- Advertisement -
ರಾಯಚೂರು: ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಆಪ್ತ ಉಮೇಶ್ ಮೇಲೆ ಐಟಿ ದಾಳಿ ಕುರಿತಂತೆ ಸಾರಿಗೆ ಸಚಿವ ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದಾರೆ.
ರಾಯಚೂರಿನ ಸಿಂಧನೂರು ಪಟ್ಟಣದಲ್ಲಿ ಮಾತನಾಡಿದ ಶ್ರೀರಾಮುಲು, IT ದಾಳಿ ಇವತ್ತು ಒಬ್ಬರ ಮೇಲೆ ಆದ್ರೆ ನಾಳೆ ಮತ್ತೊಬ್ಬರ ಮೇಲೆ ನಡೆಯುತ್ತೆ. ಅವರ ಮೇಲೆ ನಡೀಬೇಕು ಅಂತಾ ಏನಿಲ್ಲಾ. ಕಾನೂನಾತ್ಮಕವಾಗಿ ಏನ್ ಆಗುತ್ತೋ ಅದು ಆಗುತ್ತೆ ಎಂದರು.
ಇನ್ನು ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಯಡಿಯೂರಪ್ಪನವರನ್ನು ಬಿಜೆಪಿ ಹೈಕಮಾಂಡ್ ಟಾರ್ಗೆಟ್ ಮಾಡಿದೆಯಾ ಅನ್ನೋ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಮುಲು, ಹಾಗಾದ್ರೆ ಐಟಿ ದಾಳಿ ನಡೆಯೋದೇ ತಪ್ಪು ಅನ್ನೋ ಹಾಗೆ ಆಗುತ್ತೆ ಅಂತ ಹೇಳಿದ್ದಾರೆ. ಇನ್ನು ಇಲ್ಲಿ ತನ್ನ ಕೆಲಸವನ್ನು ಐಟಿ ಮಾಡಿದೆ. ಯಾರದ್ದೂ ತಪ್ಪು ಅಂತ ಹೇಳಲಾಗೋದಿಲ್ಲ ಅಂತ ಸಚಿವ ಶ್ರೀರಾಮುಲು ಹೇಳಿದರು.
- Advertisement -