Dharwad Political News: ಧಾರವಾಡ: ಅಂಗವಿಕಲ ಕಟ್ಟಡ ಕಾರ್ಮಿಕರೊಬ್ಬರಿಗೆ ಸ್ಕೂಟರ್ ನೀಡಿ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಮಾನವೀಯತೆ ಮೆರೆದಿದ್ದಾರೆ.
ಯಾರೇ ನೆರವು ಕೋರಿ ಬಂದವ ಕಷ್ಟಕ್ಕೆ ಸದಾ ಮಿಡಿಯುವ ಸಹೃದಯಿ ಸಂತೋಷ್ ಲಾಡ್ ಅವರು. ಇದೀಗ ಅವರು ಕಟ್ಟಡ ಕಾರ್ಮಿಕನಿಗೆ ಆಸರೆಯಾಗಿದ್ದಾರೆ.
ನಾರಾಯಣ ಶಿರಗುಪ್ಪಿ ಅವರು ಕಟ್ಟಡ ನಿರ್ಮಾಣ ಕೆಲಸ ಮಾಡಿಕೊಂಡಿದ್ದರು. ಒಮ್ಮೆ ಕೆಲಸದಲ್ಲಿ ತೊಡಗಿದ್ದಾಗ ಅವರ ಕಾಲಿಗೆ ಪೆಟ್ಟಾಗಿ ತೊಂದರೆಗೊಳಗಾದರು. ಇದರಿಂದ ಅವರ ದುಡಿಮೆಗೆ ಕಷ್ಟವಾಗಿತ್ತು.
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟದ ವತಿಯಿಂದ ಹುಬ್ಬಳ್ಳಿಯಲ್ಲಿ ಅಕ್ಟೋಬರ್ 28 ರಂದು ನಡೆದಿದ್ದ ಧಾರವಾಡ ಜಿಲ್ಲಾ ಕಟ್ಟಡ ಕಾರ್ಮಿಕರ ಸಮಾವೇಶಕ್ಕೆ ಬಂದಿದ್ದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ನಾರಾಯಣ ಶಿರಗುಪ್ಪಿ ಅವರನ್ನು ಗಮನಿಸಿ ಕಾಲಿಗೆ ಪೆಟ್ಟಾಗಿರುವುದರ ಬಗ್ಗೆ ತಿಳಿದಿದ್ದರು. ಅಂದೇ ಇವರ ಸಹಾಯಕ್ಕೆ ಬರುವುದಾಗಿ ತಿಳಿಸಿದ್ದ ಅವರು ಬೈಕ್ ನೀಡುವುದಾಗಿ ಆಶ್ವಾಸನೆ ನೀಡಿದ್ದರು.
ಅಕ್ಟೋಬರ್ 28 ರಂದು ನೀಡಿದ್ದ ಭರವಸೆಯನ್ನು ಈಡೇರಿಸಿರುವ ಸಚಿವ ಲಾಡ್ ಅವರು ನವೆಂಬರ್ 1 ರಂದು ಸ್ಕೂಟರ್ ವಿತರಿಸಿ ಹೃದಯಶ್ರೀಮಂತಿಕೆ ಮೆರೆದರು. ಸಚಿವರ ಈ ಕಾರ್ಯಕ್ಕೆ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಸಂತೋಷ್ ಲಾಡ್ ಅವರು ತಮ್ಮ ಸಂತೋಷ್ ಲಾಡ್ ಫೌಂಡೇಶನ್ ಮೂಲಕ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಅವರ ಬಳಿ ಯಾರೇ ನೆರವು ಕೋರಿ ಬಂದರೆ ಅವರನ್ನು ನಿರಾಸೆಗೊಳಿಸಿಲ್ಲ. ಬಡ ಹೆಣ್ಣು ಮಕ್ಕಳು, ಪ್ರತಿಭಾವಂತ ವಿದ್ಯಾರ್ಥಿಗಳು ಹೀಗೆ ಕಷ್ಟದಲ್ಲಿರುವ ಯಾರೇ ಲಾಡ್ ಅವರ ಬಳಿ ಅಳಲು ತೋಡಿಕೊಂಡರೆ ಅವರಿಗೆ ನೆರವಾಗುತ್ತಾರೆ.
ಇದೀಗ ಕಟ್ಟಡ ಕಾರ್ಮಿಕನಿಗೆ ಸ್ಕೂಟರ್ ನೀಡಿ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ದಾರೆ. ಸ್ಕೂಟರ್ ಪಡೆದಿರುವ ನಾರಾಯಣ ಅವರು ಸಚಿವರಿಗೆ ಒಳಿತಾಗಲಿ ಎಂದು ಹಾರೈಸಿದ್ದಾರೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್‌ನ ಕಳ್ಳತನ ಗೈದ ಬಂಧಿಸಿದ ಪೋಲಿಸರು
ಎರಡುವರೆ ವರ್ಷ ಆದ್ಮೇಲೆ ಸಿಎಂ ಬದಲಾಗ್ತಾರಾ ಎಂಬ ಪ್ರಶ್ನೆಗೆ ಸಚಿವ ರಾಜಣ್ಣ ಹೇಳಿದ್ದೇನು..?
ನನ್ನ ಸರ್ಕಾರದ ತಪ್ಪುಗಳಿದ್ದರೆ ಬರೆಯಿರಿ, ಕಾಗೆ ಸುದ್ದಿ ಬೇಡ: ಮಾಧ್ಯಮಕ್ಕೆ ಸಿಎಂ ಕರೆ