ಮಂಡ್ಯ: ಅಭಿವೃದ್ಧಿ ಕೆಲಸ ಮಾಡಿಸಿ ಅಂತ ಕೇಳಿದ್ದಕ್ಕೆ ಗ್ರಾಮಸ್ಥರನ್ನೇ ಸಚಿವ ಡಿ.ಸಿ ತಮ್ಮಣ್ಣ ತರಾಟೆಗೆ ತೆಗೆದುಕೊಂಡ ಘಟನೆ ಮದ್ದೂರಿನಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆ ಮದ್ದೂರಿನ ಮದ್ದೂರಮ್ಮ ಕೆರೆಯಲ್ಲಿ ಬಹುಗ್ರಾಮ ಕುಡಿಯೋ ನೀರಿನ ಯೋಜನೆ ಕಾಮಗಾರಿ ಉದ್ಘಾಟನಾ ಕಾರ್ಯಕ್ರಮ ವೇಳೆ ಗ್ರಾಮಸ್ಥರನ್ನು ಡಿ.ಸಿ ತಮ್ಮಣ್ಣ ತರಾಟೆಗೆ ತೆಗೆದುಕೊಂಡಿದ್ದಾರೆ. ಉದ್ಘಾಟನೆ ವೇಳೆ ಅಲ್ಲಿ ಸೇರಿದ್ದ ಗ್ರಾಮಸ್ಥರು ರಸ್ತೆ ಮತ್ತು ಚರಂಡಿ ಸಮಸ್ಯೆ ಹೇಳಿ ಅಭಿವೃದ್ಧಿ ಪಡಿಸಿ ಅಂತ ಕೇಳಿದ್ದಕ್ಕೆ ಸಚಿವ ತಮ್ಮಣ್ಣ ಏಕಾಏಕಿ ಸಿಟ್ಟಾಗಿಬಿಟ್ರು. ಅಭಿವೃದ್ಧಿ ಕೆಲಸಗಳಿಗೆ ನಾವು ಬೇಕು, ಮತ ಹಾಕೋದಕ್ಕೆ ಅವ್ರು ಬೇಕಾ, ನಿಮಗೆ ನಾಚಿಗೆಯಾಗಲ್ವಾ ಅಂತ ತಮಗೆ ಮತ ಹಾಕದ್ದಕ್ಕೆ ಜನರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ರು.
ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ನಿಖಿಲ್ ಗೌಡ ಸೋತಿರೋದನ್ನು ಅರಸಿಕೊಳ್ಳಲಾಗದೆ ಈ ರೀತಿ ಸಚಿವರು ಆಕ್ರೋಶಭರಿತರಾಗಿದ್ದಾರೆ. ಆದ್ರೆ ಜನಪ್ರತಿನಿಧಿಯಾಗಿ ಸಚಿವರೊಬ್ಪರು ಈ ರೀತಿ ದ್ವೇಷದ ರಾಜಕಾರಣ ಮಾಡುತ್ತಿರೋದು ಸರಿಯಲ್ಲ ಇದರಿಂದ ಅಭಿವೃದ್ಧಿ ಸಾಧ್ಯವೇ ಇಲ್ಲ ಅನ್ನೋ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಬಳ್ಳಾರಿಯಲ್ಲಿ 2 ವಾರ ಮಾತ್ರ ಜನಾರ್ದನ ರೆಡ್ಡಿ ಸಂಭ್ರಮ…! ಮಿಸ್ ಮಾಡದೇ ಈ ವಿಡಿಯೋ ನೋಡಿ.