ರಾಯಚೂರು: ಆರ್ ಎಸ್ ಎಸ್ ಬಗ್ಗೆ ಅವರಿಗೆ ಗೊತ್ತಿಲ್ಲ. ಇದು ಸಂಸ್ಕಾರ ಕಲಿಸುತ್ತೇ ಅನ್ನೋದು ಅವರಿಗೆ ಗೊತ್ತಿಲ್ಲ. ಎಲ್ಲಾ ಜಾತಿ, ಧರ್ಮದವರನ್ನು ಪ್ರೀತಿಯಿಂದ ಕಾಣುವ ಆರ್ ಎಸ್ ಎಸ್ ದೇಶವನ್ನು ಕಟ್ಟುವ ಕೆಲಸ ಮಾಡುತ್ತಿದೆ. ಆದರೂ ಸಹ ಇದರ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಒಂದೆಡೆ ಮಾಜಿ ಪ್ರಧಾನಿ ದೇವೇಗೌಡರು ಆರ್ ಎಸ್ ಎಸ್ ಹೊಗಳುತ್ತಾರೆ. ಆದರೆ ಮತ್ತೊಂದೆಡೆ ಅವರ ಪುತ್ರ ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಆರ್ ಎಸ್ ಎಸ್ ಬಗ್ಗೆ ಮಾತನಾಡುತ್ತಾರೆ. ಸಿದ್ದರಾಮಯ್ಯ ಆರ್ ಎಸ್ ಎಸ್ ನದ್ದು ತಾಲಿಬಾನಿ ಸಂಸ್ಕೃತಿ ಅಂತಾರೆ. ಆದ್ರೆ ಕಾಂಗ್ರೆಸ್ ಆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದರೆ, ಆಫ್ಘಾನಿಸ್ತಾನದ ಪರಿಸ್ಥಿತಿ ಕರ್ನಾಟಕದಲ್ಲಿ ಆಗುತ್ತಿತ್ತು ಅಂತ ಶ್ರೀರಾಮುಲು ಟಾಂಗ್ ನೀಡಿದ್ದಾರೆ.
ಇನ್ನು ಆರ್ ಎಸ್ಎಸ್ ಇರೋದಕ್ಕೆ ನಮ್ಮ ದೇಶ ಸುರಕ್ಷಿತವಾಗಿದೆ, ಹೀಗಾಗಿ ಇಂಥಹ ಸಂಘಟನೆ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ ಅಂತ ಶ್ರೀರಾಮುಲು ಕಿಡಿ ಕಾರಿದ್ರು.
ಅನಿಲ್ ಕುಮಾರ್, ಕರ್ನಾಟಕ ಟಿವಿ-ರಾಯಚೂರು