋಗ್ತಾರೆ ಅಲ್ವಾ..? ಕೇಂದ್ರ ಸರಕಾರದಿಂದ 11 ಬಜೆಟ್ ಮಂಡನೆಯಾಗಿವೆ. ಕರ್ನಾಟಕಕ್ಕೆ ಧಾರವಾಡ ಜಿಲ್ಲೆಗೆ ಕೇಂದ್ರದಿಂದ ಎನೂ ಅನುದಾನ ತಂದಿದ್ದಾರೆ ಅದು ಚರ್ಚೆ ಗೆ ಬರಲಿ. ಎರಡು ತಿಂಗಳು ದುಡ್ಡು ಹಾಕಿಲ್ಲ ಅಂದ್ರೆ ದಿವಾಳಿ ಆಗಿದೆ ಸರಕಾರ ಎಂದು ಅವರು ಹೇಳ್ತಾರೆ. ಕೇಂದ್ರ ಸರಕಾರದ ಬಗ್ಗೆ ಚರ್ಚೆ ಮಾಡ್ತಾರಾ ಎಂದು ಜೋಶಿಗೆ ಸಂತೋಷ್ ಲಾಡ್ ಟಾಂಗ್ ಕೊಟ್ಟಿದ್ದಾರೆ.

ನಾವು ಎನನ್ನ ಹೇಳಿದ್ದೆವೆ ಎನನ್ನ ಮಾಡಿಲ್ಲ, ಅವರು ಎನನ್ನ ಹೇಳಿದ್ದಾರೆ ಅವರು ಏನನ್ನ ಮಾಡಿಲ್ಲ ಅದರ ಬಗ್ಗೆ ಚರ್ಚೆ ಮಾಡಲಿ. ಚರ್ಚಗೆ ನಾನು ಸಿದ್ದ ಅವರು ಚರ್ಚೆಗೆ ಸಿದ್ದರಿದ್ದಾರಾ ಎಂದು ಕೇಳಿ..? ಪ್ರಧಾನಿ ಅವರು ಡೈಲಾಗ ಜೋಶಿ ಅವರಿಗೆ ನೋಡಲಿಕ್ಕೆ ಹೇಳಿ. ದೇಶದಲ್ಲಿ ಯಾರು ಅತಿ ಸುಳ್ಳು ಹೇಳ್ತಾ ಇದಾರೆ ಅನ್ನೋದು ಗೊತ್ತಾಗುತ್ತೆ, ಹಾಗೆ ಯಾರು ದಪ್ಪ ಚರ್ಮದವರು ಅನ್ನೋದು ಗೊತ್ತಾಗುತ್ತೆ. ಕಪ್ಪು ಹಣ 15 ಲಕ್ಷ ಹಣ ಕೊಡುವ ವಿಚಾರ, 100 ಬುಲೆಟ್ ಟ್ರೆನ್ ಗಳು ಬರ್ತಾವೆ, ನೂರಾರು ಸುಳ್ಳು ಭರವಸೆಗಳನ್ನ ಕೊಟ್ಡಿದ್ದಾರೆ. ನಾನು ಹೇಳಿದ್ದು ಕೇವಲ ಐದು. ಮೋದಿ ಅವರ ಸುಳ್ಳುಗಳನ್ನ ಹೇಳಲು ಇಡಿ ದಿನ ಬೇಕಾಗುತ್ತೆ. ಕೇವಲ ಕಾಂಗ್ರೆಸ್ ಸರಕಾರದ ಬಗ್ಗೆ ಮಾತನಾಡೋದು ಸರಿಯಲ್ಲ. ಕೇಂದ್ರದಲ್ಲಿ ಮೋದಿ ಸರಕಾರ ಕೊಟ್ಟ ಭರವಸೆಗಳ ಬಗ್ಗೆ ಜೋಶಿ ಮಾತನಾಡಲಿ ಎಂದು ಸಚಿವ ಸಂತೋಷ್ ಲಾಡ್‌ ಕೇಂದ್ರಕ್ಕೆ ಟಾಂಗ್ ಕೊಟ್ಟಿದ್ದಾರೆ.

- Advertisement -

Latest Posts

Don't Miss