Dharwad News: ಧಾರವಾಡ: ಹಾಲಿನ ದರ ಹೆಚ್ಚಾಗಿದ್ದು, ಧಾರವಾಡದಲ್ಲಿ ಈ ಬಗ್ಗೆ ಮಾತನಾಡಿರುವ ಸಚಿವ ಸಂತೋಷ್ ಲಾಡ್, ಹಾಲಿನ ದರ ಹೆಚ್ಚಿಸಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.
ದೇಶದಲ್ಲಿ ಏನೇನೂ ಏರಿಕೆ ಆಗಿದೆ ಅದರ ಬಗ್ಗೆ ವಿಪಕ್ಷದವರು ಮಾತನಾಡಲ್ಲ.ವಿಪಕ್ಷಗಳು ರಾಜ್ಯದಲ್ಲಿ ನಾವು ದರ ಹೆಚ್ಚಳ ಮಾಡಿದರ ಬಗ್ಗೆ ಮಾತನಾಡುತ್ತಾರೆ. ಕೇಂದ್ರದಲ್ಲಿ ಕಳೆದ 10 ವರ್ಷದಲ್ಲಿ ಎನೆನೂ ಹೆಚ್ಚಳವಾಗಿದೆ ಎಂಬುದನ್ನ ಅವರ ಮಾತನಾಡಲಿ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.
ಡಿಸಿಎಂ ವಿಚಾರವಾಗಿ ಮಾತನಾಡಿದ ಸಂತೋಷ್, ಕೋವಿಡ್ ನಲ್ಲಿ ಡೆಡ್ ಬಾಡಿಗೆ ಮೋದಿ ಸಾಹೇಬ್ರುದ್ದ ಪೋಟೋ ಹಾಕಿದ್ರಲ್ಲ ಅವಾಗ ಮಾತಾಡಿದ್ರಾ..? ಟೀಕೆ ಮಾಡಬೇಕು ಒಂದು ಲೆವೆಲ್ ಟೀಕೆ ಮಾಡಬೇಕು.ಸುಮ್ಮನೆ ಟೀಕೆ ಮಾಡೋದು ಸರಿಯಲ್ಲ. ಸಿಟಿ ರವಿ ಅವರು ಏನೇನೋ ಮಾತನಾಡುತ್ತಾರೆ.. ಮೋದಿ ಅವರ ಬಗ್ಗೆ ಮಾತಾನಾಡಿದರೆ ಟಿಕೆ ಅಂತಾರೆ. ಮೋದಿ ಅವರು ಅನೌನ್ಸ್ ಮಾಡಿರುವ ಸ್ಕಿಮಗಳು ಸರಕಾರದ್ದುಗಳಲ್ಲ, ಅವರು ಸ್ವಂತ ಸ್ಕಿಮ್ ಗಳನ್ನ ಜಾಸ್ತಿ ಅನೌನ್ಸ್ ಮಾಡಿದ್ದಾರೆ, ಅದಕ್ಕೆ ಒಂದು ಕ‌್ಯಾಬಿನೆಟ್ ಇದೆ.
ನಮ್ಮನ್ನ ಟೀಕೆ ಮಾಡೋದು ಸರಿಯಲ್ಲ. ನಾವು ಎರಡು ರೂ ದರ ಹೆಚ್ಚಳ ಮಾಡಿದ್ದೇವೆ.ಗ‌್ಯಾರಂಟಿಗೆ 60,000 ಕೋಟಿ ಹಣ ಹೊಂದಿಸಲು ಬೆಲೆ ಹೆಚ್ಚಳ ಮಾಡಲಾಗಿದೆ. ರಾಜ್ಯದ ಅಭಿವೃದ್ಧಿಗೋಸ್ಕರ ಹಾಲಿನ ದರ, ಡಿಸೆಲ್,ಪೆಟ್ರೋಲ್ ದರ ಹೆಚ್ಚಳ ಮಾಡಲಾಗಿದೆ. ಬೇರೆ ರಾಜ್ಯಗಳಿಗಿಂತ ನಾವು ಕಡಿಮೆ ದರ ಮಾಡಿದ್ದೇವೆ ಎಂದು ಧಾರವಾಡದಲ್ಲಿ ಸಚಿನ ಸಂತೋಷ್ ಲಾಡ್ ಹೇಳಿದ್ದಾರೆ.
Political Special: ಮೋದಿ ಬ್ರ್ಯಾಂಡ್‌ಗೆ ಏಟು ಬಿದ್ದಿದೆ: ಚೇತನ್ ಅಹಿಂಸಾ ವಿಶೇಷ ಸಂದರ್ಶನ
ಕರ್ನಾಟಕಕ್ಕೆ ಕಾಂಗ್ರೆಸ್ ಕೂಡ ಶತ್ರೂ, ಬಿಜೆಪಿ ಕೂಡ ಶತ್ರು: ಚೇತನ್ ಅಹಿಂಸಾ ವಿಶೇಷ ಸಂದರ್ಶನ
ಮದುವೆಯಾಗಿ ಒಂದೇ ತಿಂಗಳಲ್ಲಿ ಕೋಟಿ ಕೋಟಿ ಸಾಲದಲ್ಲಿ ಮುಳುಗಿದ ನಟಿಯ ಗಂಡ: ಆಸ್ತಿ ಮಾರಾಟ

