Tuesday, April 15, 2025

Latest Posts

ಆಂಬುಲೆನ್ಸ್ ಓಡಿಸಿದ ಶಾಸಕ ನಿರಂಜನ್ ಕುಮಾರ್..!

- Advertisement -


ಗುಂಡ್ಲುಪೇಟೆ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಆಂಬುಲೆನ್ಸ್ ಸೇವೆಗೆ ಇಂದು ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಚಾಲನೆ ನೀಡಿದರು.
ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ 124 ಆಂಬುಲೆನ್ಸ್ ನೀಡಲಾಗಿದ್ದು, ಗುಂಡ್ಲುಪೇಟೆ ತಾಲೂಕಿಗೂ ಆಂಬುಲೆನ್ಸ್ ಸೇವೆ ಲಭಿಸಿದೆ. ಹೀಗಾಗಿ ಆರೋಗ್ಯ ಇಲಾಖೆ ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಅಂತ ಶಾಸಕ ನಿರಂಜನ್ ಕುಮಾರ್ ಹೇಳಿದ್ರು. ಇನ್ನು ಕೋವಿಡ್ ಸಮಯದಲ್ಲಿ ಸರ್ಕಾರವು ಆರೋಗ್ಯ ಕ್ಷೇತ್ರದಲ್ಲಿ ಹಲವು ಸುಧಾರಣೆ ತರುವ ನಿಟ್ಟಿನಲ್ಲಿ ಈ ರೀತಿಯ ಹೈಟೆಕ್ ಆಂಬುಲೆನ್ಸ್ ಒದಗಿಸಿದೆ. ಹೀಗಾಗಿ ಈ ನೂತನ ವಾಹನದಲ್ಲಿ ವೆಂಟಿಲೇಟರ್ ವ್ಯವಸ್ಥೆ ಕೂಡ ಇದ್ದು, ಎಂಥಹ ಕಠಿಣ ಸಂದರ್ಭದಲ್ಲೂ ಪ್ರಥಮ ಚಿಕಿತ್ಸೆ ನೀಡಬಲ್ಲ ಪರಿಕರಗಳನ್ನು ಅಳವಡಿಸಲಾಗಿದೆ ಅಂತ ನಿರಂಜನ್ ಕುಮಾರ್ ಹರ್ಷ ವ್ಯಕ್ತಪಡಿಸಿದರು.
ಇನ್ನು ಆಂಬುಲೆನ್ಸನ್ನು ಖುದ್ದು ಶಾಸಕ ನಿರಂಜನ್ ಕುಮಾರ್ ರವರೇ ಸ್ವಲ್ಪ ದೂರ ಡ್ರೈವ್ ಮಾಡಿದ್ದು ವಿಶೇಷವಾಗಿತ್ತು. ಈ ವೇಳೆ ಆಂಬುಲೆನ್ಸ್ ಸಿಬ್ಬಂದಿ, ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಮಂಜುನಾಥ್, ಪುರಸಭಾ ಅಧ್ಯಕ್ಷ ಪಿ.ಗಿರೀಶ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು

ಪ್ರಸಾದ್, ಕರ್ನಾಟಕ ಟಿವಿ- ಚಾಮರಾಜನಗರ

- Advertisement -

Latest Posts

Don't Miss