- Advertisement -
ರಾಯಚೂರು: ವಾಲ್ಮೀಕಿ ಸಮಾಜಕ್ಕೆ 7.5ರಷ್ಟು ಮೀಸಲಾತಿ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ ಅಂತ ರಾಯಚೂರಿನಲ್ಲಿ ಸಚಿವ ಶ್ರೀರಾಮುಲು ತಿಳಿಸಿದ್ದಾರೆ. ಸಿಂಧನೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದ ರಾಮುಲು, ಬಿಜೆಪಿ ಸರ್ಕಾರಾವಧಿಯಲ್ಲೇ ಮೊದಲಿಗೆ ವಾಲ್ಮೀಕಿ ಜಯಂತಿ ಆಚರಣೆ ಮಾಡಲಾಯ್ತು. ರಾಜ್ಯದೆಲ್ಲೆಡೆ ವಾಲ್ಮೀಕಿ ಭವನ ನಿರ್ಮಾಣ ಆಗುತ್ತಿರೋದು ಕೂಡ ಬಿಜೆಪಿ ಸರ್ಕಾರದಲ್ಲೇ. ಸದ್ಯ ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಕುರಿತು ಸ್ವಲ್ಪ ಮಟ್ಟಿಗೆ ಕಾನೂನಾತ್ಮಕ ತೊಡಕಿದೆ
ನಾವು ಎಂದಿಗೂ ಮೀಸಲಾತಿ ನೀಡೋದಿಲ್ಲ ಅಂತ ಹೇಳಿಲ್ಲ. ವರದಿ ಬಂದ ಕೂಡಲೇ ಅದರ ಬಗ್ಗೆ ಚರ್ಚಿಸಿ ಆದಷ್ಟು ಬೇಗ ಮೀಸಲಾತಿ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ ಅಂತ ಶ್ರೀರಾಮುಲು ಸ್ಪಷ್ಟನೆ ನೀಡಿದ್ದಾರೆ.
- Advertisement -