Tumakuru News: ತುಮಕೂರು: ತುಮಕೂರು ತಾಲೂಕು ಕಚೇರಿಗೆ ಕಂದಾಯ ಸಚಿವ ಕೃಷ್ಣಭೈರೇಗೌಡ ಧಿಡೀರ್ ಭೇಟಿ ನೀಡಿದ್ದು, ಸಚಿವರನ್ನು ಕಂಡು ಅಧಿಕಾರಿಗಳು ಕಕ್ಕಾಬಿಕ್ಕಿಯಾಗಿದ್ದಾರೆ.
ಬೆಂಗಳೂರಿನಿಂದ ಹಾಸನಕ್ಕೆ ತೆರಳುವಾಗ, ಮಾರ್ಗಮಧ್ಯೆ ತುರುವೆಕೆರೆ ತಾಲೂಕಿನ ಕಚೇರಿಗೆ ಸಚಿವರು ಭೇಟಿ ನೀಡಿದ್ದಾರೆ. ಇನ್ನು ಸಚಿವರ ಮುಂದೆ ರೈತರು ಮತ್ತು ಸಾರ್ವಜನಿಕರು ಸಾಲು ಸಾಲು ಸಮಸ್ಯೆ ಹೇಳಿಕೊಂಡಿದ್ದಾರೆ. ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಜಮೀನಿನಲ್ಲಿ ಓಡಾಡಲು ಸರಿಯಾಗಿ ರಸ್ತೆ ಇಲ್ಲ. ಹೀಗೆ ರೈತರು, ಸಾರ್ವಜನಿಕರು ಸಚಿವರ ಮುಂದೆ ಸಮಸ್ಯೆ ಹೇಳಿಕೊಂಡಿದ್ದು, ಕೃಷ್ಣಭೈರೇಗೌಡ ಎಲ್ಲರ ಸಮಸ್ಯೆ ಆಲಿಸಿದ್ದಾರೆ.
ಅಲ್ಲದೇ, ಎಲ್ಲರೆದುರೇ, ಅಧಿಕಾರಿಗೆ ಸಚಿವರು ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ವೇಳೆ ತಾನು 5 ಬಾರಿ ನೋಟೀಸ್ ನೀಡಿದ್ದೇನೆ ಎಂದು ಹೇಳಿದ ತಹಶೀಲ್ದಾರರಿಗೆ, ತಿರುಗೇಟು ನೀಡಿದ ಸಚಿವರು, ಐದು ನೋಟಿಸ್ ನೀಡಿ ಇನ್ನೂ ಏತಕ್ಕೆ ಕಾಯ್ತಾ ಇದ್ದೀರಿ ಎಂದು ಪ್ರಶ್ನಿಸಿದ್ದಾರೆ. ಕೂಡಲೇ ದಾರಿಗೆ ತೆರವುಗೊಳಿಸುವಂತೆ ತಹಶಿಲ್ದಾರ್ ರೇಣುಕುಮಾರ್ಗೆ ಸೂಚನೆ ನೀಡಿದ್ದು, ಬಳಿಕ ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಿ ಸಚಿವ ಕೃಷ್ಣಭೈರೇಗೌಡರು ಹಾಸನದ ಕಡೆಗೆ ಪ್ರಯಾಣ ಬೆಳೆಸಿದ್ದಾರೆ.
ಧಾರವಾಡದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಸಾವಿರಾರು ಜನ ಅನೇಕ ತಿಂಗಳಿಂದ ರೇಷನ್ ಪಡೆದೇ ಇಲ್ಲ!
ಉಂಡ ಮನೆಗೆ ದ್ರೋಹ ಜ್ಯುವೆಲ್ಲರಿ ಶಾಪ್ನಿಂದ ಕೆಜಿ ಕೆಜಿ ಚಿನ್ನ, ಬೆಳ್ಳಿ ಕದ್ದ ಮನೆ ಕೆಲಸದಾಳು