ಸಾವಿನಿಂದ ಪಾರಾದ ಬಾಲಕ: ನಿಜಕ್ಕೂ ಮೈ ಜುಮ್ಮೆನ್ನಿಸುವ ಅಪಘಾತದ ದೃಶ್ಯ..

ಹಲವರು ಹಲವು ಬಾರಿ ಸಾವಿನ ದವಡೆಯಿಂದ ಪಾರಾಗಿ ಬಂದಿರ್ತಾರೆ. ಅದರಲ್ಲೂ ಅಪಘಾತದಿಂದ ತಪ್ಪಿಸಿಕೊಂಡು ಬಂದವರ ಹಲವು ವೀಡಿಯೋಗಳನ್ನ ನಾವು ನೀವು ನೋಡಿರ್ತೀವಿ. ಅಂಥದ್ದೇ ಒಂದು ವೀಡಿಯೋ ವೈರಲ್ ಆಗಿದ್ದು, ಬಾಲಕನೋರ್ವ ಎರಡು ಬಾರಿ, ಸಾವಿನ ದವಡೆಯಿಂದ ತಪ್ಪಿಸಿಕೊಂಡು ಬಂದ ದೃಶ್ಯ ನೋಡಿದ್ರೆ, ನಿಜಕ್ಕೂ ನಿಮ್ಮ ಮೈ ಜುಮ್ಮೆನ್ನುತ್ತೆ.

ಈ ಘಟನೆ ಕೇರಳದಲ್ಲಿ ನಡೆದಿದ್ದು, 8 ವರ್ಷದ ಬಾಲಕ, ಬೈಸಿಕಲ್‌ನಲ್ಲಿ ಸ್ಪೀಡಾಗಿ ಬಂದು, ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದಿದ್ದಾನೆ. ಪುಣ್ಯಕ್ಕೆ ಅವನು ದೂರ ಹೋಗಿ ಬಿದ್ದಿದ್ದು, ಅವನ ಬೈಸಿಕಲ್ ಬಸ್ ಕೆಳಗಡೆ ನಜ್ಜುಗುಜ್ಜಾಗಿದೆ. ಸ್ಥಳದಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು, ನಿಜಕ್ಕೂ ಭಯಾನಕವಾಗಿದೆ. ಡಿಎಂಕೆ ಪಕ್ಷದ ಸದಸ್ಯರಾಗಿರುವ ಬಾಲಾ ಎಂಬುವರು ಈ ವೀಡಿಯೋವನ್ನ ತಮ್ಮ ಟ್ವೀಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದು, ನಿಜಕ್ಕೂ ಮಿರಾಕಲ್ ನಡೆದಿದೆ ಎಂದಿದ್ದಾರೆ.

ಇನ್ನು ಈ ಬಗ್ಗೆ ತರಹೇವಾರಿ ಕಾಮೆಂಟ್ಸ್ ಬಂದಿದ್ದು, ನಾವು ನಮ್ಮ ಮಕ್ಕಳಿಗೆ ಸಣ್ಣದಿಂದಲೇ ಟ್ರಾಫಿಕ್ ರೂಲ್ಸ್ ಬಗ್ಗೆ ಹೇಳಿಕೊಡಬೇಕು. ಇದು ನಿಜವಾಗಿಯೂ ಭಯಾನಕವಾಗಿದೆ ಎಂದಿದ್ದಾರೆ. ಇನ್ನೊಬ್ಬರು ಈ ಬಗ್ಗೆ ಕಾಮೆಂಟ್ ಮಾಡಿದ್ದು, ಈ ಬಾಲಕ ತುಂಬಾ ಅದೃಷ್ಟವಂತ, ಸ್ವಲ್ಪದರಲ್ಲೇ ಪಾರಾಗಿ ಜೀವ ಉಳಿಸಿಕೊಂಡಿದ್ದಾನೆ ಎಂದಿದ್ದಾರೆ.

ಇನ್ನು ಕಳೆದ ರವಿವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಾರ್ಚ್ 20ರಂದು 4.30ಕ್ಕೆ ಕೇರಳದ ಕಣ್ಣೂರಿನ ಚಾರುಕ್ಕಲಾ ಎಂಬಲ್ಲಿ ಈ ಘಟನೆ ನಡೆದಿದೆ ಎಂದು, ಸ್ಥಳೀಯ ಮಾಧ್ಯಮಗಳು ತಿಳಿಸಿದೆ. ಬಾಲಕನಿಗೆ ಅವರ ಕುಟುಂಬದವರು ಇತ್ತೀಚೆಗೆ ಈ ಸೈಕಲನ್ನ ಗಿಫ್ಟಾಗಿ ನೀಡಿದ್ದು, ಅವನಿಗೆ ಸರಿಯಾಗಿ ಸೈಕಲ್ ಓಡಿಸಲು ಬಾರದ ಕಾರಣ ಹೀಗಾಗಿದೆ ಎಂದು ಹೇಳಲಾಗಿದೆ..

About The Author