ಅಬಕಾರಿ ಸಚಿವರಾಗಿರುವ ಆರ್.ಬಿ.ತಿಮ್ಮಾಪುರ ಅವರು ಲಂಚ ಪಡೆದಿದ್ದಾರೆಂಬ ಆರೋಪ ಕೇಳಿ ಬಂದಿದ್ದು, ದಕ್ಕೆ ತಕ್ಕಹಾಗೆ ಆಡಿಯೋ ಕೂಡ ವೈರಲ್ ಆಗಿದೆ. ಆದರೂ ಯಾಕೆ ರಿಸೈನ್ ಪಡೆದಿಲ್ಲವೆಂದು ಬಿಜೆಪಿ ನಾಯಕರು ಪ್ರಶ್ನಿಸಿದ್ದಾರೆ.
ಬಳ್ಳಾರಿಯಲ್ಲಿಂದು ಪ್ರೆಸ್‌ಮೀಟ್ ನಡೆಸಿ ಮಾತನಾಡಿರುವ ಮಾಜಿ ಸಚಿವ ಶ್ರೀರಾಮುಲು, ರಾಜಣ್ಣ ತಪ್ಪು ಮಾಡಿದ್ದರೆಂದು ಆರೋಪಿಸಿ, ಅವರನ್ನು ರಾತ್ರೋ ರಾತ್ರಿ ಸಚಿವ ಸ್ಥಾನದಿಂದ ಕೆಳಗಿಳಿಸಿದ್ರಿ. ಆದರೆ ಅದಕ್ಕೇನೂ ಪ್ರೂಫ್ ಕೂಡ ಸಿಕ್ಕಿರಲಿಲ್ಲ. ಆದರೆ ತಿಮ್ಮಾಪುರ್ ಕೇಸ್‌ನಲ್ಲಿ ಲಂಚ ಕೇಳಿದ ಆಡಿಯೋ ಸಾಕ್ಷಿ ಇದೆ. ಅವರ ಪುತ್ರ ಇದರಲ್ಲಿ ಭಾಗಿಯಾಗಿದ್ದಾರೆಂದು ತಿಳಿದಿದೆ. ಆದರೂ ಏಕೆ ತಿಮ್ಮಾಪುರ ಅವರ ಬಳಿ ಇದುವರೆಗೂ ರಾಜೀನಾಮೆ ಕೇಳಲಿಲ್ಲ ಎಂದು ಶ್ರೀರಾಮುಲು ಪ್ರಶ್ನಿಸಿದ್ದಾರೆ.
ಆಡಿಯೋ ಇದ್ದರೂ, ಪುತ್ರನೇ ನೇರವಾಗಿ ಈ ಕೆಲಸದಲ್ಲಿ ಭಾಗಿಯಾಗಿದ್ದಾನೆ ಎಂದು ತಿಳಿದಿದ್ದರೂ, ತಿಮ್ಮಾಪುರ ಅವರು ಅದ್ನು ಪ್ರೂವ್ ಮಾಡಿ ಎನ್ನುತ್ತಿದ್ದಾರೆ. ಹೀಗಾದಾಗ, ಸಚಿವ ಸಂಪುಟದಲ್ಲಿ ಸಿಎಂ ಕುರ್ಚಿಗಾಗಿ ಜಗಳ ನಡೆಯುತ್ತಿದೆ. ಸಿದ್ದರಾಮಯ್ಯನವರು ರಾಹುಲ್ ಗಾಂಧಿ ಬಳಿ ಹೋಗಿ, ಸಚಿವ ಸಂಪುಟ ರಚನೆ ಮಾಡಬೇಕು ಎಂದು ಕೇಳುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಸಂಪುಟ ರಚನೆ ಬೇಡ. ನನ್ನನ್ನು ಸಿಎಂ ಮಾಡಿ ಎಂದು ಕೇಳುತ್ತಿದ್ದಾರೆ.
ಸಚಿವರಿಗೆ ಹೇಳುವವರು ಕೇಳುವವರು ಇಲ್ಲದಂತಾಗಿದೆ. ಹಾಗಾಗಿ ಹಲವು ಸಚಿವರು ಭ್ರಷ್ಟಾಚಾರದಲ್ಲಿ ನಿರತರಾಗಿದ್ದಾರೆ. ಹಾಗಾಗಿ ಇದರ ಬಗ್ಗೆ ತನಿಖೆ ಮಾಡಿ, ಆರ್.ಬಿ.ತಿಮ್ಮಾಪುರ್ ಅವರ ಬಳಿ ರಾಜೀನಾಮೆ ಪಡೆಯಬೇಕು ಎಂದು ಶ್ರೀರಾಮುಲು ಆಗ್ರಹಿಸಿದ್ದಾರೆ.




