Sunday, April 13, 2025

Latest Posts

‘ಗೃಹ ಸಚಿವ ಅಲ್ಲ, ಕ್ಲೀನ್ ಚಿಟ್ ಸಚಿವ’- ಪ್ರಿಯಾಂಕ್ ಖರ್ಗೆ ಟೀಕೆ

- Advertisement -

ಬೆಂಗಳೂರು: ಕೇಂದ್ರ ಗೃಹ ಖಾತೆ ಸಚಿವರಾಗಿ ಅಮಿತ್ ಶಾ ಅಧಿಕಾರ ಸ್ವೀಕರಸಿದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.

ಅಮಿತ್ ಶಾ ಗೆ ಗೃಹ ಖಾತೆ ನೀಡಲಾಗಿದೆ. ಹೀಗಾಗಿ ಗೃಹ ಇಲಾಖೆ ಅನ್ನೋ ಬದಲು ಅದನ್ನು ಕ್ಲೀನ್ ಚಿಟ್ ಇಲಾಖೆ ಅಂತ ಹೆಸರಿಡಬೇಕು ಅಂತ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡೋ ಮೂಲಕ ವ್ಯಂಗ್ಯವಾಡಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಆಡಳಿತಾವಧಿಯಲ್ಲಿ ನಡೆದಿದ್ದ 35,000 ಕೋಟಿ ಅಕ್ರಮ ಗಣಿಕಾರಿಕೆ ಹಗರಣದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ನಾಯಕರ ಮೇಲೆ ತನಿಖೆ ನಡೆಯುತ್ತಿದೆ. ಈ ವೇಳೆ ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದು ಅಮಿತ್ ಶಾ ಗೃಹ ಸಚಿವರಾಗಿರೋದಕ್ಕೆ ರಾಜ್ಯ ಬಿಜೆಪಿ ನಾಯಕರಿಗೆ ಈ ಹಗರಣದಲ್ಲಿ ಕ್ಲೀನ್ ಚಿಟ್ ಕೊಟ್ಟರೂ ಕೊಡಬಹುದು ಅನ್ನೋ ದೃಷ್ಟಿಯಿಂದ ಪ್ರಿಯಾಂಕ್ ಖರ್ಗೆ ಈ ರೀತಿ ಟ್ವೀಟ್ ಮಾಡಿದ್ದಾರೆ.

ಸಿದ್ದು ಬಗ್ಗೆ ಬಿಎಸ್ವೈ ರೋಚಕ ಸತ್ಯ…! ಮಿಸ್ ಮಾಡದೇ ಈ ವಿಡಿಯೋ ನೋಡಿ

- Advertisement -

Latest Posts

Don't Miss