ಸಕಾಲ ಯೋಜನೆಯಡಿಯ ಅರ್ಜಿಗಳ ವಿಲೇವಾರಿ ತೀವ್ರ ವಿಳಂಬ ಹಿನ್ನೆಲೆ ಸಚಿವ ಸುರೇಶ್ ಕುಮಾರ್ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಕಾಲ ಯೋಜನೆ ಪರಿಶೀಲನೆ ನಡೆಸಿದ ಸುರೇಶ್ ಕುಮಾರ್ ಜಿಲ್ಲಾಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ್ರು.
ಅಧಿಕಾರಿಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ
ಪ್ರತಿ ತಿಂಗಳು ಸಕಾಲದ ಪ್ರಗತಿ ಪರಿಶೀಲನೆ ಮಾಡಲು ಸುರೇಶ್ ಕುಮಾರ್ ನಿರ್ಧಾರಿಸಿದ್ದು ಸಕಾಲ ಸೇವೆ ದೊರಕುತ್ತಿಲ್ಲ ಎಂದು ದೂರು ಬಂದರೆ ಅಧಿಕಾರಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಅಲ್ಲದೇ ಅಧಿಕಾರಿಗಳಿಗೆ 7 ಸೂಚನೆ ನೀಡಿದ್ರು.
ಯೋಜನೆಯ ಕುರಿತಂತೆ ಎಲ್ಲಾ ತಾಲ್ಲೂಕು, ಜಿಲ್ಲಾ, ರಾಜ್ಯ ಮಟ್ಟಗಳ ಕಛೇರಿಗಳಲ್ಲಿ ಅಗತ್ಯ ಪ್ರಚಾರ ದೊರಕುವ ನಿಟ್ಟಿನಲ್ಲಿ ಪ್ರಕಟಣೆಗಳನ್ನು ಹೊರಡಿಸಬೇಕು
ಸಕಾಲ ಸೇವೆಗಳ ಸಮನ್ವಯ ಸಮಿತಿಗಳು ಸಮರ್ಪಕವಾಗಿ ಕೆಲಸ ಮಾಡಬೇಕು
ಮುಂದಿನ ದಿನಗಳಲ್ಲಿ, ಎಲ್ಲಾ ಜಿಲ್ಲಾಡಳಿತಗಳ ಸಕಾಲ ಕಾರ್ಯವನ್ನು ಪರಾಮರ್ಶೆ ಮಾಡಲಾಗುವುದು
ಪ್ರತಿ ಮಾಹೆಯೂ ಕಡೆಯ ಮೂರು ಶ್ರೇಣಿ ಹೊಂದಿದ ಕಛೇರಿಗಳ ಕುರಿತಂತೆ ಗಂಭೀರ ಶಿಸ್ತು ಕ್ರಮಕ್ಕೆ ಆಲೋಚಿಸಲಾಗುವುದಲ್ಲದೇ, ಮೊದಲ ಮೂರು ಶ್ರೇಣಿಯ ಆಡಳಿತಗಳನ್ನು ಅಭಿನಂದಿಸಲಾಗುವುದು
ದಂಡ ವಸೂಲಾತಿಯನ್ನು ಸೇವೆ ನೀಡಲು ವಿಳಂಬ ಮಾಡುವ ಅಧಿಕಾರಿಯ ಹೆಚ್ಆರ್ ಎಂಎಸ್ ತಂತ್ರಾಂಶದಲ್ಲಿ ಸೇರ್ಪಡಿಸಲಾಗುವುದು
ಸರ್ಕಾರದ ಇ- ಆಫೀಸ್ ತಂತ್ರಾಂಶದೊಂದಿಗೆ ಸಕಾಲ ಯೋಜನೆಯನ್ನು ಸಮೀಕರಿಸಲಾಗುವುದು
ಪ್ರತಿ ಮಾಹೆ ಜಿಲ್ಲಾವಾರು ಶ್ರೇಣಿ ವರದಿಯನ್ನು ಪ್ರಕಟಿಸಿ ಸಾರ್ವಜನಿಕರ ಗಮನಕ್ಕೆ ತರಲಾಗುವುದು.