ಸಿದ್ದರಾಮಯ್ಯ (Siddaramaiah) ಹಾಗೂ ಡಿಕೆ ಶಿವಕುಮಾರ್ (DK Shivakumar) ಅವರ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ (H D Kumaraswamy) ನೀಡಿರುವ ಹೇಳಿಕೆಗೆ ಶಾಸಕ ಜಮೀರ್ ಅಹಮದ್ ಖಾನ್ (mla Zameer Ahmed Khan) ತಿರುಗೇಟು ನೀಡಿದ್ದಾರೆ. ಎಚ್ ಡಿ ಕುಮಾರಸ್ವಾಮಿ, ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರಿಗೆ ಸಿಎಂ ಆಗಬೇಕು ಎಂಬುವ ಹುಚ್ಚು ಇದೆ ಎಂದು ಹೇಳಿರುವ ಹೇಳಿಕೆಗೆ ಶಾಸಕ ಜಮೀರ್ ಅಹ್ಮದ್ ಎಲ್ಲರಿಗೂ ಸಿಎಂ ಆಗುವ ಹುಚ್ಚು ಇರುತ್ತೆ, ನಿಮಗೆ ಯಾವ ಹುಚ್ಚು ಇರೋದು, ನಿಮಗೂ ಅದೇ ಹುಚ್ಚು ಇದೆ, ನಿಮಗೇನು ಸೇವೆ ಮಾಡಬೇಕು ಅಂತಾ ಇದಿಯಾ ಎಂದು ತಿರುಗೇಟು ನೀಡಿದ್ದಾರೆ. ಇನ್ನು ಸಿಎಂ ಇಬ್ರಾಹಿಂ (CM Ibrahim) ಪಕ್ಷ ಬಿಡುತ್ತಾರೆ ಎಂಬುವ ವಿಷಯದ ಬಗ್ಗೆ ಮಾತನಾಡಿರುವ ಅವರು ಸಿಎಂ ಇಬ್ರಾಹಿಂ ಪಕ್ಷ ಬಿಡುವುದಿಲ್ಲ ಅವರನ್ನು ನಾನು ಭೇಟಿ ಮಾಡುತ್ತೇನೆ ಎಂದು ಹೇಳಿದ್ದಾರೆ. ಇನ್ನು ಸಿಎಂ ಇಬ್ರಾಹಿಂ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಬರಲಿದೆ ಎಂದು ನೀಡಿರುವ ಹೇಳಿಕೆಗೆ ಯಾರು ಯಾವ ಸ್ಥಾನಕ್ಕೆ ಬರುತ್ತಾರೆ ಎಂಬುವುದನ್ನು ಮತದಾರರು ನಿರ್ಧಾರ ಮಾಡುತ್ತಾರೆ ಎಂದು ಹೇಳಿದ್ದಾರೆ.

