Hubli News: ಹುಬ್ಬಳ್ಳಿ: ಸಚಿವರಾದ ಸಂತೋಷ ಲಾಡ್ , ಪರಮೇಶ್ಬರ ಇಂದು ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದರು. ಸಿಲಿಂಡರ್ ಸೋರಿಕೆ ಪ್ರಕರಣ ಹಿನ್ನೆಲೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸಚಿವರು ಭೇಟಿ ನೀಡಿದರು.
ಹುಬ್ಬಳ್ಳಿಯ ಸಾಯಿ ನಗರದ ಈಶ್ವರ ದೇವಸ್ಥಾನದಲ್ಲಿ ಸಿಲಿಂಡರ್ ಸೋರಿಕೆಯಾಗಿ ಒಂಬತ್ತು ಜನ ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳು ಅಯ್ಯಪ್ಪ ಮಾಲಾಧಾರಿಗಳು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕಾರಣಕ್ಕೆ ಇಂದು ಇಬ್ಬರೂ ಸಚಿವರು ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ, ಸರಿಯಾಗಿ ಚಿಕಿತ್ಸೆ ನೀಡಲು ಸೂಚನೆ ನೀಡಿದರು.
ಈ ವೇಳೆ ಮಾತನಾಡಿದ ಸಂತೋಷ ಲಾಡ್, ಕಿಮ್ಸ್ ಗೆ ಪರ್ಮನೆಂಟ್ ನಿರ್ದೇಶಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ನಿರ್ಲಕ್ಷ್ಯ ಆರೋಪ ಮಾಡೋದು ಸರಿ ಇದೆ. ಅದರ ಜೊತೆಗೆ ಪಾಸಿಟಿವ್ ಕೂಡಾ ನೋಡಬೇಕು. ದಿನಕ್ಕೆ 2500 ರೋಗಿಗಳು ಬರ್ತಾರೆ, ಏಳು ಜಿಲ್ಲೆಗಳಿಂದ ರೋಗಿಗಳು ಬರ್ತಾರೆ. ಕಿಮ್ಸ್ ಒಳ್ಳೆ ಕೆಲಸ ಮಾಡತೀದೆ. ಅಂದುಕೊಂಡಷ್ಟು ನೆಗೆಟಿವ್ ಇಲ್ಲ, ಪಾಸಿಟಿವ್ ಕೂಡಾ ಇದೆ. ನಿರ್ಲಕ್ಷ್ಯವೂ ನಿಜ ,ಯಾರಾದ್ರೂ ತಪ್ಪು ಮಾಡಿದ್ರೆ ಕ್ರಮ ಕೈಗೊಳ್ಳಲಾಗುವುದು ಎಂದು ಸಂತೋಷ್ ಲಾಡ್ ಹೇಳಿದ್ದಾರೆ.